ರಾಜ್ಯ ಸುದ್ದಿಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಾಗಲಕೋಟೆಬಿಸಿನೆಸ್ ಕನೆಕ್ಟ್ರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಕೋಟೆ ನಾಡಿನ ಜನತೆಗೆ ಅಂತೂ ಇಂತೂ ಕನ್ನಡಮ್ಮನ ತೇರು ಎಳೆಯಲು ದಿನಾಂಕ ಸಿಕ್ತು..!

ಮೂರು ದಿನಗಳ‌‌ ಕಾಲ ನಡೆಯಲಿದೆ ೧೦ ನೇ ಜಿಲ್ಲಾ ಕಸಾಪ ಸಮ್ಮೇಳನ

Share News

Janadhwani News Gajendrgad ಜನಧ್ವನಿ ಕನ್ನಡ ಸುದ್ದಿಮೂಲ: ಈಗಾಗಲೇ ಹಲವಾರು ಬಾರಿ ಗದಗ ಜಿಲ್ಲೆಯ ಹತ್ತನೇ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕೆಂದು ಹಲವಾರು ದಿನಾಂಕಗಳು ಹಲವಾರು ಕಾರಣಗಳಿಂದ ಮುಂದೋಡಿತ್ತು, ಆದರೆ ಈಗ ಕೋಟೆ ನಾಡಿನ ಸುತ್ತಮುತ್ತಲಿನ ಜನರಿಗೆ ಕನ್ನಡಮ್ಮನ ತೇರನ್ನು ಎಳೆಯಲು ದಿನಾಂಕ ಸಿಕ್ಕೇಬಿಡ್ತು.

ಹೌದು ಇದೇ ತಿಂಗಳ 19,20,21ರಂದು ಮೂರು ದಿನಗಳ ಕಾಲ ಕೋಟೆ ನಾಡಿನಲ್ಲಿ ಕನ್ನಡದ ಕಹಳೆ ಮೊಳಗಲಿದೆ ಅದರ ಪೂರ್ವಭಾವಿ ಸಭೆಯು ನಗರದ ಮೈಸೂರು ಮಠದಲ್ಲಿ ನಡೆಯಿತು‌.

ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ಜನವರಿಯ 19 20 21ರಂದು ಜರಗುವ ಗದಗ ಜಿಲ್ಲಾ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಾ ಕನ್ನಡ ಮನಸ್ಸುಗಳು ಅದನ್ನು ಯಶಸ್ವಿಗೊಳಿಸಬೇಕು ಕನ್ನಡಮ್ಮನ ತೇರನ್ನ ಋಣ ತಾಲೂಕಿನ ಹೆಸರನ್ನ ದೆಹಲಿಗೆ ಕೊಂಡು ಹೋದ ದಿವಂಗತ ಅಂದಾನಪ್ಪ ದೊಡ್ಡ ಮೇಟಿ ಅವರ ಮನೆಯಿಂದ ಕನ್ನಡದ ಜ್ಯೋತಿಯನ್ನ ಹಾಗೂ ತೇರನ್ನ ಆರಂಭಿಸಿ ನಂತರ ವಿವಿಧ ಗ್ರಾಮಗಳಿಗೆ ತೆರಳಿ ಬಳಿಕ ಮೈಸೂರು ಮಠಕ್ಕೆ ಆಗಮಿಸಿ ಬಳಿಕ ವೇದಿಕೆ ತಲುಪಲಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಶಾಸಕರು ಸುಮಾರು ಹತ್ತಕ್ಕೂ ಹೆಚ್ಚು ಕಲಾತಂಡಗಳನ್ನು ಸಮ್ಮೇಳನಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ ಇದರ ಜೊತೆಗೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಸಂಸ್ಕೃತಿಕ ಮೆರಗನ್ನು ನೀಡುವ ಆಶಯ ಹೊಂದಿದ್ದೇವೆ. ಅನೇಕ ವಿಚಾರಧಾರೆಗಳು ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಐತಿಹಾಸಿಕ ಪೌರಾಣಿಕ ವೈಜ್ಞಾನಿಕ ಹೀಗೆ ಹತ್ತು ಹಲವು ಅಂಶಗಳು ಒಳಗೊಂಡಿರುವ ವಿಚಾರಗೋಷ್ಠಿಗಳನ್ನು ಕೂಡ ಕವಿಘೋಷ್ಟಿಗಳನ್ನು ಕೂಡ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ಇನ್ನು ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು ವಾಸ್ತು ಚಿತ್ರಗಳಿಗೆ ಚಿತ್ರ ಮಳಿಗೆಗಳು ಹೀಗೆ ಅನೇಕ ಮಳಿಗೆಗಳು ಇರಲಿವೆ. ಮೆರವಳಗಿಯನ್ನ ಮೈಸೂರು ಮಠದಿಂದ ಪ್ರಾರಂಭ ಮಾಡಿ ವೇದಿಕೆಯ ತಲುಪುವ ಯಾತ್ರೆಯಲ್ಲಿ ಮಹಿಳೆಯರು ಮಕ್ಕಳು ಪುಸ್ತಕಗಳನ್ನ ತಮ್ಮ ತಲೆಯ ಮೇಲೆ ಹೊತ್ತು ಸಾಗಿದರೆ ಸಾಹಿತ್ಯಕ್ಕೆ ಜನರನ್ನ ಪ್ರೇರಣೆಗೊಳಿಸಿದಂತಾಗುತ್ತದೆ. ಇದಕ್ಕೆ ಎಲ್ಲಾ ಕನ್ನಡ ಮನಸುಗಳು ನೀಡಿರುವಂತಹ ಜವಾಬ್ದಾರಿಗಳನ್ನ ಸರಿಯಾಗಿ ನಿಭಾಯಿಸಿ ಕನ್ನಡಮ್ಮನ ತೇರನ್ನ ಸಮ್ಮೇಳನವನ್ನ ಯಶಸ್ವಿಗೊಳಿಸೋಣ ಇದಕ್ಕೆ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ಬಳಿಕ ಕನ್ನಡ ಪರ ಹೋರಾಟಗಾರರಾದ ಎಚ್.ಎಸ್.ಸೊಂಪೂರ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನವೂ ಕೇವಲ ಅಧಿಕಾರಿಗಳು, ಶಿಕ್ಷಕರ ವರ್ಗದವರಿಗೆ ಸೀಮಿತರಾಗದೆ, ಸಾರ್ವಜನಿಕರಿಗೂ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ನಗರದಲ್ಲಿನ ಎಲ್ಲಾ ಜನತೆಗೆ ಸಮ್ಮೇಳನದ ಬಗ್ಗೆ ತಿಳಿ ಹೇಳಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು‌.

ಬಳಿಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಂಜುಳಾ ರೇವಡಿ ಮಾತನಾಡಿ ೧೦ ನೇ ಜಿಲ್ಲಾ‌ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗಾಗಿಯೇ ಒಂದು ಗೋಷ್ಟಿಗಳನ್ನು, ವೇದಿಕೆಯನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಆಗುಹೋಗುವ ಕುರಿತು ಮಹಿಳೆಯರಿಂದಲೇ ಚರ್ಚೆ ನಡೆಯಲಿ ಎಂದರು.

ಬಳಿಕ ತಾಲೂಕಾ ಕಸಾಪ ಅಧ್ಯಕ್ಷ ಅಮರೇಶ ಗಾಣಗೇರ ಮಾತನಾಡಿ ಈಗಾಗಲೇ ಈ ಹಿಂದೆ ಸಭೆಯಲ್ಲಿ ನಿರ್ಣಯ ಮಾಡಿದ ಸಮಿತಿಗಳು ಮುಂದುವರೆಯುತ್ತವೆ. ಕೆಲ ಬದಲಾವಣೆ ಮಾಡಲಾಗಿದ್ದು, ಶಾಸಕರು, ಜಿಲ್ಲಾ ಅದ್ಯಕ್ಷರ ಅಪ್ಪಣೆಯಂತೆ, ಆಶಯದಂತೆ ನಾವೆಲ್ಲರೂ ಕನ್ನಡಮ್ಮ ಅದ್ದೂರಿ ಮೆರವಣಿಗೆ,ಜಾತ್ರ, ಸಮ್ಮೇಳನವನ್ನು ಯಶಸ್ಸುಗೊಳಿಸೋಣ. ಗಜೇಂದ್ರಗಡದಲ್ಲಿ ನಡೆಯುವ ಸಮ್ಮೇಳನವೂ ಮಾದರಿ‌ ಸಮ್ಮೇಳನ ಆಗಲಿ ಅದಕ್ಕೆ ಎಲ್ಲಾ ಕನ್ನಡ ಮನಸ್ಸುಗಳು ಸಹಕಾರ ನೀಡಲಿ ಎಂದರು.

ಬಳಿಕ ಗ್ರಂಥಪಾಲಕ ಸುರೇಶ ಪತ್ತಾರ, ಬಿ.ಸಿ.ಅಂಗಡಿ, ಸತ್ಯಮಿಥ್ಯ ಪತ್ರಿಕೆಯ ಸಂಪಾದಕರಾದ ಚನ್ನು ಸಮಗಂಡಿ, ಎಸ್.ಎನ್.ಬಡಿಗೇರ, ನಿಂಗಪ್ಪ ಕಾಶಪ್ಪನವರ, ಕಳಕಯ್ಯ ಸಾಲಿಮಠ ಸೇರಿದಂತೆ ಅನೇಕರು ಅಭಿಪ್ರಾಯ ಹಂಚಿಕೊಂಡರು.

ಈ ಪೂರ್ವಭಾವಿ ಸಭೆಯಲ್ಲಿ ಹುಚ್ಚಪ್ಪ ಹಾವೇರಿ, ಅರವಿಂದ ಕವಡಿಮಟ್ಟಿ, ಆರ್‌.ಜಿ.ಮ್ಯಾಕಲ್,

ಶ್ರೀನಿವಾಸ ನೀಲೂರ, ರವೀಂದ್ರ ಕವಡಿಮಟ್ಟಿ, ಬಿ.ಟಿ.ಹೊಸಮನಿ, ರಮಾಕಾಂತ ಕಮತಗಿ ಡಾ.ಮಹಾಂತೇಶ ಅಂಗಡಿ ಸೇರಿದಂತೆ ಕನ್ನಡ ಮನಸ್ಸುಗಳು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button