ಅಧ್ಯಕ್ಷ ಸ್ಥಾನಕ್ಕೆ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಕೋರಧಾನ್ಯಮಠ ನಾಮಪತ್ರ ಸಲ್ಲಿಕೆ
ದಿಢೀರ್ ಪ್ರತ್ಯಕ್ಷರಾದ ಸದಸ್ಯರು; ಹೆಚ್ಚಿದ ಕುತೂಹಲ
ನರೇಗಲ್:
ಸಂಪರ್ಕಕ್ಕೆ ಸಿಗದ ಆರು ಜನ ಸದಸ್ಯರಲ್ಲಿ ಇಬ್ಬರು ಸೋಮವಾರ ಬೆಳಿಗ್ಗೆ 10:40 ಕ್ಕೆ ಪಟ್ಟಣ ಪಂಚಾಯತಿಗೆ ದೌಡಾಯಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಯಲ್ಲಿ ಬಂದ ಬಿಜೆಪಿ ಪಕ್ಷದ ಸದಸ್ಯರಾದ ಫಕೀರಪ್ಪ ಮಳ್ಳಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಿಜೆಪಿ ಪಕ್ಷದ ಸದಸ್ಯರು ಮತ್ತೇ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಯಲ್ಲಿ ಕಾರಿನಲ್ಲಿ ಹೊರಟರು.
ನರೇಗಲ್ ಪ.ಪಂ.ಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ. 2 ರಂದು ನಿಗದಿಯಾದ ಹಿನ್ನೆಲೆ ಹಾಗೂ ಆರು ಜನ ಸದಸ್ಯರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಇಲ್ಲಿವರೆಗೂ ಸಂಪರ್ಕಕ್ಕೆ ಸಿಗದೆ ಇರುವ ಕಾರಣ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ರೋಣ ಸಿಪಿಐ ಎಸ್. ಎಸ್. ಬಿಳಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬಿಡುಬಿಟ್ಟರು.