ಆರೋಗ್ಯ ಇಲಾಖೆಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಹಲವು ದಶಕದಿಂದಲೂ ಅಭಿವೃದ್ಧಿ ಕಾಣದ ಅಂಬೇಡ್ಕರ್ ವೃತ್ತ; ಪುರಸಭೆ ನಿರ್ಲಕ್ಷ್ಯಕ್ಕೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ಖಂಡನೆ

Share News

ಹಲವು ದಶಕದಿಂದಲೂ ಅಭಿವೃದ್ಧಿ ಕಾಣದ ಅಂಬೇಡ್ಕರ್ ವೃತ್ತ; ಪುರಸಭೆ ನಿರ್ಲಕ್ಷ್ಯಕ್ಕೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ಖಂಡನೆ.

ಗಜೇಂದ್ರಗಡದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೂರ್ತಿ ನಿರ್ಮಿಸಲು ಒತ್ತಾಯಿಸಿ ಕ್ರಾಂತಿಸೂರ್ಯ ಜೈಭೀಮ್ ಸೇನೆ

ಗಜೇಂದ್ರಗಡ : ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿರುವ ಸಂವಿಧಾನಶಿಲ್ಪಿ, ಕ್ರಾಂತಿಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾನಾಯಕ ಅಂಬೇಡ್ಕರ್ ಅವರ “ಮೂರ್ತಿ” ನಿರ್ಮಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಮುಖ್ಯಾಧಿಕಾರಿಗೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

 

 

 

ಈ ವೇಳೆ ಸಂಘಟನೆಯ ಮುಖಂಡ ಪ್ರಕಾಶ ರಾಠೋಡ ಮಾತನಾಡಿ, ಗಜೇಂದ್ರಗಡ ಪಟ್ಟಣದ ಜೋಡು ರಸ್ತೆಯಲ್ಲಿರುವ ಪ್ರವರ್ತಕ ಸಮಾಜ ಸುಧಾರಕ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ವಾಗ್ಮಿ, ತೌಲನಿಕ ಧರ್ಮಗಳ ವಿದ್ವಾಂಸ ಮತ್ತು ಚಿಂತಕ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಹೆಸರಿನ ಮೇಲೆ ಹಲವು ದಶಕಗಳಿಂದ ವೃತ್ತ ನಿರ್ಮಿಸಲಾಗಿದ್ದು, ಆದರೆ, ” ಭಾರತೀಯ ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಗಡಿಗಳನ್ನು ಮರುರೂಪಿಸಿದ ಬಹುಮುಖ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ವೃತ್ತದಲ್ಲಿ ಇನ್ನೂ ನಿರ್ಮಿಸಿಲ್ಲ. ಕೂಡಲೇ ಪುರಸಭೆ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ ಹಾಗೂ ಪ್ರಸ್ತುತ ಸಾಲಿನ ಎಸ್‌ಎಫ್‌ಸಿ ಹಾಗೂ ಪುರಸಭಾ ನಿಧಿ ಬಳಸಿಕೊಂಡು ಸಂವಿಧಾನಶಿಲ್ಪಿ, ಕ್ರಾಂತಿಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾನಾಯಕ ಅಂಬೇಡ್ಕರ್ ಅವರ “ಮೂರ್ತಿ” ನಿರ್ಮಾಣದ ಕುರಿತು ಪುರಸಭೆ ಸಾಮಾನ್ಯ ವಿಷಯ ಪ್ರಸ್ತಾಪಿಸಿ, ಕೂಡಲೇ ಅನುಮೊದನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕನಕಪ್ಪ ಕಲ್ಲೋಡ್ಡರ, ರವಿ ನಿಡಗುಂದಿ, ಅಮಿತ
ಭಜೇಂತ್ರಿ, ರಮೇಶ ತಳವಾರ, ದುರಗಪ್ಪ ಪೂಜಾರ, ಮಾರುತಿ ಬಂಕದ, ಶುಭಂ ಮಾರನಾಳ, ಕಿರಣ ವಡ್ಡರ, ಮಾರುತಿ ವಡ್ಡರ ಸೇರಿದಂತೆ ಇತರರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button