ಬಿ ಬಿ ಸಂಕನೂರ ಫಿಲಂಸ್ ನ ಪಪ್ಪಿ ಚಲನಚಿತ್ರದ ಪೋಸ್ಟರ್ ಬಿಡುಗಡೆ.
ಉಡುಪಿಯ ಫಲಿಮಾರು ಶ್ರೀಗಳಿಂದ ಬಿಡುಗಡೆಗೊಂಡ ಪಪ್ಪಿ ಚಲನಚಿತ್ರದ ಪೋಸ್ಟರ್.
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ನಗರದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯದಲ್ಲಿ ಪಪ್ಪಿ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಂಡಿತ್ತು.
ಪೋಸ್ಟರನ್ನು ಉಡುಪಿಯ ಫಲಿಮಾರು ಮಠದ ಗುರುಗಳಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಧೀಶ ತೀರ್ಥರು ಪಪ್ಪಿ ಚಲನಚಿತ್ರದ ಮೊದಲ ಪೋಸ್ಟರ್ ಅನಾವರಣಗೊಳಿಸಿದರು.
ಪಪ್ಪಿ ಚಲನಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಬಿ.ಬಿ.ಸಂಕನೂರ ಫಿಲಿಂಸ್ ವಹಿಸಿದ್ದು, ಚಲನಚಿತ್ರವನ್ನು
ಕೋಟೆನಾಡಿನ ಖ್ಯಾತ ಗಣ್ಯ ವ್ಯಾಪರಾಸ್ಥರು ಆದ ಅಂದಪ್ಪ ಸಂಕನೂರ ನಿರ್ಮಾಣ ಮಾಡುತ್ತಿದ್ದು, ಚಿತ್ರದ ರಚನೆ ಮತ್ತು ನಿರ್ದೇಶನವನ್ನು ಮಲ್ಲಿ, ಛಾಯಗ್ರಾಹಕರಾಗಿ ಬಿ ಸುರೇಶಬಾಬು, ಸಂಕಲನವನ್ನು ಎನ್.ಎಮ್.ವಿಶ್ವ, ಹಿನ್ನಲೆ ಸಂಗೀತವನ್ನು ಶ್ರೀಧರ ಕಾಶ್ಯಪ ಸಂಗೀತವನ್ನು ರವಿ ಬಿಳ್ಳೂರ, ವಿ.ಎಫ್ ವನ್ನು ಪ್ರವೀಣ, ಗಾಯಕರಾಗಿ ನಿಂಗಪ್ಪ ದೋಣಿ, ಪ್ರಚಾರ ಕಲೆ ಅರಸ್ ಎಡಿಟ್ಸ್ ಸೇರಿದಂತೆ ಅನೇಕ ತಂತ್ರಜ್ಞಾನ ತಂಡಗಳು ಚಲನಚಿತ್ರದ ಭಾಗಿಯಾಗಲಿದ್ದಾರೆ.
ವರದಿ: ಸೀತಲ ಓಲೇಕಾರ.