ಶೈಕ್ಷಣಿಕ ರಂಗದಲ್ಲಿ ಯಾದವ ಸಮಾಜದವರು ಉತ್ತುಂಗ ಏರಲಿ
ಯಾದವ ಸಮಾಜದ ಪ್ರಸ್ತುತ ಸ್ಥಿತಿಗತಿಗಳನ್ನು ಅರಿಯಲು ಕರ್ನಾಟಕದಾದ್ಯಂತ ಸಂಚರಿಸಿ,ಅಲ್ಲಿನ ವಾಸ್ತವ ಅರಿತು ಸಮಾಜದ ಜನತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಅಭಿವೃದ್ಧಿಗೆ ಪೂರಕವಾಗುವಂತೆ ಸಂವಾದವನ್ನು ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಚಿಕ್ಕೋಡಿಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು. ಮೀಸಲಾತಿ ವಿಚಾರ ಚರ್ಚೆ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಉದ್ದೇಶಹೊಂದಿದ್ದೇವೆ ಇದಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸಬೇಕು. ಮಕ್ಕಳನ್ನು ಶೈಕ್ಷಣಿಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
Janadhwani News Gajendrgad:ಜನಧ್ವನಿ ಕನ್ನಡ ಸುದ್ದಿಮೂಲ: ನಗರದ ೧೧ ನೇ ವಾರ್ಡಿನಲ್ಲಿ ಗೊಲ್ಲರ ಓಣಿಯಲ್ಲಿನ ಶ್ರೀಕೃಷ್ಣ ಸಮುದಾಯ ಭವನಕ್ಕೆ ಚಿತ್ರದುರ್ಗದ ಹತ್ತಿರದ ಗೊಲ್ಲರಹಟ್ಟಿಯ ಶ್ರೀ ಯಾದವಾನಂದ ಶ್ತೀಗಳು ಭೇಟಿ ನೀಡಿದರು.
ಇದೇ ವೇಳೆ ಯಾದವ ಸಮಾಜದ ಮುಖಂಡರಾದ ಪರಶುರಾಮ ಮ್ಯಾಗೇರಿ, ಮುತ್ತು ಗೌಡರ, ಪ್ರಕಾಶ ದಿವಾಣದ ಮಾತನಾಡಿ,ಯಾದವ ಸಮಾಜವು ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಶೋಚನೀಯ ಹಂತ ತಲುಪಿದೆ. ಶೈಕ್ಷಣಿಕವಾಗಿ ಅತ್ಯಂತ ಹಿಂದೆ ಇರುವ ಸಮಾಜ ನಮ್ಮದ್ದು ಆಗಿದೆ. ಈಗೀರುವ ಮೀಸಲಾತಿಯಲ್ಲಿ ನಮ್ಮ ಸಮಾಜದ ಜನರಿಗೆ ಉದ್ಯೋಗ ಮೀಸಲಾತಿಯನ್ನು ಹಚ್ಚಳ ಮಾಡಬೇಕು. ಮುಂದಿನ ದಿನಗಳಲ್ಲಿ ಕಾಡುಗೊಲ್ಲ, ಕೃಷ್ಣ ಗೊಲ್ಲ ಇವುಗಳನ್ನು ಎಲ್ಲವೂ ಒಂದುಗೂಡಿಸುವ ಕಾರ್ಯಕ್ಕೆ ಶ್ರೀಗಳು ಮುಂದಾಗಬೇಕು ಅವರೊಟ್ಟಿಗೆ ನಾವು ಸದಾಕಾಲವೂ ಇರುತ್ತೇವೆ ಎಂದರು.
ಬಳಿಕ ಪರಮ ಪೂಜ್ಯ ಶ್ರೀ ಯಾದವಾನಂದ ಶ್ರೀಗಳು ಆರ್ಶಿವಚನ ನೀಡುತ್ತಾ ಯಾದವ ಸಮಾಜದ ಪ್ರಸ್ತುತ ಸ್ಥಿತಿಗತಿಗಳನ್ನು ಅರಿಯಲು ಕರ್ನಾಟಕದಾದ್ಯಂತ ಸಂಚರಿಸಿ,ಅಲ್ಲಿನ ವಾಸ್ತವ ಅರಿತು ಸಮಾಜದ ಜನತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಅಭಿವೃದ್ಧಿಗೆ ಪೂರಕವಾಗುವಂತೆ ಸಂವಾದವನ್ನು ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಚಿಕ್ಕೋಡಿಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು. ಮೀಸಲಾತಿ ವಿಚಾರ ಚರ್ಚೆ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಉದ್ದೇಶಹೊಂದಿದ್ದೇವೆ ಇದಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸಬೇಕು. ಮಕ್ಕಳನ್ನು ಶೈಕ್ಷಣಿಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಂತರ ಗಜೇಂದ್ರಗಡ ಯಾದವ ಸಮಾಜದ ವತಿಯಿಂದ ಶ್ರೀಗಳಿಗೆ ಸನ್ಮಾನ ನಡೆಯಿತು ಬಳಿಕ ಸಮಾಜದ ಮುಖಂಡರಾದ ಪರಶುರಾಮ ಮ್ಯಾಗೇರಿ, ಪರಶುರಾಮ ಗೌಡರ, ಗಣೇಶ ದಿವಾಣದ ಸೇರಿದಂತೆ ಸಮಾಜದ ಹಿರಿಯರ ಮನೆಗಳಿಗೆ ಶ್ರೀಗಳು ಬೇಟಿ ನೀಡಿದರು ಬಳಿಕ ಪಾದಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಪರಶುರಾಮ ಗೌಡರ, ದೇವಪ್ಪ ಗುಳೇದ, ಮುತ್ತು ಗೌಡರ, ಯಮನಪ್ಪ ಗೌಡರ, ಪರಶುರಾಮ ಮ್ಯಾಗೇರಿ, ದೇವಪ್ಪ ಮ್ಯಾಗೇರಿ, ಹುಚ್ಚಣ್ಣ ಬೋನೇರಿ, ಶರಣಪ್ಪ ದಿವಾಣದ, ಬಾಲಪ್ಪ ಗೌಡರ, ಕಳಕಪ್ಪ ದಿವಾಣದ, ಮಲ್ಲನಗೌಡ ಗೌಡರ, ಪರಶುರಾಮ ವರಗಾ, ಹನಮಂತ ಕುರಿ,ಪ್ರಕಾಶ ದಿವಾಣದ, ವೀರಪ್ಪ ತಾತಲ, ಮುತ್ತು ಮ್ಯಾಗೇರಿ, ಗಣೇಶ ದಿವಾಣದ, ರವಿಕುಮಾರ ದಿವಾಣದ, ಪರಶುರಾಮ ದಿವಾಣದ, ಆಕಾಶ ದಿವಾಣದ, ಸೇರಿದಂತೆ ಅನೇಕರು ಇದ್ದರು.