ಗದಗ

ಗಜೇಂದ್ರಗಡ ಸಾಹಿತ್ಯ ಚಿಂತನಾಗೊಷ್ಠಿ : “ಹೆಚ್. ಎಸ್. ವೆಂಕಟೇಶ ಮೂರ್ತಿ (HS Venkatesha Moorthi) ಅವರ ಸಾಹಿತ್ಯದ ಕೃಷಿ ನಮ್ಮಗೆಲ್ಲ ಮಾದರಿ ” ಪ್ರದೀಪ ಹುಲ್ಲೂರ.

ಗಜೇಂದ್ರಗಡ ನಗರದಲ್ಲಿ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿಯ ಗಜೇಂದ್ರಗಡ ಘಟಕದಿಂದ ಸಾಹಿತ್ಯ ಚಿಂತನಾಗೊಷ್ಠಿ ನಡೆಯಿತು.

Share News

ಗಜೇಂದ್ರಗಡ : ಸಾಹಿತ್ಯ ಚಿಂತನಾಗೊಷ್ಠಿ  ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರದೀಪ ಹುಲ್ಲೂರ ಹೆಚ್. ಎಸ್. ವೆಂಕಟೇಶ ಮೂರ್ತಿಯವರ ಸಾಹಿತ್ಯ ಚಿಂತನ ಮಂಥನದ ಕುರಿತು ಉಪನ್ಯಾಸ ನೀಡಿದರು.

ಇಂದೀನ ಆಧುನಿಕ ಜಗತ್ತಿನಲ್ಲಿ ನಾವೆಲ್ಲರೂ ಪುಸ್ತಕವನ್ನು ಓದುವ ಹವ್ಯಾಸವನ್ನು ಬರುಬರುತ್ತಾ ಕ್ಷೀಣಿಸುತ್ತಾ ಬಂದಿದ್ದೇವೆ. ಆದರೆ ಹೆಚ್.ಎಸ್.ವೆಂಕಟೇಶ ಮೂರ್ತಿ ಅವರು ಮಾಡಿರುವ ಸಾಹಿತ್ಯ ಕೃಷಿ ನಮ್ಮಗೆಲ್ಲ ಮಾದರಿಯಾಗಲಿದೆ. ಅದನ್ನು ನಾವೆಲ್ಲರೂ ಪಾಲಿಸೋಣ ಅವರ ಹಾಗೇ ಸಾಹಿತ್ಯದ ಮೆರು ಶಿಖರವಾಗದೆ ಇದ್ದರೂ ಶಿಖರ ಏರುವ ಮೆಟ್ಟಿಲು ಆದರೂ ಆಗೋಣ ಎಂದರು.

ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಆರ್. ಭಜೇಂತ್ರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ವ್ಹಿ.ಮನವಳ್ಳಿ, ಶಂಕರ ಕಲ್ಲಿಂಗನೂರ, ಎಸ್.ಎಸ್.ನರೇಗಲ್, ಶರಣಪ್ಪ ಬೇವಿನಕಟ್ಟಿ, ಎ.ಜಿ.ಬೂದಿಹಾಳ, ನೀಲಕಂಠ ಸವಣೂರು, ಮಂಹಾತೇಶ ಅಂಗಡಿ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button