ಭೂಮಿಯ ಮೇಲಿನ ನಿಜವಾದ ಭಗವಂತನ ಸ್ವರೂಪವೇ ವೈದ್ಯರು : ಸೀತಲ ಓಲೇಕಾರ.
ಭೂಮಿಯ ಮೇಲಿನ ನಿಜವಾದ ಭಗವಂತ ಸ್ವರೂಪವೇ ವೈದ್ಯರು : ಸೀತಲ ಓಲೇಕಾರ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಗಜೇಂದ್ರಗಡ;;
ಅನಾಧಿ ಕಾಲದಿಂದಲೂ ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ಅದಕ್ಕೆ ಅವರಿಗೆ ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ಭೂಮಿಯ ಮೇಲಿನ ಭಗವಂತನ ಸ್ವರೂಪ ಎಂದು ಕರೆಯಲಾಗುತ್ತದೆ ಎಂದು ಬ್ರೆöÊಟ್ ಬಿಂಗಿನಿAಗ್ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ನ ಸೀತಲ ಓಲೇಕಾರ ಹೇಳಿದರು.
ನಗರ ಸಮೀಪದ ಬ್ರೆöÊಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟಿçÃಯ ವೈದ್ಯರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಅನಾರೋಗ್ಯಕ್ಕೆ ತುತ್ತಾದ ಪ್ರತಿಯೋಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಇಂದು ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ. ನಾವೆಲ್ಲರೂ ಅವರ ತಾಳ್ಮೆ, ಸೂಕ್ಷö್ಮ ಸಂವೇದನೆಯನ್ನುನಾವೆಲ್ಲರೂ ಅರಿತು ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿದಾಗ ಮಾತ್ರ ಸದೃಡ ದೇಹ ಮತ್ತು ಮನಸ್ಸ ಹೊಂದಲು ಸಾಧ್ಯವಗುತ್ತದೆ.
ಬಳಿಕ ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ.ಅನಿಲಕುಮಾರ ತೋಟದ ಅವರು ಶಾಲೆಯ ಮುದ್ದು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ನಗರದ ಖ್ಯಾತ ವೈದ್ಯರಾದ ಎನ್.ಬಿ.ಕರಡಿ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ನಡೆಯಿತು.
ಬಳಿಕ ಡಾ.ಅನಿಲಕುಮಾರ ತೋಟದ ಮಾತನಾಡಿ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ದಿನ ಜುಲೈ ೧, ಆದ್ದರಿಂದ ಈ ದಿನವನ್ನು, ಅವರ ಗೌರವಾರ್ಥ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ.ಇಂತಹ ಸಮಯದಲ್ಲಿ ನಮ್ಮನ್ನು ನೆನಪಿಸಿ ನಮ್ಮಗೆ ಗೌರವ ಸೂಚಿಸಿದ ಬ್ರೆöÊಟ್ ಬಿಗಿನಿಂಗ್ ಸಂಸ್ಥೆಯವರ ಕಾರ್ಯ ನಿಜ್ಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್, ರೂಪಾ ಗೊಂದಳೆ,ಆಸ್ಮಾ ನಧಾಫ್,ರವಿ ನಿಡಗುಂದಿ,ಮುಸ್ತಾಕ ಹುಟಗೂರ, ಸಂಗಮೇಶ ರೇವಡಿ, ಸಾವಿತ್ರಿ ಹಾವೇರಿ,ಲಕ್ಷಿö್ಮ ಭೋನೇರಿ, ರೇಣುಕಾ ಕೊಪ್ಪದ,ಅಂಜುಮ್,ಸೇರಿದAತೆ ಅನೇಕರು ಇದ್ದರು.