ಗದಗಅಂತಾರಾಷ್ಟ್ರೀಯಅಪಘಾತಆತ್ಮಹತ್ಯೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಾಗಲಕೋಟೆಬಿಸಿನೆಸ್ ಕನೆಕ್ಟ್ರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಅಕ್ಷರ ಜಾತ್ರೆಗೆ ಜಿ.ಎಸ್.ಪಾಟೀಲ ಚಾಲನೆ

ಹತ್ತನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮಾತೆ ಭುವನೇಶ್ವರಿ ತಾಯಿಯ ರಥಯಾತ್ರೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡುತ್ತ. ಈ ಸಮ್ಮೇಳನ ಕನ್ನಡಿಗರ ಪುಣ್ಯ ಭೂಮಿ ದೊಡ್ಡಮೇಟಿಯವರ ಜಕ್ಕಲಿ ಗ್ರಾಮ. ಇಲ್ಲಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುತ್ತಿರುವದು ಹೆಮ್ಮೆಯ ವಿಷಯ.ಇಂದಿನಿಂದ ಮೂರು ದಿನಗಳ ಕಾಲ ನಿರಂತರ ಗಜೇಂದ್ರಗಡದ ಜಗದ್ಗುರು ತೊಂಟದಾರ್ಯ ಶಾಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ,ಕಲೆ, ವಾಸ್ತುಶಿಲ್ಪದ ಅನಾವರಣಗೊಳ್ಳಲಿದೆ. ಎಲ್ಲ ಕನ್ನಡಮನಸುಗಳು, ಸಾಹಿತ್ಯಾಸಕ್ತರು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿದರು .

Share News

Janadhwani News Naregal ಜನಧ್ವನಿ ಕನ್ನಡ ಸುದ್ದಿಮೂಲ ನರೇಗಲ್: ಕನ್ನಡಿರ ಗಂಡುಮೆಟ್ಟಿದ ನಾಡು ಜಕ್ಕಲಿ ಗ್ರಾಮದಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ.

ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಮಡಿದ ವೀರ ಕನ್ನಡಿಗ ಅಂದಾನಪ್ಪ ದೊಡ್ಡಮೇಟಿಯವರ ಸ್ಮರಣೆ ಮತ್ತು ನೆನಪುಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶೆ ಮಾಡಲಾಗುವದು ಎಂದು ಶಾಸಕ ಜಿ. ಎಸ್. ಪಾಟೀಲ ನುಡಿದರು.

ಅವರು ಹತ್ತನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮಾತೆ ಭುವನೇಶ್ವರಿ ತಾಯಿಯ ರಥಯಾತ್ರೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡುತ್ತ. ಈ ಸಮ್ಮೇಳನ ಕನ್ನಡಿಗರ ಪುಣ್ಯ ಭೂಮಿ ದೊಡ್ಡಮೇಟಿಯವರ ಜಕ್ಕಲಿ ಗ್ರಾಮ. ಇಲ್ಲಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುತ್ತಿರುವದು ಹೆಮ್ಮೆಯ ವಿಷಯ.ಇಂದಿನಿಂದ ಮೂರು ದಿನಗಳ ಕಾಲ ನಿರಂತರ ಗಜೇಂದ್ರಗಡದ ಜಗದ್ಗುರು ತೊಂಟದಾರ್ಯ ಶಾಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ,ಕಲೆ, ವಾಸ್ತುಶಿಲ್ಪದ ಅನಾವರಣಗೊಳ್ಳಲಿದೆ. ಎಲ್ಲ ಕನ್ನಡಮನಸುಗಳು, ಸಾಹಿತ್ಯಾಸಕ್ತರು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾ ಅಧ್ಯಕ್ಷ ಅಮರೇಶ ಗಾಣಗೇರ, ರೋಣ ತಾಲೂಕಾ ಅಧ್ಯಕ್ಷ ರಮಾಕಾಂತ ಕನ್ನಡಪರ ಹೋರಾಟಗಾರ ಎಚ್.ಎಸ್.ಸೊಂಪೂರ,ಮಿಥುನ್ ಜಿ ಪಾಟೀಲ ಸೇರಿದಂತೆ ಅನೇಕ ಸಾವಿರಾರು ಕನ್ನಡ ಮನಸುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button