ಗಜೇಂದ್ರಗಡ ನ್ಯಾಯಾಲಯ ಕಟ್ಟಡ ಶಂಕುಸ್ಥಾಪನೆ ನ. ೧೬
ಜನಧ್ವನಿ ಕನ್ನಡ ಸುದ್ದಿ ಮೂಲ
ಗಜೇಂದ್ರಗಡ:
ಪಟ್ಟಣದಿಂದ ಕಾಲಕಾಲೇಶ್ವರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಪುರಸಭೆ ಪಂಪ್ ಹೌಸ್ ಬಳಿಯ ಗುಡ್ಡದಲ್ಲಿ ಸರಕಾರ ನಿಗದಿ ಪಡಿಸಿದ ಸ್ಥಳದಲ್ಲಿ ೯.೮೦ ಕೊಟಿ ಅನುದಾನ ವೆಚ್ಚದ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ಶೀಲನ್ಯಾಸ ನ. ೧೬ ರಂದು ಬೆಳಿಗ್ಗೆ ೯.೩೦ ಗಂಟೆಗೆ ನೆರವೇರಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧಿಶರಾದ ಬಸವರಾಜ ತಿಳಿಸಿದರು.
ಸ್ಥಳೀಯ ನ್ಯಾಯಾಲಯದಲ್ಲಿ ಬಾನುವಾರ ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ನ್ಯಾಯಾಧಿಶರು ಮಾತನಾಡಿ, ಹೈಕೋರ್ಟ್ ನ್ಯಾಯಾಧೀಶರು, ಜಿಲ್ಲಾ ಆಡಳಿತಾತ್ಮಕ ನ್ಯಾಯುರ್ತಿಗಳಾದ ವಿ. ಶ್ರೀಶಾನಂದ್ ಅವರು ಶಿಲನ್ಯಾಸ ನೆರವೇರಿಸುವರು ಎಂದರು.
ನ್ಯಾಯವಾದಿಗಳ ಸಂಘ ಅಧ್ಯಕ್ಷ ವಿ.ಎಸ್. ಬಂಗಾರಿ ಮಾತನಾಡಿ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಲೊಕೊಪಯೊಗಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಜಿ.ಎಸ್. ಪಾಟೀಲ, ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಟ್ಟಲ್ ಕೊಡ, ಜಿಲ್ಲಾಧಿಕಾರಿ ಗೊವಿಂದರೆಡ್ಡಿ, ರೋಣ, ಗಜೇಂ ದ್ರಗಡ ಪ್ರಧಾನ ದಿವಾಣಿ ನ್ಯಾಯಾಧಿಶರಾದ ಆದಿತ್ಯ ಕಲಾಲ, ಹಿರಿಯ ದಿವಾಣಿ ನ್ಯಾಯಾಧಶರಾದ ಎನ್. ಚಿನ್ನಸ್ವಾಮಿ ಉಪಸ್ಥಿತಿ ಇರುವರು.
ಜಿಲ್ಲಾ ನ್ಯಾಯಾಧಿಶ ತಂಡ ಸ್ಥಳ ಪರಿಶೀಲನೆ
ಗುಡ್ಡದ ಬಳಿ ನಿಯೋಜಿತ ನ್ಯಾಯಾಲಯ ಕಟ್ಟಡ ಸ್ಥಳಕ್ಕೆ ಬೇಟಿ ನೀಡಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧಿಶರಾದ ಬಸವರಾಜ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕರ‍್ಯದರ್ಶಿ, ಸಿ.ಎಸ್. ಶಿವನಗೌಡ್ರ, ರೋಣ, ಗಜೇಂದ್ರಗಡ ಪ್ರಧಾನ ದಿವಾಣಿ ನ್ಯಾಯಾಧಿಶರಾದ ಆದಿತ್ಯ ಕಲಾಲ, ಹಿರಿಯ ದಿವಾಣಿ ನ್ಯಾಯಾಧಶರಾದ ಎನ್. ಚಿನ್ನಸ್ವಾಮಿ ಮತ್ತು ವಕೀಲರು ಪರಿಶಿಲನೆ ನಡೆಸಿದರು. ಶಿಲನ್ಯಾಸ ಕರ‍್ಯಕ್ರಮ ತಯಾರಿ ಕುರಿತು ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದರು.
ತಹಶಿಲ್ದಾರ ಕಿರಣಕುಮಾರ ಕುಲಕರ್ಣಿ, ಪಿಎಸ್‌ಐ ಸೊಮನಗೌಡ ಗೌಡ್ರ, ವಕೀಲರ ಸಂಘ ಕರ‍್ಯದರ್ಶಿ, ಐ.ಎ. ಫಾರುಕಿ, ವಕೀಲರಾದ ವಿ.ಆರ್. ಗುಡಿಸಾಗರ, ಬಿ.ಎಮ್.ಸಜ್ಜನ, ಆರ್. ಎಮ್. ರಾಯಬಾಗಿ, ಎಸ್.ಬಿ. ಹಿಡ್ಕಿಮಠ, ಎಮ್.ಎಚ್. ಕೋಲಕಾರ್. ಎಸ್.ಎನ್. ತಿಮ್ಮನಗೌಡರು. ಆರ್.ಎನ್. ಭಜೇಂತ್ರಿ, ಬಾಬು ಗೊಡೆಕಾರ, ಬಾಲು ರಾಠೋಡ್. ಪೀರು ರಾಠೋಡ್. ರಾಘು ಭಜಂತ್ರಿ. ವಿಶ್ಶ÷್ವನಾಥ ರಾಜೂರ. ಎಮ್.ವೈ. ಅವಧೂತ, ಎಫ್.ಎಫ್. ತೋಟದ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಸತ್ಪಾಳಕರ್, ನಧಾಫ, ಶಿರಸ್ತೆದಾರ ಪ್ರಕಾಶ ಗಡಾದ, ವಿನೂದ ಕಳಕಂಬಿ, ಕುಕನೂರ, ಪಿಡಬ್ಕುಡಿ ನಾಯಕ್, ವಿ.ಎನ್. ಪಾಟೀಲ, ಮಹೇಶ ರಾಠೋಡ ಉಪಸ್ಥಿತರಿದ್ದರು.
ವರದಿ: ಕಿರಣ ನಿಡಗುಂದಿ.
.