ಬೀದಿ ಬದಿ ವ್ಯಾಪಾರಸ್ಥರ ಬದುಕನ್ನು ಬೀದಿಗೆ ತಂದ ಗಜೇಂದ್ರಗಡ ಪುರಸಭೆ ದುರಾಡಳಿತದ ವಿರುದ್ದ ಅನಿರ್ದಿಷ್ಟವಧಿ ಧರಣಿ; ಜ. 8ರಂದು ಗಜೇಂದ್ರಗಡ ಬಂದ್ ಕರೆ..!
ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್( ಸಿಐಟಿಯ) ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಬೀದಿ ಬದಿ ವ್ಯಾಪಾರಸ್ಥರು ಜನವೇರಿ 8ರಿಂದ ಅನಿರ್ದಿಷ್ಟವಧಿ ಧರಣಿ ಹಾಗೂ ಜನವೇರಿ 8ರಂದು ಗಜೇಂದ್ರಗಡ ಬಂದ್ಗೆ ಕರೆ ನೀಡಿದೆ.
JanadhwaniNewsGajendrgad :ಗಜೇಂದ್ರಗಡ: ಪಟ್ಟಣದ ಪುರಸಭೆ ಬೀದಿ ಬದಿ ವ್ಯಾಪಾರಸ್ಥರನ್ನು ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಗೆ ಮಣಿದು ಏಕಾಏಕಿ ನಗರದ ಜೋಡು ರಸ್ತೆಯಿಂದ ಒಕ್ಕಲೇಬ್ಬಿಸಿ ನ್ಯಾಯಾಲಯದದಲ್ಲಿ ಚಾಲ್ತಿಯಿರುವ ಪ್ರಕರಣದ ಅನಧಿಕೃತವಾದ ಬಯಲು ಜಾಗೆದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ವ್ಯಾಪಾರಸ್ಥರಿಗೆ ಒದಗಿಸಿದೆ.
ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್( ಸಿಐಟಿಯ) ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಬೀದಿ ಬದಿ ವ್ಯಾಪಾರಸ್ಥರು ಜನವೇರಿ 8ರಿಂದ ಅನಿರ್ದಿಷ್ಟವಧಿ ಧರಣಿ ಹಾಗೂ ಜನವೇರಿ 8ರಂದು ಗಜೇಂದ್ರಗಡ ಬಂದ್ಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಸ್ ಎ ದಿಂಡವಾಡ ಜಿಲ್ಲೆಯಲ್ಲಿಯೇ ಗಜೇಂದ್ರಗಡ ಅತ್ಯಂತ ದೊಡ್ಡ ವ್ಯಾಪರ ಕೇಂದ್ರವಾಗಿದೆ ಸುತ್ತಮುತ್ತಲಿನ ನೂರಾರು ಗ್ರಾಮದ ಗ್ರಾಹಕರು ಗಜೇಂದ್ರಗಡ ನಗರಕ್ಕೆ ಆಗಮಿಸಿ ಪ್ರತಿನಿತ್ಯ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಾ ಇರುತ್ತಾರೆ. ಹೀಗಾಗಿ ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆಯ ಕೂಡಾ ಗಣನೀಯವಾಗಿ ಹೆಚ್ಚಳವಾಗಿದ್ದು ಗಜೇಂದ್ರಗಡ ಪುರಸಭೆಯಲ್ಲಿ ಅಧಿಕೃತವಾಗಿ ಇನ್ನೂರಕ್ಕು ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ನೊಂದಣಿ ಮಾಡಿಕೊಂಡಿದ್ದು ಇರುತ್ತದೆ.
ಇದರಿಂದ ಬೀದಿ ಬದಿಯ ವ್ಯಾಪಾರಸ್ಥರು ಸಂಖ್ಯೆಯು ಹಚ್ಚಾಗಿದ್ದು ಹಲವಾರು ಜನ ಇದರಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ.
ಈ ರೀತಿಯ ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆ ದೇಶದಲ್ಲಿ ದೊಡ್ಡದು ಇದ್ದು ಅವರ ಪಾಲುಗಾರಿಕೆ ಮನಗಂಡು ಅವರ ಹಿತರಕ್ಷಣಾ ಕಾಪಾಡಲು ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ 2014 ಜಾರಿಗೊಳಿಸಿದ್ದು ಆ ಕಾಯ್ದೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರು ಸಂರಕ್ಷಣಾ ಹೊಣೆಗಾರಿಕೆ ಸ್ಥಳೀಯ ಪುರಸಭೆಯಿದ್ದೆ ಇರುತ್ತದೆ.
ಆದರೆ ಗಜೇಂದ್ರಗಡದಲ್ಲಿ ಸ್ಥಳೀಯ ಪುರಸಭೆ ಇಂದು ಜನರ ಪಾಲಿಗೆ ಇದ್ದು ಸತ್ತಾಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ,ಸ್ಥಳೀಯ ಆಡಳಿತಕ್ಕೆ ಇಂತಹ ಬೀದಿ ಬದಿ ವ್ಯಾಪಾರಸ್ಥರ ಹಾಗೂ ಜನರ ಹಿತಕ್ಕಿಂತಲೂ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ಮುಖ್ಯವಾಗಿದ್ದು ಅವರ ಅಣತಿಯಂತೆ ಆಡಳಿತ ನಡೆಯುತ್ತಿದೆ.
ಇಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೂ ಕೂಡಾ ಕವಡೆ ಕಾಸಿನ ಕಿಮತ್ತು ಇಲ್ಲದಂತಾಗಿದೆ. ಅಧಿಕೃತವಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನವರಾಗಲಿ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಯವರಿಗಾಗಲಿ ಸ್ಥಳಿಯ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಇನ್ನು ಪುರಸಭೆ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದು ಅವರಿಗೆ ಕಾಯ್ದೆ ಕಾನೂನುಗಳನ್ನು ನಿಯಮಗಳನ್ನು ಪಾಲಿಸುವ ಯಾವುದೇ ಇಚ್ಚಾಶಕ್ತಿ ಇಲ್ಲವಾಗಿದೆ.
ಪೋಲಿಸ್ ಇಲಾಖೆಯವರು ನಗರದೊಳಗಡೆ ರಸ್ತೆ ಸುರಕ್ಷಿತ ನಿಯಮಗಳಿಗೆ ಸಂಬಂಧಿಸಿದ ಕಾನೂನಗಳನ್ನು ಮಾತ್ರ ತೋರಿಸಿ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿ ಬೀದಿಯಲ್ಲಿ ವ್ಯಾಪರ ಮಾಡುವ ಬಡಪಾಯಗಳ ಮೇಲೆ ಅವರ ತಕ್ಕಡಿ, ತಳ್ಳುವ ಅಂಗಡಿಯನ್ನು ಕಸಿದುಕೊಂಡು ನಿರಂತರವಾಗಿ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಆದರೆ ಅವರಿಗೆ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯ ಪಾಲನೆಯ ಅರಿವು ಇದ್ದರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಕಾಯ್ದೆ ಕಾನೂನುಗಳನ್ನು ಪಾಲನೆ ಮಾಡಬೇಕಾದಂತಹ ಸ್ಥಳೀಯ ಪುರಸಭೆ, ಪೋಲಿಸ್ ಇಲಾಖೆ, ತಾಲೂಕಾಡಳಿತ, ಮತ್ತು ಶಾಸಕರು ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ವಿಚಾರಣೆಯ ಹಂತದಲ್ಲಿರುವ ವ್ಯಾಜದ ಬಯಲು ಜಾಗೆಯಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವಂತೆ ಅವರನ್ನು ಒತ್ತಾಯಿಸಿ ಬಲವಂತದಿಂದ ಸದರಿ ಜಾಗೆಯಲ್ಲಿ ವ್ಯಾಪರಕ್ಕೆ ಅವಕಾಶ ನೀಡಿದ್ದು ಇದು ಕಾನೂನುಬಾಹಿರ ಕೆಲಸವಲ್ಲವೇ? ನಿಜವಾಗಿಯೂ ವ್ಯಾಪಾರಸ್ಥರ ಹಿತಕಾಯವ ಇಚ್ಚಾಶಕ್ತಿ ಇದ್ದರೆ ಮೊದಲು ಆ ಪ್ರಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸ್ಥಳೀಯ ಆಡಳಿತ ಕಾಯ್ದೆಬದ್ದವಾಗಿ ತನ್ನ ಕಬ್ಜಾ ಪಡೆದುಕೊಂಡು ಮೂಲಭೂತ ಸೌಕರ್ಯಗಳ ಕಲ್ಪಿಸು ಅಲ್ಲಿಯ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ ಮಾಡಲು ಮುಂದಾಗಬೇಕು.
ಅದನ್ನು ಬಿಟ್ಟು ಇಲ್ಲಸಲ್ಲದ ಹಾರಿಕೆ ನೀಡಿ ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿರುವುದು ನ್ಯಾಯ ಸಮ್ಮತವಲ್ಲ ಈಗಾಲಾದರೂ ಶಾಸಕರು, ಪುರಸಭೆ, ಪೋಲಿಸ್ ಇಲಾಖೆ, ತಹಶಿಲ್ದಾರರ ಇವರನ್ನೊಳಗೊಂಡಂತೆ ಬೀದಿ ಬದಿಯ ವ್ಯಾಪಾರಸ್ಥರ ಸಂಕಷ್ಟ ಚರ್ಚೆಸಿ ತ್ವರಿತಗತಿಯಲ್ಲಿ ಪರಿಹಾರ ಮಾರ್ಗಗಳನ್ನು ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸುತ್ತಾ ಬಂದಿರುತ್ತದೆ.
ಆದರೆ ಇಲ್ಲಿಯವರೆಗೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈಗಾಲಾದರೂ ಮಾನ್ಯ ಶಾಸಕರು ನಿಮ್ಮ ಪಕ್ಷದ ಪ್ರಭಾವಿ ನಾಯಕರ ಅಣತೆಯಂತೆ ನಡೆದುಕೊಳ್ಳದೆ ಬಡಪಾಯಿ ಬೀದಿ ಬದಿ ವ್ಯಾಪಾರಸ್ಥರ ಹಿತಕಾಯಲು ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ ಎಂದರು.