ಸೀನಿಮೀಯ ರೀತಿಯಲ್ಲಿ ಗಂಗಾವತಿ ಪೋಲಿಸರ ಮೇಲೆ ಹಲ್ಲೆ ; ಆರೋಪಿ ಕರೆದೊಯ್ಯುವ ವೇಳೆ ಅಟ್ಯಾಕ್.
ಗಂಗಾವತಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ: ಆರೋಪಿ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್
ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಪೊಲೀಸ್ ವಾಹನ ಅಡ್ಡಗಟ್ಟಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್ :
ಗದಗ (Gadag) : ಗದಗ ನಗರದ ಬೆಟಗೇರಿ ಅಂಡರ್ ಬ್ರಿಜ್ಜ್ ಬಳಿ ಈ ಘಟನೆ ನಡೆದಿದೆ. ರೈಲ್ವೆ ಬ್ರಿಡ್ಜ್ ಬಳಿ ಪೊಲೀಸ್ ವಾಹನ(Police vehicle) ಅಡ್ಡಗಟ್ಟಿ ಅಟ್ಯಾಕ್ ಮಾಡಲಾಗಿದೆ. ಹಲ್ಲೆ ಮಾಡಿ ಆರೋಪಿಯನ್ನು ದುಷ್ಕರ್ಮಿಗಳು ಎಸ್ಕೇಪ್ ಮಾಡಿದ್ದಾರೆ.
ಕೊಪ್ಪಳದ ಗಂಗಾವತಿ ಪೊಲೀಸರ ಮೇಲೆ ದುಷ್ಕರ್ಮಿಗಳು ಹಲ್ಲೆ(Attack) ಮಾಡಿದ್ದು, ಆರೋಪಿ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ.
ಕಳ್ಳತನ ಪ್ರಕರಣ (Theft case) ಸಂಬಂಧ ಆರೋಪಿ ವಶಕ್ಕೆ ಪೊಲೀಸರು (Police) ಪಡೆದಿದ್ದರು. ಆರೋಪಿ ಮೊಹಮ್ಮದ್ ಅಲಿ ಎಸ್ಕೇಪ್ ಮಾಡಿರೋ ಅನಾಮಿಕರು. ಆರೋಪಿ ಮೊಹಮ್ಮದ್ ಅಲಿ ವಶಕ್ಕೆ ಪಡೆದು ತೆರಳುತ್ತಿದ್ದಾಗ ಹಲ್ಲೆ ಮಾಡಲಾಗಿದೆ.
ನಾಲ್ವರು ಅನಾಮಿಕರಿಂದ ಹಲ್ಲೆ ಮಾಡಿರುವ ಬಗ್ಗೆ ಅನುಮಾನ ಮೂಡಿದೆ. ಹೆಡ್ ಕಾನ್‌ಸ್ಟೇಬಲ್ ಮರಿಶಾಂತ ಗೌಡ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಕಾನ್‌ಸ್ಟೇಬಲ್ ಚಿರಂಜೀವಿಗೆ ಸಣ್ಣಪುಟ್ಟ ಗಾಯವಾಗಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ವೇಳೆ ASI ಶಿವಶರಣ, PCಗಳಾದ ವಿಶ್ವನಾಥ್, ಮೈಲಾರಪ್ಪ ಇದ್ದರು. ಐವರು ಪೊಲೀಸ್ ಸಿಬ್ಬಂದಿ ಟೀಂ ಆರೋಪಿ ವಶಕ್ಕೆ ಪಡೆದಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರ ಟೀಂ ಹೊರಟಿದೆ.