![](https://janadhwanikannada.com/wp-content/uploads/2025/01/ಶರಣ-ಸಂಗಮ-ಮಠದಲ್ಲಿ-ಹೆಡೆ-ಎತ್ತಿ-ನಿಂತ-ನಾಗರಹಾವು-2-780x470.jpg)
2024ರ ಕೆಸೆಟ್ ನಲ್ಲಿ ಅರ್ಹತೆ ಪಡೆದವರಿಗೆ ಅವಕಾಶ ನೀಡಿ!
ಅತಿಥಿ ಉಪನ್ಯಾಸಕರ ಹುದ್ದೆಯ ಅರ್ಜಿಯಲ್ಲಿ ಕೆಸೆಟ್ ಅರ್ಹತೆ ಪರಿಗಣಿಸುವಂತೆ ಆಗ್ರಹ
Janadhwani News Naregalhttp://Janadhwani News Naregal : ನರೇಗಲ್: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರೆಲಾಗಿರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಜನವರಿ 4 ರಂದು ಕೆಇಎ ವತಿಯಿಂದ ಪ್ರಕಟಗೊಂಡ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶದಲ್ಲಿ ಅರ್ಹತೆ ಪಡೆದ ಅತಿಥಿ ಉಪನ್ಯಸಕರಿಗೆ ಅವಕಾಶ ನೀಡಬೇಕು ಎಂದು ಅತಿಥಿ ಉಪನ್ಯಾಸಕ ಶ್ರೀಕಾಂತ ನಾಯ್ಕ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕೆ-ಸೆಟ್ ಫಲಿತಾಂಶ ಪ್ರಕಟವಾಗಿದೆ. ಆದರೆ ಕೆಇಎಯಿಂದ ಅರ್ಹತಾ ಪ್ರಮಾಣ ಪತ್ರ ನೀಡಲು ಸಮಯ ಬೇಕಾಗುತ್ತದೆ. ಆದರೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಜನವರಿ 8 ಕೊನೆಯ ದಿನಾಂಕವಾಗಿದೆ. ಆದಕಾರಣ ಉನ್ನತ ಶಿಕ್ಷಣ ಸಚಿವರು, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಈಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಅರ್ಹತೆ ಪಡೆದವರುಗೂ ಅವಕಾಶ ಮಾಡಿಕೊಡಬೇಕು ಎಂದರು. ಇಲಾಖೆಯಿಂದ 3 ವರ್ಷದಲ್ಲಿ ಅರ್ಹತಾ ಪರೀಕ್ಷೆ ಪಾಸಾಗಬೇಕು ಎನ್ನುವ ಷರತ್ತು ಹಾಕಲಾಗಿತ್ತು. ಅದರಂತೆ ಪಾಸಾದರು ಅವಕಾಶ ನೀಡದೆ ಹೋದರೆ ಕಷ್ಟಪಟ್ಟು ಓದಿಯೂ ಅವಕಾಶ ಕಳೆದುಕೊಂಡು ಪರದಾಡಬೇಕಾದ ಪರಿಸ್ಥಿತಿಯನ್ನು ಅತಿಥಿ ಉಪನ್ಯಾಸಕರು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವಕಾಶ ಮಾಡಿಕೊಡಬೇಕು ಎಂದರು.
ಗದಗ ನಗರದ ಅತಿಥಿ ಉಪನ್ಯಾಸಕಿ ತಾಜಿನಾಬಾನು ಹುಲ್ಲೂರು ಮಾತನಾಡಿ, ಕೆ-ಸೆಟ್ ಫಲಿತಾಂಶದ ಅರ್ಹತಾಪಟ್ಟಿಯಲ್ಲಿ ಹೆಸರಿದ್ದರು ಸಹ ಅದನ್ನು ಅರ್ಜಿಯಲ್ಲಿ ಕಾಣಿಸಲು ಅವಕಾಶ ಇಲ್ಲದಂತಾಗಿದೆ. ಅನೇಕ ವರ್ಷಗಳಿಂದ ಕಡಿಮೆ ವೇತನದಲ್ಲಿ ಅತಿಥಿ ಉಪನ್ಯಾಸಕರಾಗಿ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದೇವೆ. ಆದರೆ ಕೆ-ಸೆಟ್ ಅರ್ಹತೆ ಕಾಣಿಸಲು ಇಲಾಖೆಯಿಂದ ಅವಕಾಶ ನೀಡದ ಹೋದರೆ ಅರ್ಹರಾಗಿಯೂ ಅವಕಾಶ ವಂಚಿತರಾಗುತ್ತೇವೆ. ಆದ್ದರಿಂದ ಅರ್ಹತೆಯನ್ನು ಪರಿಗಣನೆಗೆ ತೆಗೆದುಕೊಂಡು ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕು ಎಂದರು.
ಅತಿಥಿ ಉಪನ್ಯಾಸಕ ಚಂದ್ರು ಎಂ. ರಾಥೋಡ್ ಮಾತನಾಡಿ, ಕೆ-ಸೆಟ್ ನಲ್ಲಿ ಅರ್ಹತೆ ಪಡೆದವರಿಗೆ ಅರ್ಹತಾ ಪ್ರಮಾಣ ಪತ್ರದ ಕಾರಣದಿಂದ ಅವಕಾಶ ನೀಡದೆ ಇದ್ದರೆ ಅನೇಕ ಅತಿಥಿ ಉಪನ್ಯಾಸಕರ ಬದುಕಿಗೆ ತೊಂದರೆ ಆಗಲಿದೆ. ಆದ್ದರಿಂದ ಈ ಬಾರಿ ಅರ್ಹತೆ ಪಡೆದವರಿಗೆ ಅವಕಾಶ ನೀಡಬೇಕು ಎಂದರು.