ಕೋಟೆನಾಡಿನಲ್ಲಿ ಪ್ರಜ್ವಲಿಸಿದ ಬಸವ ಜ್ಯೋತಿ
ನಗರದಲ್ಲಿ ಸಂಚರಿಸಿ ಜನಾಕರ್ಷಿಸಿದ ಬಸವ ಜ್ಯೊತಿ ಯಾತ್ರೆ
Janadhwani News Gajendragad
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ಕೋಟೆನಾಡಿ ಗಜೇಂದ್ರಗಡ ಪಟ್ಟಣದಲ್ಲಿ ಪೂಜ್ಯ ಶ್ರೀ ಅನ್ನದಾನ ಮಹಾಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪರಮಪೂಜ್ಯ ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಪೂಜ್ಯರ ಪಾವನ ಸನ್ನಿದಾನದಲ್ಲಿ ಶಿವಯೋಗ ಮಂದಿರದಿಂದ ಬೇಲೂರು, ಗಜೇಂದ್ರಗಡಕ್ಕೆ ಬಸವ ಜ್ಯೋತಿ ಯಾತ್ರೆಯು ಗಜೇಂದ್ರಗಡಕ್ಕೆ ಆಗಮಿಸಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರನ್ನು ಆಕರ್ಷಿಸಿತ್ತು.
ಬಸವ ಜ್ಯೋತಿ ಯಾತ್ರೆಯು ಕುಂಬಾರ ಓಣಿಯಲ್ಲಿನ ಶ್ರೀ ಅನ್ನದಾನೇಶ್ವರ ಮಠದಿಂದ ಪ್ರಾರಂಭವಾದ ಮೆರವಣಿಗೆಯೂ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಶಿವಾಜಿ ವೃತ್ತ, ಕಾಲಕಾಲೇಶ್ವರ ವೃತ್ತ, ರೋಣ ರಸ್ತೆಯ ಮಾರ್ಗವಾಗಿ ಬಸವ ಪುರಾಣ ವೇದಿಕೆ ತಲುಪಿತು.
ಬಸವ ಜ್ಯೋತಿಗೆ ಯಾತ್ರೆಗೆ ಶ್ರೀಗಳು ಸಾಥ್.
ಹಾಲಕೇರಿಯ ಶ್ರೀ ಮ.ನಿ.ಪ್ರ.ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ನಾಡಿನ ಅನೇಕ ಹೆಸರಾಂತ
ಶ್ರೀಗಳು ಭಾಗಿಯಾಗಿ ಮೆರವಣಿಗೆಗೆ ಮೆರಗು ತಂದಿದ್ದರು.
ಇನ್ನೂ ಮೆರವಣಿಗೆಯಲ್ಲಿ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಮಹಿಳೆಯರು, ಯುವಕರು, ಅನೇಕ ಕಲಾ ತಂಡಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.
ವರದಿ: ಕಿರಣ ನಿಡಗುಂದಿ.