ಗೌಸೆ ಆಜಂ ಕಾನ್ಪರೇನ್ಸ್( ಧಾರ್ಮಿಕ ಪ್ರವಚನ) ಪೋಸ್ಟರ್ ಬಿಡುಗಡೆ
ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸೌಹಾರ್ದತೆಯ ಸುಂದರ ಸಮಾಜ ಕಟ್ಟಬೇಕಿದೆ: ತಟಗಾರ
Janadhwani News Gajendragda : ಗಜೇಂದ್ರಗಡ ನ:25
ಮಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಹಸನಸಾಬ ತಟಗಾರ ಹೇಳಿದರು.
ನಗರದ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿಸೆಂಬರ್ 13 ರಂದು ನಡೆಯಲಿರುವ ಗೌಸೆ ಆಜಂ ಕಾನ್ಪರೇನ್ಸ್ ಧಾರ್ಮಿಕ ಪ್ರವಚನದ ಪೋಸ್ಟರ್ ಶಾದಿಮಹಲ್ ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ ಎಂದರು.
ಗೌಸೆ ಆಜಂ ಕಾನ್ಪರೇನ್ಸ್ ಕಮೀಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಜಗತ್ತಿನ ಖ್ಯಾತ ವಾಗ್ಮಿಗಳಲ್ಲೊಬ್ಬರಾದ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ ಸೈಯದ್ ಮುಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಇತಿಹಾಸದಲ್ಲಿಯೇ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ,ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ಗೌಸೆ ಆಜಂ ಕಮೀಟಿಯ ಹಣಕಾಸು ಸಮಿತಿ ಹಿರಿಯ ಸದಸ್ಯ ಎ ಡಿ ಕೋಲಕಾರ ಮಾತನಾಡಿ ಡಿಸೆಂಬರ್ 13 ರಂದು ಪಟ್ಟಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸೈಯದ್ ಮೊಹಮ್ಮದ್ ನೂರಾನಿ ಮಿಯಾ ಅವರು ಕನ್ನಡದಲ್ಲಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದು ಸಮಾಜ ಭಾಂದವರು ತನು ಮನ ಧನದಿಂದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು, 8-10 ಸಾವಿರ ಜನಸಂಖ್ಯೆ ಸೇರುವ ಸಾಧ್ಯತೆ ಇದೆ ಎಂದರು.
ಧರ್ಮ ಗುರುಗಳಾದ ಯಾಸೀನ ಮೌಲಾನ ಅವರು ಮಾತನಾಡಿದರು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೌಲಾನಾ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ , ಕಾರ್ಯದರ್ಶಿ ಫಯಾಜ್ ತೋಟದ, ದಾದು ಹಣಗಿ, ನಾಸೀರ ಸುರುಪುರ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಅಲಿ ಕಿಲ್ಲೆದಾರ, ಪಿ.ಕೆ ಬಾಗವಾನ, ಎ ಕೆ ಕಾತರಕಿ, ಶಾಮೀದಸಾಬ ದಿಂಡವಾಡ, ರಸೂಲಸಾಬ ಆರಗಿದ್ದಿ, ಮೈಬುಸಾಬ ಚಿನ್ನೂರ, ಕೆ.ಸಿ ಗೋಡೇಕಾರ, ಖಲಂದರ ಡಾಲಯತ, ಆಸೀಫ್, ಸಲೀಂ ಮಾನಿಯಾರ, ಸಲಿಂ ಕೊಪ್ಪಳ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.