ಸ್ಥಳೀಯ ಸುದ್ದಿಗಳುಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಅಂತರ ರಾಜ್ಯ ಕಳ್ಳನ ಬಂಧನ: ೧೫ ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಮತ್ತು ಕಾರು ವಶ.

Share News

ಅಂತರ ರಾಜ್ಯ ಕಳ್ಳನ ಬಂಧನ: ೧೫ ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಮತ್ತು ಕಾರು ವಶ.
ಗದಗ :
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗಜೇಂದ್ರಗಡ ಶಹರದ ದೋಟಿಹಾಳ ಪ್ಲಾಟದಲ್ಲಿರುವ ಪ್ರಶಾಂತ ತಂದೆ ಲಕ್ಷ್ಮಣರಾವ್ ಸೂರ್ಯವಂಶಿ ಇವರ ಮನೆ ಕಳ್ಳತನ [ಹಗಲು] ಪ್ರಕರಣದಲ್ಲಿ ಕಳ್ಳತನವಾದ ಬಂಗಾರ, ಬೆಳ್ಳಿ, ಮತ್ತು ನಗದು ಹಣದ ಹಾಗೂ ಆರೋಪಿತರಿಗೆ ಪತ್ತೆ ಮಾಡಿ ೧೫ ಲಕ್ಷ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

ಮಾನ್ಯ ಶ್ರೀ ಬಿ.ಎಸ್ ನೇಮಗೌಡ (ಐ.ಪಿ.ಎಸ್), ಪೊಲೀಸ್ ಅಧೀಕ್ಷಕರು. ಗದಗ ಜಿಲ್ಲೆ ಗದಗ ರವರ ಮತ್ತು ಶ್ರೀ ಎಮ್.ಬಿ ಸಂಕದ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ ಗದಗ ರವರ ಹಾಗೂ ಶ್ರೀ ಪ್ರಭುಗೌಡ ಕಿರೇದಳ್ಳಿ, ಪೊಲೀಸ್ ಉಪಾಧೀಕ್ಷಕರು, ನರಗುಂದ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್.ಬೀಳಗಿ, ಸಿಪಿಐ, ರೋಣ ವೃತ್ತ ರವರ ನೇತೃತ್ವದಲ್ಲಿ ಗಜೇಂದ್ರಗಡ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಸೋಮನಗೌಡ ಗೌಡ್ರ, ರೋಣ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಎಲ್ ಕೆ ಜೂಲಕಟ್ಟಿ, ಹಾಗೂ ಸಿಬ್ಬಂದಿ ಜನರಾದ ಶ್ರೀ ಎಸ್ ವಿ ಹಲಬಾಗಿಲ ? ೨-೩೬೬, ೫೮ ? ? ೨೫ ೪-೪೨೩, ೨ ೨ ೨ ೨ ೨ ೪-೩೫೮, ಆರ್ ಹೊಂಬಳ ಎಚ್.ಸಿ-೯೫೩ ಶ್ರೀ ಹೆಚ್ ವಾಯ್ ಮ್ಯಾಗಳಮನಿ, ಸಿಪಿಸಿ-೫೪೭, ಶ್ರೀ ಎಸ್ ವಿ ಕದಂ ಸಿಪಿಸಿ-೧೨೧೭, ಶ್ರೀ ಪಿ ವಿ ಭೂಸನೂರಮಠ ಸಿಪಿಸಿ-೫೪೯, ಶ್ರೀ ಶರಣಪ್ಪ ಓಜನಹಳ್ಳಿ ಸಿಪಿಸಿ-೪೫೧, ಶ್ರೀಮತಿ ಭಾಗ್ಯಶ್ರೀ ಆಲೂರ ಮಪಿಸಿ-೧೨೫೦, ಶ್ರೀಮತಿ ಮಲ್ಲಮ್ಮ ಕೊಟಗಿ ಮಪಿಸಿ-೧೧೮೩, ರೋಣ ಪೊಲೀಸ್ ಠಾಣೆಯ ಶ್ರೀ ಶಿವಕುಮಾರ ಹುಬ್ಬಳ್ಳಿ ಸಿಪಿಸಿ-೧೦೪೭, ಶ್ರೀ ಕುಮಾರ ತಿಗರಿ, ಸಿಪಿಸಿ-೪೪೦, ಶ್ರೀ ಅಜಾತ್ ಗುರಮ್ಮನವರ ಎಪಿಸಿ-೪೭, ಶ್ರೀ ರಮೇಶ ಜುಂಗೆಣ್ಣವರ ಎಪಿಸಿ-೦೭ ಮತ್ತು ಟೆಕ್ನಿಕಲ್ ವಿಭಾಗದ ಸಿಬ್ಬಂದಿ ಜನರಾದ ಶ್ರೀ ಗುರುರಾಜ ಬೂದಿಹಾಳ, ಎ.ಆರ್.ಎಸ್.ಐ ಹಾಗೂ ಶ್ರೀ ಸಂಜೀವ ಕೊರಡೂರ ಸಿಪಿಸಿ-೪೭೫ ಜಿಲ್ಲಾ ಪೊಲೀಸ್ ಕಾರ್ಯಾಲಯ ಗದಗ ಇವರನ್ನೊಳಗೊಂಡ ತಂಡವನ್ನು ಪತ್ತೆ ಮಾಡುವ ಕುರಿತು ರಚಿಸಿದ್ದು ಈ ತಂಡವೂ ಯಶಸ್ಸುಗೊಂಡಿದೆ.

ಈ ತಂಡದ ಪ್ರಯತ್ನದಿಂದ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದ ಆರೋಪಿತನಾದ ರಾಜು ತಂದೆ ನರಸಿಂಗರಾವ್ ಮಕ್ಕಳೆ ವಯಾ-೨೮ ವರ್ಷ ಜಾತಿ-ಹಿಂದೂ ಮರಾಠ ಉದ್ಯೋಗ-ಆಟೋ ಚಾಲಕ ಸಾ: ಜಲಪಲ್ಲಿ, ಹೈದ್ರಾಬಾದ ಇವನ ತಾಬಾದಿಂದ ಒಟ್ಟು ೧೫೦ ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಾಜು ಕಿಮ್ಮತ್ತು ೭,೦೦,೦೦೦/-ರೂ ಗಳನ್ನು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಒಂದು ಮಾರುತಿ ಸುಜುಕಿ ಕಂಪನಿಯ ನೀಲಿ ಬಣ್ಣದ ಬಲೆನೋ ಕಾರ್ ನಂಬರ ಟಿ ಎಸ್-೧೨ ಇ.ಡಬ್ಲೂ- ೭೯೯೦ ನೇದ್ದು ಅ:ಕಿ: ೮,೦೦,೦೦೦/- ರೂ ಗಳು ಆರೋಪಿತನಿಂದ ಜಪ್ತ ಮಾಡಿಕೊಂಡಿದ್ದು ಅದರ ಒಟ್ಟು ಮೌಲ್ಯ ೧೫,೦೦,೦೦೦/- ರೂ.ಗಳು ಇರುತ್ತದೆ.

 

 

ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ಮೂವರು ಆರೋಪಿತರ ಪತ್ತೆಗೆ ಜಾಲ ಬೀಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಮಾನ್ಯ ಎಸ್.ಪಿ ಸಾಹೇಬರು ಗದಗ ಜಿಲ್ಲೆರವರು ಶ್ಲಾಘಿಸಿದ್ದಾರೆ

 


Share News

Related Articles

Leave a Reply

Your email address will not be published. Required fields are marked *

Back to top button