janadhwani news gajendragad: ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ
ಪಟ್ಟಣದಲ್ಲಿ ಮಾಸಾಂತ್ಯ ಬಸವ ಪುರಾಣ ಪ್ರಯುಕ್ತ ಪುರಸಭೆ ವ್ಯಾಪ್ತಿಯಲ್ಲಿ ಮಠಾಧೀಶರು ಆರಂಭಿಸಿರುವ ಸದ್ಭಾವನಾ ಪಾದಯಾತ್ರೆ ಬುಧವಾರ ಬೆಳಗ್ಗೆ ಮುಂದುವರೆದಿತ್ತು. 1, 2 ವಾರ್ಡ್ ಜತೆ ಘೋರ್ಪಡೆ ಅವರ ರಾಜವಾಡೆಗೆ ಭೇಟಿ ನೀಡಿದ ಬಳಕ ಶಿವಾಜಿಪೇಟೆಯ ಮಾರುತಿ ದೇಗುಲದಲ್ಲಿ ಸಭೆ ನಡೆಯಿತು.
ಮಠದ ಜ.ಮುಪ್ಪಿನ ಬಸವಲಿಂಗ ಸ್ವಾಮಿಗಳ ನೇತೃತ್ವದಲ್ಲಿ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರ ಅಭಿನಯ ಚೆನ್ನಬವಸ ಸ್ವಾಮಿಗಳು, ಗರಗ ನಾಗಲಾಪುರ ಒಪತ್ತೇಶ್ವರ ಮಠದ ಶ್ರೀ ನಿರಂಜನಪ್ರಭು ಸ್ವಾಮಿಗಳು, ತರೂರ ಶ್ರೀ ಕೊಟ್ಟೂರ ಸ್ವಾಮಿಗಳು, ಸೋಮಸಮುದ್ರ ಸಿದ್ದಲಿಂಗ ದೇಶಿಕರು, ಶ್ರೀಧರ ಗಡ್ಡೆಯ ಮರಿಕೊಟ್ಟೂರ ದೇಶಿಕರು, ಶ್ರೀ ಸಂಗನಾಳ ವಿಶ್ವೇಶ್ವರ ದೇವರು, ಪ್ರವಚನಕಾರ ಗುಡೂರಿನ ಅನ್ನದಾನಿಶಾಸ್ತ್ರಿಗಳು ಪಾಲ್ಗೊಂಡಿದ್ದರು.
ಯಶ್ ರಾಜ ಘೋರ್ಪಡೆ, ಮರಾಠ ಸಮಾಜದ ಅಧ್ಯಕ್ಷ ಶೇಖಪ್ಪ ರಾಮಜಿ, ರೇನಪ್ಪ ಇಂಗಳೆ, ಯಮನೂರ ತಿರಕೊಜಿ, ಶಿವರಾಜ ಘೋರ್ಪಡೆ, ಪರಸಪ್ಪ ಪವಾರ,
ಗಜೇಂದ್ರಗಡ ಶಿವಾಜಿ ಪೇಟೆಯ ಮಾರುತಿ ದೇಗುಲದಲ್ಲಿ ಹಾಲಕೆರೆ ಮಠದ ಜ.ಮುಪ್ಪಿನ ಬಸವಲಿಂಗ ಸ್ವಾಮಿಗಳ ಜತೆ ಇನ್ನಿತರ ಮಠಾಧೀಶರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಶಿವಾಜಿ ಹಾಳಕೇರಿ, ಸುರೇಶ ಶಿಂಧೆ, ಸಿದ್ದಪ್ಪ ಬಂಡಿ, ಅವಿನಾಶ ಕೊಟಗಿ, ಶಿವಯ್ಯಾ ಚಕ್ಕ ಡಿಮಠ, ಗುರುತಿದ್ದಯ್ಯಾ ಸೂಗಿರಯ್ಯನ ಮಠ, ಅಮರೇಶ ಗಾಣಿಗೇರ, ರಾಜು
ಸಾಂಗ್ಲಿಕರ್, ಪ್ರಭು ಚವಡಿ, ಬಸವರಾಜ ಪುರ್ತಗೇರಿ, ಶ್ರೀನಿವಾಸ ಸವದಿ ಇನ್ನಿತರರು ಇದ್ದರು. ಮಹಿಳೆಯರು ಆರತಿ ಬೆಳಗಿ ಮಠಾಧೀಶರನ್ನು ಸ್ವಾಗತಿಸಿದರು.