
ಜಗದಂಬಾ ಶಾಲೆ ಉತ್ತಮ ಸಾಧನೆ
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ನಗರದ ಜಗದಂಬಾ ವಿದ್ಯಾ ವರ್ಧಕ ಸಂಘದ ಶ್ರೀ ವಿ.ಟಿ ರಾಯಬಾಗಿ ಅಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಂಸ್ಥೆ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಜಿ.ಎಚ್. ರಂಗ್ರೇಜ್ ಹೇಳಿದರು.
ನಗರದಲ್ಲಿನ ಶಾಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡುತ್ತಾ
ವಿದ್ಯಾರ್ಥಿ ಶಿವಕುಮಾರ ಬಂಡಿಹಾಳ(ಶೇ.98.72) ಪ್ರಥಮ, ಕಾವ್ಯಾ ಆರೇರ (ಶೇ.98.56), ದ್ವಿತೀಯ, ಬೃಂದಾ ಜಾಲಹಾಳ (ಶೇ.98.4) ತೃತೀಯ ಜತೆಗೆ 17
ವಿಧ್ಯಾರ್ಥಿಗಳು ಡಿಸ್ಟಿಕ್ಷನ್ , 33
ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣ ರಾಗಿರುತ್ತಾರೆ. ಶಾಲೆಯ ಫಲಿತಾಂಶ ಶೇ. 95.45 ಆಗಿರುತ್ತದೆ. ಶಾಲೆಗೆ ಕೀರ್ತಿ ತಂದ ಎಲ್ಲಾ ವಿಧ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು.
ಬಳಿಕ ಕಾರ್ಯದರ್ಶಿಗುರುನಾಥ ರಾಯಬಾಗಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಯ ಮಕ್ಕಳು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿದ್ದಾರೆ. ಈ ಬಾರಿ ಶೇ. ೯೫% ಫಲಿತಾಂಶಗಳು ಬಂದಿದೆ. ಮುಂದಿನ ದಿನಗಳಲ್ಲಿ ಅದು ನೂರಕ್ಕೆ ನೂರರಷ್ಟು ಆಗುವಂತೆ ಶಿಕ್ಷಕರ ವೃಂದಕ್ಕೆ ಸೂಚನೆ ನೀಡುತ್ತೇವೆ. ಈ ಬಾರಿಯ ಫಲಿತಾಂಶದಲ್ಲಿ ಉತೀರ್ಣ ಆದ ವಿಧ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ.
ಇನ್ನೂ ಇದೇ ಸಂದರ್ಭದಲ್ಲಿ ಶಾಲೆಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.
ಶಾಲೆಯ
ಉಪಾಧ್ಯಕ್ಷ ಎ.ಜಿ. ರಾಯಬಾಗಿ, ಖಜಾಂಚಿ ಭಾಸ್ಕರಸಾ ರಾಯಬಾಗಿ, ಸುರೇಂದ್ರಸಾ ರಾಯಬಾಗಿ, ಸಿದ್ರಾಮಸಾ ರಾಯಬಾಗಿ, ಶಂಕರಸಾ ರಾಯಬಾಗಿ, ನಾಗರಾಜ ಪವಾರ, ರಾಘವೇಂದ್ರ ರಾಯ ಬಾಗಿ, ಆಡಳಿತಾಧಿಕಾರಿ ಗೋವಿಂದ ದಂಡಿನ, ಮುಖ್ಯೋ ಪಾಧ್ಯಯ, ಶಿಕ್ಷಕರು, ಸಿಬ್ಬಂದಿ ವರ್ಗದವರು ಇದ್ದರು.