ಗದಗಕುಷ್ಟಗಿಕೊಪ್ಪಳಗಂಗಾವತಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು
ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ನಾಜೀಯಾ ಮುದಗಲ.
ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ನಾಜೀಯಾ ಮುದಗಲ್.
ಜನಧ್ವನಿ ಸುದ್ದಿಮೂಲ ಗಜೇಂದ್ರಗಡ:
ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ ಎಂದು ಬ್ರೈಟ್ ಬಿಗಿನಿಂಗ್ ಶಾಲೆಯ ಕಾರ್ಯದರ್ಶಿ ನಾಜೀಯಾ ಮುದಗಲ್ ಹೇಳಿದರು.
ನಗರ ಸಮೀಪದ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ದಾಸ ಸಾಹಿತ್ಯ ಇಂದು ಮೇರು ಪರ್ವತದಂತೆ ಬೆಳದಿದೆ. ಈ ಹಿನ್ನೆಲೆಯಲ್ಲಿ ಕನಕದಾಸರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹೀನಾಕೌಸರ ಅರಳಿಕಟ್ಟಿ, ಶಬೀನಾ ಬೆಳ್ಳಟ್ಟಿ, ಅನುಷಾ ತಳವಾರ,ಅವೃತಾ ಬದಿ, ಸಾವಿತ್ರಿ ಹಾವೇರಿ, ರವಿ ನಿಡಗುಂದಿ ಪುಷ್ಪಾ ಸೇರಿದಂತೆ ಅನೇಕರು ಇದ್ದರು
ವರದಿ: ಕಿರಣ ನಿಡಗುಂದಿ.