೧೦ ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಲತಾಯಿ ಧೋರಣೆ ಸರಿಯಲ್ಲ : ಕನ್ನಡಪರ ಹೋರಾಟಗಾರ ಗಣೇಶ ಗುಗಲೋತ್ತರ ಖೇಧ.!
ಸಾಹಿತಿಗಳನ್ನು ಹಾಗೂ ಕನ್ನಡಪರ ಸಂಘಟನೆಯ ಹೋರಾಟಗಾರರನು ಕಡೆಗಣಿಸುವ ಸಮ್ಮೇಳನ
Janadhwani News Gajendrgad : ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ನಗರದಲ್ಲಿ ಜನವರಿ 19 ರಿಂದ 21ರವರೆಗೆ ಜರಗುವ ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಲು ಸಾಹಿತಿಗಳು ಸಾಹಿತ್ಯಸಕ್ತರು ಕನ್ನಡಪರ ಸಂಘಟನೆಗಳ ಹೋರಾಟಗಾರರು ಕಾರಣರು ಆದರೆ ಪೂರ್ವಭಾವಿ ಸಭೆಗಳು ಅತ್ಯಂತ ನಿರಸವಾಗಿ ಜರುಗುವುದನ್ನು ನೋಡಿದಾಗ ಕೆಲವರ ಹಿಡಿತದಲ್ಲಿರುವ ಈ ಕ ಸ ಪ ತಾಲೂಕು ಮತ್ತು ಜಿಲ್ಲಾ ಘಟಕಗಳು ತಮಗೆ ಬೇಕಾದವರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹಲವಾರು ಕನ್ನಡಪರ ಸಂಘಟನೆಗಳ ಹೋರಾಟಗಾರರು ಸಾಹಿತಿಗಳು ತಿಳಿಸಿದ್ದಾರೆ ಆದರೆ ಸಾಹಿತ್ಯ ಸಮ್ಮೇಳನ ಕುರಿತು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆಗಳು ಪತ್ರಿಕೆಯಲ್ಲಿ ಬರುವುದನ್ನು ಕಾಣುತ್ತಿದ್ದೇವೆ ಎಂದು ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾದ್ಯಕ್ಷ ಗಣೇಶ ಗುಗಲೋತ್ತರ ಹೇಳಿದರು.
ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ಸಾಹಿತಿಗಳು ಲೇಖಕರು ಸಾಹಿತ್ಯಾಸಕ್ತರು ಸಂಘಟನೆಕಾರರು ಕನ್ನಡಪರ ಹೋರಾಟಗಾರರು ಬಂದಿಲ್ಲ ಎಂಬುದನ್ನು ಕಂಡಾಗ ಸಾಹಿತಿಗಳನ್ನು ಕಡೆಗಣಿಸಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪೂರ್ವಭಾವಿ ಸಭೆಗಳನ್ನು ನಿರಸವಾಗಿರುವುದು ಕಂಡಾಗ ಆಸಕ್ತರಿಗೆ, ಸಂಘಟನೆ ಹೋರಾಟಗಾರರಿಗೆ ಪೂರ್ವಭಾವಿ ಸಭೆಗೆ ಆಹ್ವಾನ ನೀಡಿಲ್ಲ ಎಂಬುದು ಸ್ವಷ್ಟವಾಗುತ್ತದೆ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸಮಿತಿಗಳನ್ನು ರಚನೆ ಮಾಡಿಲ್ಲವೆಂದ ಮೇಲೆ ಸಮ್ಮೇಳನ ಹೇಗೆ ಯಶಸ್ವಿಯಾಗಲು ಸಾಧ್ಯ ಈ ಕುರಿತು ಕನ್ನಡ ಪರ ಹೋರಾಟಗಾರರು, ಹಿರಿಯ ಸಾಹಿತಿಗಳು ಚಿಂತಿಸಬೇಕಿದೆ ಎಂದರು.
ಈ ಕುರಿತು ಕಸಾಪ ತಾಲೂಕಾ ಅಧ್ಯಕ್ಷ ಅಮರೇಶ ಗಾಣಗೇರ ಮಾತನಾಡಿ,ಮೊನ್ನೆಯ ದಿನ ನಡೆದ ಸಭೆಯು ತರಾತುರಿಯಲ್ಲಿ ನಡೆದಿದೆ. ಅದಕ್ಕಾಗಿಯೇ ಎಲ್ಲಾರನ್ನು ಒಗ್ಗೂಡಿಸುವ ಕೆಲಸ ಮಾಡತ್ತಾ ಇದ್ದೇವೆ. ನಾಳೆಯ ಗುರುವಾರ ಮೈಸೂರು ಮಠದಲ್ಲಿ ಎಲ್ಲಾ ಕನ್ನಡ ಪರ ಸಂಘಟನೆಯ ಅಧ್ಯಕ್ಷರುಗಳನ್ನು, ಪದಾಧಿಕಾರಿಗಳು ಹಿರಿಯ ಸಾಹಿತಿಗಳ ಸಭೆ ಕರೆದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳನ್ನು ಹಂಚಿಕೊಳ್ಳುತ್ತೇನೆ. ಸರ್ವರೂ ಕೂಡಿಕೊಂಡು ಕನ್ನಡಮ್ಮ ಅದ್ದೂರಿ ಕಾರ್ಯಕ್ರಮ ಮಾಡೋಣ ಎಂದರು.