
ಚಿರತೆ ದಾಳಿcrimeಅಂತಾರಾಷ್ಟ್ರೀಯಅಪಘಾತಆತ್ಮಹತ್ಯೆಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಬಾಗಲಕೋಟೆರಾಜ್ಯ ಸುದ್ದಿರಾಷ್ಟೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಗಜೇಂದ್ರಗಡದಲ್ಲಿ ಚಿರತೆ ದಾಳಿ: ಜಮೀನಿನಲ್ಲಿ ಕಟ್ಟಿಹಾಕಿದ್ದ ಆಡು,ಆಕಳು ಬಲಿ.!
ಭಾನುವಾರ ರಾತ್ರಿ ದಾಳಿ ಮಾಡಿರುವ ಚಿರತೆ ಒಂದು ಆಡು, ಒಂದು ಆಕಳನ್ನು ತಿಂದು ಹಾಕಿದೆ.
Janadhwani News Gajendrgad : ಗಜೇಂದ್ರಗಡ-ಕಾಲಕಾಲೇಶ್ವರ ಗುಡ್ಡದ ನಡುವೆ ಅಂಬರ ಕೊಳ್ಳದ ವ್ಯಾಪ್ತಿಯಲ್ಲಿ ಆಗಾಗ ಪ್ರತ್ಯಕ್ಷವಾಗುವ ಚಿರತೆ ದಾಳಿಗೆ ಜನರು ಭಯಗೊಂಡಿದ್ದಾರೆ.
ಭಾನುವಾರ ರಾತ್ರಿ ದಾಳಿ ಮಾಡಿರುವ ಚಿರತೆ ಒಂದು ಆಡು, ಒಂದು ಆಕಳನ್ನು ತಿಂದು ಹಾಕಿದೆ.
ತಾವರೆಪ್ಪ ಜೀವಲಪ್ಪ ಮಾಳೋತ್ತರ ಎನ್ನುವರ ಹೊಲದಲ್ಲಿ ನಡೆದ ಮೇಲೆ ದಾಳಿಯಾಗಿದೆ. ಚಿರತೆ ಪ್ರತ್ಯಕ್ಷಗೊಂಡ ಸಮೀಪದಲ್ಲಿ ಹೊಲದಲ್ಲಿಯೇ ರೈತರು ಮನೆಮಾಡಿಕೊಂಡು ವಾಸ ಮಾಡುತ್ತಾರೆ. ಇದರ ಪಕ್ಕದಲ್ಲಿಯೇ ರಾಣಿ ಚೆನ್ನಮ್ಮ ವಸತಿ ಶಾಲೆ ಇದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಇರುತ್ತಾರೆ. ಹಾಗಾಗಿ ಆತಂಕದಿಂದ ಜನರು ಇದ್ದಾರೆ. ಇನ್ನೂ ಎಷ್ಟು ಮನವಿ ಮಾಡಿದರು ಅರಣ್ಯ ಇಲಾಖೆಯವರು ಮಾತ್ರ ಚಿರತೆಯ ದಾಳಿ ತಡೆಯಲು ಬೋನ್ ಇಟ್ಟು ಹಿಡಿಯಲು ಮುಂದಾಗುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಅಳಲಾಗಿದೆ.