ಸಾಮಾಜಿಕ ಸೇವೆ ನಮ್ಮೆಲ್ಲರ ಧ್ಯೇಯವಾಗಲಿ: ಪುರಸಭೆ ಸದಸ್ಯ ರಾಜೂ ಸಾಂಗ್ಲಿಕರ್
ಸಾಮಾಜಿಕ ಸೇವೆ ನಮ್ಮೆಲ್ಲರ ಧ್ಯೇಯವಾಗಲಿ: ಪುರಸಭೆ ಸದಸ್ಯ ರಾಜೂ ಸಾಂಗ್ಲಿಕರ
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ವರದಿ:: ರವಿ ನಿಡಗುಂದಿ.
ಗಜೇಂದ್ರಗಡ :
ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ . ಸಮಾಜ ಸೇವೆ ನಮ್ಮ ದ್ಯೇಯವಾಗಲಿ ಎಂದು ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ ಹೇಳಿದರು.
ಸಮೀಪದ ಕಾಲಕಾಲೇಶ್ಚರ ಗ್ರಾಮದಲ್ಲಿರುವ ಅಥರ್ವ ನವೋದಯ ಕೋಚಿಂಗ್ ಸೆಂಟರ್‌ನಲ್ಲಿ ಸೋಮವಾರ ಜರುಗಿದ ಉಚಿತ ನೋಟಬುಕ್-ಪೆನ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನನಗಲ್ಲ, ನಮಗೆ’ ಎಂಬ ಸಾಮಾಜಿಕ ಒಗ್ಗಟ್ಟು ನಾವು ಮೈಗೂಡಿಸಿಕೊಳ್ಳಬೇಕು. ನಾವು “ನನಗಾಗಿ’ ಬದುಕುವುದಕ್ಕಿಂತ “ನಮಗಾಗಿ’ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ ಸಾಮಾಜಿಕ ತುಡಿತ ಇರುವುದು ಅಗತ್ಯ ಎಂದು ಹೇಳಿದರು.
ಸಮಾಜ ಸೇವಕ ಶಶಿಧರ ಹೂಗಾರ, ಅಥರ್ವ ನವೋದಯ ಕೋಚಿಂಗ್ ಸೆಂಟರ್ ಪ್ರಾಚಾರ್ಯ ಡಿ.ಜಿ.ತಾಳಿಕೋಟಿ ಮಾತನಾಡಿ, ಸಮಾಜದಲ್ಲಿ ಅನ್ಯಾಯ ಎದುರಾದಾಗ ಅದರ ವಿರುದ್ಧವಾಗಿ ಧ್ವನಿಯಾಗಿ ನ್ಯಾಯಕ್ಕಾಗಿ ಹೋರಾಡುವವರೇ ಸಾಮಾಜಿಕ ಕಾರ್ಯಕರ್ತರು. ಗಜೇಂದ್ರಗಡ ದಲ್ಲಿ ಮುಕ್ತುಂಸಾಬ ಮುಧೋಳ ಹಾಗೂ ರವಿ ಗಡೇದವರ ಅವರ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜ ಸೇವೆ ಇದೊಂದು ವೃತ್ತಿಯಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಸಮಾಜದ ಒಗ್ಗಟ್ಟು, ಸಾಮರಸ್ಯ ಕಾಪಾಡಲು ಇವರುಗಳ ಸೇವೆ ಅನನ್ಯ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತುಂಸಾಬ ಮುಧೋಳ, ಕಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರವಿ ಗಡೇದವರ, ಪತ್ರಕರ್ತ ಸೀತಲ್ ಓಲೇಕಾರ ಅವರ ಜನ್ಮದಿನವನ್ನು ಸಸಿ ನೆಟ್ಟು, ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಇದೇ ವೇಳೆ ಹಿರಿಯ ಪತ್ರಕರ್ತ ಸೋಮು ಲದ್ದಿಮಠ, ದಾವಲಸಾಬ ಮುಲ್ಲಾ, ಬಸವರಾಜ ಹುಚ್ಚಯ್ಯನಮಠ, ಸಂಗಪ್ಪ ಯಲಬುಣಚಿ, ವಿರೇಶ ರಾಠೋಡ, ಅಲ್ಲಾಭಕ್ಷಿ ನಧಾಪ, ಲಿಂಗರಾಜ ತಳ್ಳಿಹಾಳ,ರಾಜು ಸೂರ್ಯವಂಶಿ, ವೀರಣ್ಣ ಸಂಗಳದ, ಮಂಜುನಾಥ ರಾಠೋಡ, ಶಿಕ್ಷಕಿ ಮೈತ್ರಾ ಹೂಗಾರ, ಮಂಜುನಾಥ ದೊಡ್ಡಮನಿ, ಎಡ್ವರ್ಡ್, ನಂದೀಶ ಪವಾರ ಸೇರಿದಂತೆ ಇತರರು ಇದ್ದರು.
Nicejob