ಕುಷ್ಟಗಿಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಧಾರವಾಡಪರೀಕ್ಷೆರಾಜ್ಯ ಸುದ್ದಿ
ಕೋಟೆನಾಡು ಗಜೇಂದ್ರಗಡದಲ್ಲಿ ಲೋಕಾಯುಕ್ತ ದಾಳಿ: ಅಧಿಕಾರಿಗಳಿಂದ ದಾಖಲೆ ಪರಿಶೀಲನೆ.
ಜಿಲ್ಲಾ ಪಂಚಾಯತ ಎಸ್.ಡಿ.ಎ. ಮನೆ ಮೇಲೆ ಲೋಕಾಯುಕ್ತ ದಾಳಿ
ಜಿಲ್ಲಾ ಪಂಚಾಯತ ಎಸ್.ಡಿ.ಎ. ಮನೆ ಮೇಲೆ ಲೋಕಾಯುಕ್ತ ದಾಳಿ.
ಜನಧ್ವನಿ ಕನ್ನಡ ಸುದ್ದಿಮೂಲ:
ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಗದಗ ಜಿಲ್ಲಾ ಪಂಚಾಯಿತಿ ಎಸ್.ಡಿ.ಎ. ಲಕ್ಷ್ಮಣ ಕರ್ಣೆ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಗದಗ ನಗರದ ಆರ್ ಕೆ ಬಡಾವಣೆಯ ಮನೆ ಸೇರಿದಂತೆ ಐದು ಕಡೆಗಳಲ್ಲಿ ಈ ದಾಳಿ ನಡೆದಿದೆ. ಗದಗ, ಗಜೇಂದ್ರಗಡ, ಹಾವೇರಿಯಲ್ಲಿ ಕರ್ಣಿಗೆ ಸಂಬಂಧಿಸಿದ ಮನೆ ಮತ್ತು ಆಸ್ತಿ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಹಿರೇಬಜಾರದಲ್ಲಿನ ಮನೆಯ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ ನಗರದಲ್ಲಿ ೩ ಕಡೆ, ೧ ಹಾವೇರಿ, ೧ ಗಜೇಂದ್ರಗಡ ದಲ್ಲಿ ದಾಳಿ ನಡೆದಿದ್ದು,ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಹಾಗೂ ಸಮಗ್ರ ವರದಿ ಸಂಗ್ರಹ ಕಾರ್ಯ ನಡೆಯುತ್ತಿದೆ.