crimeಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಟ್ರೆಂಡಿಂಗ್ ಸುದ್ದಿಗಳುಬಾಗಲಕೋಟೆರಾಜ್ಯ ಸುದ್ದಿರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು
ಅಕ್ರಮ ಆಸ್ತಿ ಗಳಿಕೆ ಆರೋಪ! ಗದಗ ಬೆಟಗೇರಿ ನಗರಸಭೆ ಇಂಜನೀಯರ್ ಬಂಡಿವಡ್ಡರ್ ನಿವಾಸದ ಮೇಲೆ ದಾಳಿ!
ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ರೇಡ್ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.
Janadhwani News Gadad : ಗದಗ: ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗದಗ ಬೆಟಗೇರಿ ನಗರಸಭೆ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು, ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ರೇಡ್ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.
ಲೋಕಾಯುಕ್ತ ಎಸ್ ಪಿ ಹನಮಂತರಾಯ್, ಡಿವೈಎಸ್ ಪಿ ವಿಜಯ್ ಬಿರಾದಾರ್, ಇನ್ಸಪೆಕ್ಟರ್ ಪರಮೇಶ್ ಕವಟಗಿ ಸೇರಿದಂತೆ ಧಾರವಾಡ ಸಿಬ್ಬಂದಿಯಿಂದ ದಾಖಲೆ ಪರಿಶೀಲನೆ ನಡೆಸಲಾಗ್ತಿದ್ದು, ಪಿಎಸ್ ಐ ಎಸ್ ಎಸ್ ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಭಾಗಿಯಾಗಿದ್ದಾರೆ.