ಸ್ಥಳೀಯ ಸುದ್ದಿಗಳುಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಮಸಣದ ಹೂವಿನ ನಾಯಕಿ ಮಸಣಕ್ಕೆ : ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಿಧಿವಶ!

Share News

ಮಸಣದ ಹೂವಿನ ನಾಯಕಿ ಮಸಣಕ್ಕೆ : ಸ್ವಚ್ಚಂದ ಕನ್ನಡದ
ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ.

ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!
ಕನ್ನಡಿಗರ ಮನೆ ಮತಾಗಿರುವ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ. ಇಂದು ಸಂಜೆ ತಮ್ಮ ನಿವಾಸದಲ್ಲಿ ಅಪರ್ಣಾ ನಿಧನರಾಗಿದ್ದಾರೆ.

ಬೆಂಗಳೂರು::

ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣ ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಅಪರ್ಣ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ. ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ, ಇತ್ತೀಚೆಗೆ ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದರು.

ಹೀಗಾಗಿ ಹಲವು ದಿನಗಳ ವಿಶ್ರಾಂತಿ ಪಡೆದಿದ್ದರು. ಅಪರ್ಣಾ ಸಾವು ಕನ್ನಡಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿನಿಮಾ, ಟಿವಿ, ಸಾಹಿತ್ಯ ಲೋಕ ಸೇರಿದಂತೆ ಹಲವು ದಿಗ್ಗಜರು ಅಪರ್ಣಾ ಸಾವಿನ ಸುದ್ದಿಗೆ ಆಘಾತ ವ್ಯಕ್ತಪಡಿಸಿದ್ದಾರೆ.

1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದ ಅಪರ್ಣಾ ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು.

90 ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ನೆಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ ರಿಯಾಲಿಟಿ ಶೋಗಳಲ್ಲೂ ಸೈ ಎನಿಸಿಕೊಂಡಿದ್ರು. ಇನ್ನು 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಹಾಸ್ಯ ನಟಿಯಾಗಿಯೂ ಜನರ ಮನಗೆದ್ದಿದ್ದರು. ಮಜಾ ಟಾಕೀಸ್ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಅಪರ್ಣಾ, ಹಾಸ್ಯ ಪಾತ್ರಗಳಲ್ಲೂ ನಟನಾ ಕೌಶಲ್ಯ ಮೆರೆದಿದ್ದರು.

ಬಹುಮುಖ ಪ್ರತಿಭೆ ಅಪರ್ಣಾ ನಿಧನ ಸುದ್ದಿ ಕನ್ನಡಿಗರಿಗೆ ಆಘಾತ ತಂದಿದೆ.

Share News

Related Articles

Leave a Reply

Your email address will not be published. Required fields are marked *

Back to top button