ಕೋಟೆನಾಡಿನ 9 ಜನರಿಗೆ ಒಲಿದ ರಾಷ್ಟ್ರೀಯ ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ.!
ದೆಹಲಿಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ದೆಹಲಿಯಲ್ಲಿ ಡಿ.೮ , ೯ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಡಾ.ಸುಮಣಾಕ್ಷಾರ ಅವರು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
Janadhwani News Gajendrgad ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ಕೋಟೆನಾಡಿನಲ್ಲಿನ 9 ಜನರಿಗೆ ದೆಹಲಿಯಲ್ಲಿ ನಡೆಯುವ ೪೦ ನೇ ರಾಷ್ಟ್ರೀಯ ದಲಿತ ಬರಹಗಾರ ಮತ್ತು ಪತ್ರಕರ್ತರ ಸಮ್ಮೇಳನದಲ್ಲಿ ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ದೆಹಲಿಯಲ್ಲಿ ಡಿ.8 ,9 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಡಾ.ಸುಮಣಾಕ್ಷಾರ ಅವರು ಪ್ರಶಸ್ತಿ
ಪ್ರಧಾನ ಮಾಡಲಾಗುತ್ತದೆ.
ಈ ಕುರಿತು ನಗರದ ರೋಣ ರಸ್ತೆಯಲ್ಲಿನ ಐ.ಬಿ.ಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಗದಗ ಜಿಲ್ಲಾಧ್ಯಕ್ಷ ರವಿ ಗಡೇದವರ ಮಾತನಾಡಿ ಕೋಟೆನಾಡಿನಲ್ಲಿ ಮಾಡಿರುವ ಸಮಾಜ ಸೇವೆಯನ್ನು ಗಮನದಲ್ಲಿರಿಸಿ 9 ಜನರಿಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಗರದ ಪುರಸಭೆಯ ಸದಸ್ಯರಾದ ರಾಜೂ ಸಾಂಗ್ಲೀಕರ್, ಮುದಿಯಪ್ಪ ಮುಧೋಳ, ರೂಪಲೇಪ್ಪ ರಾಠೋಡ, ಕನಕಪ್ಪ ಅರಳಿಗಿಡದ, ದುರಗಪ್ಪ ಮುಧೋಳ, ದುರಗಪ್ಪ ಕಲ್ಲೊಡ್ಡರ, ಸಿದ್ದಪ್ಪ ಚೋಳಿನ್, ಯಲ್ಲಪ್ಪ ಬಂಕದ, ನಿವೃತ್ತ ಹಿಂದೂಳಿದ ವರ್ಗಗಳ ಅಧಿಕಾರಿ ಹನಮಂತಪ್ಪ ಚುಂಚಾ, ಆಯ್ಕೆಯಾಗಿದ್ದು. ಡಿಸೆಂಬರ್ 8 ಮತ್ತು 9ರಂದು ದೆಹಲಿಯಲ್ಲಿ ನಡೆಯುವ 40ನೇ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ನಡೆಯುವ ದಲಿತ ಬರಹಗಾರ ಮತ್ತು ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ. ಆಯ್ಕೆಯಾದ ಸಹೋದರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.