ಹೊಸ ವರ್ಷಕ್ಕೆ ವಿಜಯ ಪತಾಕೆ ಚಲನಚಿತ್ರದ ಚಿತ್ರದ ಟೀಸರ್ ಅನಾವರಣ
ನಾಳೆ ಮಾಳು ನಿಪನಾಳ ಯುಟ್ಯೂಬ್ ದಲ್ಲಿ ಟೀಸರ್ ಬಿಡುಗಡೆ
ಹೊಸ ವರ್ಷಕ್ಕೆ ವಿಜಯ ಪತಾಕೆ ಚಲನಚಿತ್ರದ ಚಿತ್ರದ ಟೀಸರ್ ಅನಾವರಣ.
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ:
ಕೋಟೆನಾಡಿನ ಯುವಕ ಆರ್.ಶೈನ್ ನಾಯಕ ನಟನಾಗಿ, ಕಥೆ, ಚಿತ್ರಕಥೆ, ನಿರ್ದೇಶನವನ್ನು ಮಾಡಿ, ನಾಯಕ ನಟಿಯಾಗಿ ವಾಣಿ ವಿಜಯಪುರ, ಖ್ಯಾತ ಖಳನಾಯಕ ಶೋಭರಾಜ ಸೇರಿದಂತೆ ಅನೇಕ ತಾರಾಗಣ ಒಳಗೊಂಡ ವಿಜಯ ಪತಾಕೆ ಚಲನಚಿತ್ರದ ಮೊದಲ ಟೀಸರ್ ಹೊಸ ವರ್ಷಕ್ಕೆ ಬುಧುವಾರ ಅನಾವರಣಗೊಳ್ಳಲಿದೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ವಿಜಯ ಪತಾಕೆ ಚಲನಚಿತ್ರವೂ ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್ಸ್ ನಿಂದ ನಿರ್ಮಾಣ ಮಾಡಿದ್ದು, ಉತ್ತರ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದರಾದ ಮಾಳು ನಿಪನಾಳ ಅವರ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ದಲ್ಲಿ ಬುಧುವಾರ ಮುಂಜಾನೆ 9 : 30 ಗಂಟೆಗೆ ವಿಜಯ ಪತಾಕೆಯ ಚಲನಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಲಿದೆ. ಎಲ್ಲರೂ ಕೂಡಾ ವಿಕ್ಷೀಸಬಹುದಾಗಿದೆ.
ಉತ್ತರ ಕರ್ನಾಟಕ ಬಹುತೇಕ ಕಲಾವಿದರು ಚಲನಚಿತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಕಲಾವಿದರನ್ನು ಆ ಕಡೆ ಭಾಗದ ಜನರು ಬೆಳೆಸಲ್ಲ ಹಾಗಾಗೀ ಕನ್ನಡ ಚಲನಚಿತ್ರ ರಂಗದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದು, ಹೀಗಾಗಿ ಉತ್ತರ ಕರ್ನಾಟಕದ ಜನತೆಗಯೂ ಬೆನ್ನುತಟ್ಟಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕಿ ನಟಿ ವಾಣಿ ವಿಜಯಪುರ, ಹರೀಶ ಪತ್ತಾರ ಮಾತನಾಡಿ ಬಹಳಷ್ಟು ಕಷ್ಟ ಪಟ್ಟು ಚಿತ್ರವನ್ನು ನಿರ್ಮಾನಿಸಿದ್ದಾರೆ. ಒಂದೊಳ್ಳೆ ಸಂದೇಶ ನೀಡುವ ಚಲನಚಿತ್ರ ಇದಾಗಿದೆ. ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಿ.ಆರ್.ಓ ಡಾ.ಪ್ರಭು ಗಂಜಿಹಾಳ,
ಸಂಗನಗೌಡ ಕುರಡಗಿ, ಜಯದೇವ ಗಂಜಿಹಾಳ ಸೇರಿದಂತೆ ಅನೇಕರು ಇದ್ದರು.
ವರದಿ; ಸೀತಲ ಓಲೇಕಾರ.