ಗದಗಆರೋಗ್ಯ ಇಲಾಖೆಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಸು.ಒಂದು ತಿಂಗಳುಗಳ ಕಾಲ ನಡೆಯುವ ಬಸವ ಪುರಾಣಕ್ಕೆ ನಾಳೆ ಚಾಲನೆ

Share News

ಸು.ಒಂದು ತಿಂಗಳುಗಳ ಕಾಲ ನಡೆಯುವ ಬಸವ ಪುರಾಣಕ್ಕೆ ನಾಳೆ ಚಾಲನೆ.

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಲು ಪುರಾಣ ಸಮಿತಿಯ ಮನವಿ.

ಜನಧ್ವನಿ ಕನ್ನಡ ಸುದ್ದಿಮೂಲ

ಗಜೇಂದ್ರಗಡ ಪಟ್ಟಣದಲ್ಲಿನ
ಎ.ಪಿ.ಎಂ.ಸಿ. ಎದುರಿನ ಬಯಲು ಜಾಗೆಯಲ್ಲಿ ದಿನಾಂಕ 25/11/2024 ರಿಂದ 26/12/2024 ರ ವರೆಗೆ ಬಸವ ಪುರಾಣ ಆರಂಭವಾಗಲಿದೆ.

ಈ ಹಿನ್ನಲೆಯಲ್ಲಿನ ಬಸವ ಪುರಾಣದ ಪ್ರಾರಂಭೋತ್ಸವದಲ್ಲಿ ನಾಡಿನ ಹೆಸರಾಂತ ಶ್ರೀಗಳಾದ
ಪರಮ ಪೂಜ್ಯಶ್ರೀ ಮ.ನಿ.ಪ್ರ ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಮೈಸೂರು ಸಂಸ್ಥಾನಮಠ-ಗಜೇಂದ್ರಗಡ ಹಾಗೂ ಪೂಜ್ಯಶ್ರೀ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭಾವೈಕ್ಯತಾ ಸಂಸ್ಥಾನಮಠ, ಶಿರಹಟ್ಟಿ ಪೂಜ್ಯರ ಲಿಂಗ ಹಸ್ತದಿಂದ ಉದ್ಘಾಟನೆ ಹಾಗೂ ದಿವ್ಯ ಸಾನಿಧ್ಯವಹಿಸಲಿದ್ದು .

ಈ ಭಾಗದ ಹೆಸರಾಂತ ಪೂಜ್ಯಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ಶಾಖಾ ಶಿವಯೋಗಮಂದಿರ ನಿಡಗುಂದಿಕೊಪ್ಪ ನೇತೃತ್ವದಲ್ಲಿ ಮತ್ತು ಶ್ರೀ ಜಿ. ಎಸ್. ಪಾಟೀಲ, ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗುತ್ತಿದ್ದು,

ಮುಖ್ಯ ಅತಿಥಿಗಳಾಗಿ ಶ್ರೀ ಕಳಕಪ್ಪ ಜಿ. ಬಂಡಿ ಮಾಜಿ ಸಚಿವರು, ಗಜೇಂದ್ರಗಡ ಇವರು ವಹಿಸಲಿದ್ದು,
ಈ ನಾಡಿನ ಅನೇಕ ಮಹಾನ ಚೇತನ್ ಶ್ರೀಗಳಾದ ಪೂಜ್ಯಶ್ರೀ ಮ.ನಿ.ಪ್ರ ಕೊಟ್ಟೂರು ಮಹಾಸ್ವಾಮಿಗಳು ಶ್ರೀ ಸಂಗನಬಸವೇಶ್ವರಮಠ, ದರೂರು ಪೂಜ್ಯಶ್ರೀ ಮ.ನಿ.ಪ್ರ. ನಿರಂಜನ ಪ್ರಭು ಮಹಾಸ್ವಾಮಿಗಳು ಶ್ರೀ ಒಪ್ಪತ್ತೇಶ್ವರ ಸಂಸ್ಥಾನಮಠ, ಗರಗನಾಗಲಾಪೂರ ಪೂಜ್ಯಶ್ರೀ ಸಿದ್ದಲಿಂಗ ದೇಶಿಕರು ವಿರಕ್ತಮಠ, ಸೋಮಸಮುದ್ರ ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು, ಶ್ರೀಧರಗಡ್ಡೆ ಪೂಜ್ಯಶ್ರೀ ವಿಶ್ವೇಶ್ವರ ದೇವರು, ಸಂಗನಾಳ ಇವರ ಸಮ್ಮುಖದಲ್ಲಿ ನಾಡಿನ ಖ್ಯಾತ ಪ್ರವಚನಕಾರರು,ಅನುಭಾವಿಗಳಾದ ಶ್ರೀ ಅನ್ನದಾನ ಶಾಸ್ತಿಗಳು ಗುಡೂರ. ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಇವರಿಗೆ ಸಂಗೀತ ಬಳಗ : ಶ್ರೀ ಸಂಗಮೇಶ ನೀಲಾ ಸಾ. ಸ್ವಂತ. ವಾಯಲಿನ : ಶ್ರೀ ಷಣ್ಮುಖಯ್ಯ ಕಂಚಿನೆಗಳೂರ ತಬಲಾ : ಶ್ರೀ ಸಿದ್ದೇಶಕುಮಾರ ಲಿಂಗನಬಂಡಿ ಸಭಾ ನಿರೂಪಕರಾಗಿ ಶ್ರೀ ಎಫ್. ಎನ್. ಹುಡೇದ ಉಪನ್ಯಾಸಕರು ಶ್ರೀ ಎಸ್.ಎ.ಪಿ.ಯು.ಕಾಲೇಜ್ ನರೇಗಲ್ ಇವರು ನೆರವೆರಿಸುವರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶೋಭೆ ತರಲು ಬಸವ ಪುರಾಣದ ಸಮಿತಿಯ ಸರ್ವ ಸದಸ್ಯರುಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button