ಸಧ್ಬಾವನಾ ಪಾದಯಾತ್ರೆಯೂ ಸೌಹಾರ್ದದತೆಯ ನಡಿಗೆಯ ಸಂಕೇತವಾಗಿದೆ : ಟೆಕ್ಕೆದ ಭಾವನವರು
ಅಂತರಂಗದಲ್ಲಿ ಭಕ್ತಿ ಭಾವ ಮೂಡಲಿ : ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು.
ಸಧ್ಬಾವನಾ ಪಾದಯಾತ್ರೆಯೂ ಸೌಹಾರ್ದದತೆಯ ನಡಿಗೆಯ ಸಂಕೇತವಾಗಿದೆ : ಟೆಕ್ಕೆದ ಭಾವನವರು.
ಜನಧ್ವನಿ ಸುದ್ದಿಮೂಲ ಗಜೇಂದ್ರಗಡ:
ಮನುಷ್ಯನಿಗೆ ಬಾಹ್ಯದ ಸುಖ, ದುಃಖ , ಆಡಂಬರದ ಜೀವನ ಬಿಟ್ಟು, ಅಂತರಂಗದಲ್ಲಿ ಭಕ್ತಿಯ ಭಾವ ಮೂಡಬೇಕಿದೆ ಎಂದು ಹಾಲಕೇರಿಯ ಪೀಠದಾಧಿಪತಿಗಳಾದ ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ೬ ಮತ್ತು ೩ ನೇ ವಾರ್ಡಿನದಲ್ಲಿ ಪಾದಯಾತ್ರೆಯ ನಂತರ ರಂಗಮಂದಿರ ದಲ್ಲಿ ಭಕ್ತರನ್ನು ಉದ್ದೇಶಿಸಿ ಆರ್ಶಿವಚನ ನೀಡುತ್ತಾ.
ಪ್ರಸ್ತುತ ಜೀವಮಾನದಲ್ಲಿ ಎಲ್ಲರೂ ಬಾಹ್ಯ ಸುಖದ ಬಯಕೆಯಿಂದಲೇ ನೋವು, ದುಃಖ, ಅಂಧಕಾರ ಸಹಜವಾಗಿಯೇ ಮೂಡುತ್ತದೆ. ಆದರೆ ವಚನ ಸಾಹಿತ್ಯದ ಮೂಲಕ ಜೀವನದ ಸಾರವನ್ನು ಸಾರಿದ ಬಸವಣ್ಣನವರ ವಚನಗಳು, ೧೨ನೇ ಶತಮಾನದಲ್ಲಿ ಶಿವ ಶರಣರು ಹಾಕಿಕೊಟ್ಟ ಹಾದಿಯಲ್ಲಿ ನಾವೂ ನೀವು ಎಲ್ಲಾ ಸಾಗಬೇಕು ಅಂದಾಗ ಮಾತ್ರ ಬಾಹ್ಯ ಮತ್ತು ಅಂತರಂಗ ಶುದ್ದಿಯಾಗುತ್ತದೆ ಎಂದರು.
ಬಳಿಕ ಟೆಕ್ಕೆದ ದರ್ಗಾದ ಹಜರತ್ ಸೈಯ್ಯದ್ ನಿಜಾಮುದ್ದೀನ್ ಷಾ ಅರ್ಶಿಫಿ ಮಕಾನದಾರ ಮಾತನಾಡಿ ಇವತ್ತಿನ ದಿನಗಳಲ್ಲಿ ಎಲ್ಲರೂ ಜಾತಿ ಜಾತಿ ಎಂದು ಬಡಿದಾಡುವ ಸ್ಥಿತಿ ಬಂದಿದೆ. ಮನುಷ್ಯನಿಗೆ ಜಾತಿಗಿಂತ ನೀತಿ ಮುಖ್ಯ. ಶ್ರೀಗಳು ಪಾದಯಾತ್ರೆಯಲ್ಲಿ
ಜೋಳಿಗೆ ಹಿಡಿದು ಸಾಗಿದ್ದಾರೆ.ಕಾರಣ ದುಶ್ಚಟಗಳನ್ನು ಬಿಡಿಸುವ ಜೋಳಿಗೆ ಅದು.ಇಂತಹ ಸದ್ಬಾವನಾ ಪಾದಯಾತ್ರೆಯು ಸೌಹಾರ್ದದಿಂದ ನಡೆಯಬೇಕು ಎಂದರು.
ಇನ್ನೂ ಹೆಂಗಳೆಯರು ಪ್ರಾಥಃ ಕಾಲದಲ್ಲಿ ಎದ್ದು,
ಪೂಜ್ಯರು ಸಾಗುವ ಹಾದಿಯೂದಕ್ಕೂ ರಂಗು ರಂಗಿನ ರಂಗೋಲಿಗಳನ್ನು ಹಾಕಿ ಶ್ರೀಗಳ ಪಾದಕಮಲಗಳಿಗೆ ಪುಷ್ಪಗಳನ್ನು ಅರ್ಪಣೆ ಮಾಡಿ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.
ಬಳಿಕ ಖ್ಯಾತ ಪ್ರವಚನಕಾರರಾದ ಶ್ರೀ ಅನ್ನದಾನ ಶಾಸ್ತ್ರಿಗಳು, ಪ್ರಭು ಚವಡಿ, ಡಾ.ಬಿ.ವ್ಹಿ. ಕಂಬಳ್ಯಾಳ ಮಾತನಾಡಿದರು.
ಇನ್ನೂ ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಶ್ರೀಗಳು ಸಾಥ್ ನೀಡಿದ್ದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ವೀರಶೈವ ಲಿಂಗಾಯತ ಸಮಾಜ ಉಣಚಗೇರಿ ಗಜೇಂದ್ರಗಡ ಅಧ್ಯಕ್ಷ ಸಿದ್ದಪ್ಪ ಬಂಡಿ,
ಪ್ರಭು ಚವಡಿ, ರಾಜೂ ಸಾಂಗ್ಲೀಕರ, ನಾಗಯ್ಯ ಗೊಂಗಡಶೆಟ್ಟಿಮಠ, ಬಸವರಾಜ ಕೊಟಗಿ, ಕಸಾಪ ಅಧ್ಯಕ್ಷ ಅಮರೇಶ ಗಾಣಗೇರ, ಕಳಕಯ್ಯ ಸಾಲಿಮಠ, ಅಮರಯ್ಯ ಗೌರಿಮಠ, ಶಿವುಕುಮಾರ ಶಶಿಮಠ, ವಿಶ್ವನಾಥ ಕುಷ್ಟಗಿ, ಎಸ್.ಕೆ. ಸರಗಣಾಚಾರಿಮಠ, ಸಿದ್ದು ಗೊಂಗಡಶೆಟ್ಟಿಮಠ, ವಿರೇಶ ಸರಗಣಾಚಾರಿಮಠ, ಪ್ರಕಾಶ ಬಳಿಗೇರ, ಸುರೇಶ ಮರದ, ಕಳಕಪ್ಪ ಮಡಿವಾಳರ, ಚಂದ್ರು ಆಲಾಪೂರ, ರವಿ ವಡಗೇರ, ಪ್ರದೀಪ ಗೊಂಗಡಶೆಟ್ಟಿಮಠ, ಶಿವಪ್ಪ ಹಡಪದ, ಚಿದಾನಂದಪ್ಪ ಹಡಪದ, ರಾಜಪ್ಪ ಹೊಸಮನಿ, ಮಾಸುಮಲಿ ಮದಗಾರ, ಕಾಸೀಂ ಹವಾಲ್ದಾರ, ಭೀಮಸಿ ಹಾಲಕೇರಿ, ಮಹೇಶ ಬಿಕ್ಷಾವತಿಮಠ ಸೇರಿದಂತೆ ಅಪಾರ ಭಕ್ತಸ್ತೋಮ ಇದ್ದರು.