ಆತ್ಮಹತ್ಯೆcrimeಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಾಗಲಕೋಟೆಬಿಸಿನೆಸ್ ಕನೆಕ್ಟ್ರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರ್ ಚಾಲಕ ಆತ್ಮಹತ್ಯೆ!

ಸುನೀಲ್ ಚವ್ಹಾಣ (25) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡದ ಕಾಲೋನಿಯಲ್ಲಿರುವ ಶಾಸಕ ಚಂದ್ರು ಲಮಾಣಿ ಅವರಿಗೆ ಸೇರಿದ, (ಅತಿಥಿಗಳಿಗೆಂದು ಮೀಸಲಿಟ್ಟಿದ್ದ ಮನೆ) ಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share News

Janadhwani News Lakshmeshwara ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಸುನೀಲ್ ಚವ್ಹಾಣ (25) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡದ ಕಾಲೋನಿಯಲ್ಲಿರುವ ಶಾಸಕ ಚಂದ್ರು ಲಮಾಣಿ ಅವರಿಗೆ ಸೇರಿದ, (ಅತಿಥಿಗಳಿಗೆಂದು ಮೀಸಲಿಟ್ಟಿದ್ದ ಮನೆ) ಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಮನೆ ಕಟ್ಟುವ ವಿಷಯದಲ್ಲಿ ಸಹೋದರರ ನಡುವೆ ಕಲಹ ಏರ್ಪಟ್ಟಿತ್ತು. ಹೀಗಾಗಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಶಾಸಕರ ಹತ್ತಿರದ ಸಂಬಂಧಿಯೂ‌ ಆಗಿರುವ ಸುನೀಲ್, ಕಳೆದ ಮೂರು ವರ್ಷಗಳಿಂದ ಶಾಸಕರಿಗೆ ಚಾಲಕನಾಗಿ ಕೆಲಸ‌ ಮಾಡುತ್ತಿದ್ದನು.

ಸ್ಥಳಕ್ಕೆ ಪೊಲೀಸರು ಭೇಟಿ‌ ನೀಡಿ,‌ ಪರಿಶೀಲನೆ ನಡೆಸಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Share News

Related Articles

Leave a Reply

Your email address will not be published. Required fields are marked *

Back to top button