ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಬಂಡಿ ನಾಮಪತ್ರ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಬಂಡಿ ನಾಮಪತ್ರ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಗದಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ – ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಬಂಡಿ ನಾಮಪತ್ರ ಸಲ್ಲಿಕೆ.
ಗಜೇಂದ್ರಗಡ ತಾಲೂಕಾ ಅಧ್ಯಕ್ಷನಾಗಿ ಸಲ್ಲಿಸಿದೆ ಸಮಾಜ ಸೇವೆ. ಸಮಾಜದ ಹಿರಿಯರ ಒತ್ತಾಸೆಗೆ ಸ್ಪರ್ಧೆ ಮಾಡಿದ್ದೇನೆ. ಗದಗ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಬಂಡಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಸಿದ್ದಪ್ಪ ಬಂಡಿಯವರು. ಹಿರಿಯರ ಒತ್ತಾಸೆಯ ಮೇರೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಈಗಾಗಲೇ ಗಜೇಂದ್ರಗಡ ತಾಲೂಕಾ ಅಧ್ಯಕ್ಷನಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದೇನೆ. ಅದನ್ನು ಗುರುತಿಸಿದ ಸಮಾಜದ ಹಿರಿಯರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹೇಳಿದ್ದಾರೆ. ಗದಗ ನಗರದಲ್ಲಿ ಸಮಾಜಕ್ಕೆ ಸೇರಿದ 20 ಗುಂಟೆ ಜಾಗವಿದೆ. ಜಿಲ್ಲಾಧ್ಯಕ್ಷನಾದ ನಂತರ ಹಿರಿಯರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ಅನುದಾನ ತೆಗೆದುಕೊಂಡು ಆ ಜಾಗವನ್ನು ಜೀರ್ಣೋದ್ಧಾರ ಮಾಡುತ್ತೇನೆ. ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ನಾಳೆ ನಾಮಪತ್ರ ಪರಿಶೀಲಿಸುವ ಕಾರ್ಯವಾಗಲಿದೆ ಜೂಲೈ 8 ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದು. ಜೂಲೈ 21 ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ ಮತ್ತು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.