ದಕ್ಷ, ಜನಸ್ನೇಹಿ ಪೋಲಿಸಪ್ಪನ ನಿವೃತ್ತಿ ಕುರಿತು ವಿಶೇಷ ಲೇಖನ.
ದಕ್ಷ ಪೋಲಿಸ್ ಎ.ಎಸ್.ಐ ಎಸ್.ಬಿ.ದಾಡಿಭಾವಿ ನಿವೃತ್ತಿ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಗಜೇಂದ್ರಗಡ::
ಪೋಲಿಸ್ ಎಂದರೆ ಏನೋ ಭಯ, ಪೋಲಿಸ್ ಎಂದರೆ ಏನೋ ಆಂತಕ, ಅನ್ನೋ ಜನರ ನಡುವೆ
ಪೋಲಿಸ್ ಎಂದರೆ ರಕ್ಷಣೆ, ನಂಬಿಕೆ, ವಿಶ್ವಾಸ, ಜನಸ್ನೇಹಿ ಹೀಗೆ ಸಮಾಜದಲ್ಲಿನ ಪ್ರತಿಯೊಂದು ವರ್ಗದವರನ್ನು ತಮ್ಮಂತ ಸೆಳೆದು ಪೋಲಿಸ್ ಎಂದರೆ ಭಯ ಬೇಡ ಎಂದು ತಿಳಿಸಿದ ಪೋಲಿಸಪ್ಪನ ಕುರಿತು ಇವತ್ತಿನ ಲೇಖನ….
ಲೇಖಕರು : ಸೀತಲ ಓಲೇಕಾರ.
ಅದೊಂದು ಇತ್ತು ಕಾಲ ಪೋಲಿಸ್ ಠಾಣೆ ಹೆಸರು ಅದರ ಮೆಟ್ಟಿಲು ಏರಿದವರ ಸ್ಥಿತಿ ಅಂಥೋ ಏನೋ ಘೋರವಾದ ಅಪರಾಧ ಮಾಡಿದ ಹಾಗೇ ಇಡೀ ಊರಿಗೆ ಊರೇ ಅವರನ್ನು ಹೇಯವಾಗಿ, ಹೀನವಾಗಿ, ಕ್ರೂರವಾಗಿ ನೋಡುವ ಕಾಲವಿತ್ತು. ಕಾಲ ಬದಲಾದಂತೆ ಪೋಲಿಸ್ ಇಲಾಖೆಯ ಕಾನೂನುಗಳು ಬದಲಾಗುತ್ತಾ ಬಂದಿವೆ.
೧೯೯೦ ರಿಂದ ೨೦೦೦ ವರ್ಷಗಳಲ್ಲಿ ಪೋಲಿಸ್ ಇಲಾಖೆಯ ನೌಕರಿ ಮಾಡಲು ಘಟ್ಸ ಬೇಕು ಏನು ಎನ್ನುವ ಪದಕ್ಕೆ ಅದೆಷ್ಟೋ ಜನ ಪೋಲಿಸ್ ಇಲಾಖೆಯ ನೌಕರಿ ತೊರೆದಿದ್ದು ಉಂಟು. ಹೀಗಿರುವಾಗ ನಾನು ಇವತ್ತು ಒಬ್ಬ ಪೋಲಿಸಪ್ಪನ ಬಗ್ಗೆ ನಿಮ್ಮಗೆ ಹೇಳಲೇ ಬೇಕು. ಯಾರು ಅಂತಿರಾ ಈ ಸ್ಟೋರಿ ಓದಿ….
ಇವರು 24/11/1993 ರಲ್ಲಿ ಪೋಲಿಸ್ ವೃತ್ತಿಯಾದ ಸಿ.ಪಿ.ಸಿ. ಹುದ್ದಗೆ ಆಯ್ಕೆಯಾಗಿ ಮೊದಲು ಬ್ಯಾಡಗಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ವೃತ್ತಿ ಪ್ರಾರಂಭಿಸಿದರು. ಇವರು ಸಭ್ಯತೆ ಸೂಕ್ಷ್ಮ ಸಂವೇದನೆಯಿಂದ ಕಾರ್ಯ ನಿರ್ವಹಿಸುವ ಇವರು ಬ್ಯಾಡಗಿ ಠಾಣೆಯ ನಂತರ ನರಗುಂದದಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿದರು ಬಳಿಕ ಗದಗ ಗೆ ವರ್ಗಾವಣೆಗೊಂಡು ಅಲ್ಲಿಯೂ ಸಹ ತಮ್ಮದೆ ಶೈಲಿಯಲ್ಲಿ ವೃತ್ತಿ ಜೀವನವನ್ನು ಕಳೆದರು.
ಬಳಿಕ ಈ ಪೋಲಿಸಪ್ಪ ನನಗೆ ಪರಿಚಯವಾದ್ದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿನ ಪೋಲಿಸ್ ಠಾಣೆಯಲ್ಲಿ ಆಗ ನಮ್ಮಗೂ ಪೋಲಿಸ್ ಇಲಾಖೆಗೂ ಒಡನಾಟದ ಬಗ್ಗೆ ಮಾಹಿತಿ ಪಡೆದರು. ಅದೇನೋ ಗೊತ್ತಿಲ್ಲ ನನ್ನ ವೃತ್ತಿ ಜೀವನದಲ್ಲಿ ಅದೇಷ್ಟೋ ಪೋಲಿಸರನ್ನು ನೋಡಿದ್ದೇನೆ ಅವರೆಲ್ಲರಿಗಿಂತಲೂ ಇವರು ತುಂಬಾ ಡಿಫರೇಟ.
ಯಾವಾಗಲೂ ಇವರು ನಗುತ್ತಾ ಮಾತನಾಡುವ ಶೈಲಿಯಲ್ಲಿಯೇ ಕೋಪದ ಕ್ರೌರ್ಯ ಕರಗಿ ಹೋಗುತ್ತದೆ. ಅಂತಹ ಮದಸ್ಮಿತ ನಗುವಿನ ಪೋಲಿಸಪ್ಪ ಇವರು.
ಮುದ್ದು ಮಕ್ಕಳು, ಠಾಣೆಯ ಸಿಬ್ಬಂದಿಗಳು, ಹೋಂ ಗಾರ್ಡಗಳು, ಹಳ್ಳಿಯ ಮುಗ್ದ ಜನರು, ಪ್ಯಾಟಿಯ ಪ್ಯಾಷನ್ ಜನರ ಒಡನಾಟ ಇದ್ದರು ಇವರು ಒಂದು ದಿನವೂ ಪೋಲಿಸಪ್ಪನ ದೌಲತ್ತು ಕಂಡೆ ಇಲ್ಲ..
ಪೋಲಿಸ್ ಠಾಣೆಗೆ ಯುವಕರೇ ಬರಲಿ, ಹಿರಿಯರೇ ಬರಲಿ, ಮಹಿಳೆಯರೇ ಬರಲಿ ಯಾರೇ ಬಂದರೂ ಸಹ ಅವರಿಗೆ ನಗುನಗುತ್ತಾ ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದರೆ ಸ್ಥಳದಲ್ಲಿ ಬಗೆಹರಿಸಿ ಮಂದಸ್ಮಿತ ನಗುವಿನಿಂದ ಬೀಳ್ಕೊಡುತ್ತಿದ್ದರು.
ಇಂತಹ ದಕ್ಷ ಜನಸ್ನೇಹಿ ಪೊಲೀಸ ಗಜೇಂದ್ರ ನಗರದಲ್ಲಿ ಎಎಸ್ಐ ಹುದ್ದೆಯನ್ನು ಐದು ವರ್ಷಗಳ ಕಾಲ ಪೂರೈಸಿ ನಿವೃತ್ತಿ ಹೊಂದಿದರು ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ನಿವೃತ್ತಿಯ ಸನ್ಮಾನ ನಡೆಸಿಕೊಟ್ಟರು.
ಗಜೇಂದ್ರಗಡ ಪೊಲೀಸ್ ಠಾಣೆಯ ಪಿಎಸ್ಐ ಸೋಮನಗೌಡ ಗೌಡ ಗೌಡ ರೋಣ ಸಿಪಿಐ ಎಸ್.ಎಸ್. ಬೀಳಗಿ ಸೇರಿದಂತೆ ಗಜೇಂದ್ರಗಡದ ಸಿಬ್ಬಂದಿಗಳೆಲ್ಲರೂ ಕೂಡ ಹೃದಯ ತುಂಬಿ ಬಿಳ್ಕೊಡುಗೆ ನೀಡಿದ್ದು ನಿಜಕ್ಕೂ ಅವರ ಕಾರ್ಯ ವೈಖರಿಯನ್ನು ತಿಳಿಸುತ್ತದೆ.
ಇವರ ನಿವೃತ್ತಿಯ ಬದುಕು ಹೀಗೆ ಸದಾ ಕಾಲ ನಗುನಗುತ್ತಾ ಆರೋಗ್ಯದಿಂದ ಸಾಗಿಸಲಿ ಎನ್ನುವುದು ನಮ್ಮ ಎಲ್ಲರ ಹಾರೈಕೆಯಾಗಿದೆ.