ರಾಜ್ಯ ಸುದ್ದಿಗದಗಜಿಲ್ಲಾ ಸುದ್ದಿತಾಲೂಕುಸ್ಥಳೀಯ ಸುದ್ದಿಗಳು

ಶ್ರದ್ಧಾಭಕ್ತಿಯಿಂದ ಶ್ರೀಗಳನ್ನು ಬರ ಮಾಡಿಕೊಂಡ 8ನೇ ವಾರ್ಡಿನ ಜನತೆ

ವಿರೂಪಾಕ್ಷೇಶ್ಷರ ದೇವಾಲಯದಲ್ಲಿ ಶ್ರೀಗಳ ಆರ್ಶಿವಚನ

Share News

Janadhwani News Gajendrgada :   ಗಜೇಂದ್ರಗಡ: ಈಗಾಗಲೇ ನಗರದ ಎ.ಪಿ.ಎಮ್.ಸಿ. ಬಯಲು ಜಾಗೆಯಲ್ಲಿ ಹಾಲಕೇರಿಯ ಪರಮ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಒಂದು ಮಾಸಗಳ ಕಾಲ ನಡೆಯುವ ಬಸವ ಪುರಾಣಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.

ಈ ಹಿನ್ನಲೆಯಲ್ಲಿ ನಗರದ 8ನೇ ವಾರ್ಡ್‌ ನ ಜನತೆಯು ಮನೆಯ ಮುಂದೆ ರಂಗು ರಂಗಿನ ರಂಗೋಲಿಯನ್ನು ಬಿಡಿಸಿ ಶ್ರೀಗಳ ಪಾದಕ್ಕೆ ನೀರುಣಿಸಿ ಹೂಗಳನ್ನು ಅರ್ಪಿಸಿದ್ದರು. ನಂತರ ಮಹಿಳೆಯರು ಆರತಿ ತಟ್ಟೆ ಹಿಡಿದು ಪೂಜ್ಯಶ್ರೀಗಳ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

ಬಳಿಕ ವಿರೂಪಾಕ್ಷೇಶ್ಷರ ದೇವಾಲಯದಲ್ಲಿ ಶ್ರೀಗಳ ಆರ್ಶಿವಚನ ನಡೆಯಿತು.

ಭಕ್ತರನ್ನು ಉದ್ದೇಶಿಸಿ ಆರ್ಶಿವಚನವನ್ನು ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನೀಡುತ್ತಾ ಬಸವಣ್ಣನವರ ಧಾರ್ಮಿಕ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು, ಧಾರ್ಮಿಕ ವೈಚಾರಿಕತೆಯನ್ನು ಹೆಚ್ಚಿಸಿಕೊಳ್ಳಲು ಬಸವ ಪುರಾಣ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮೊದಲ ದಿನದ ಪಾದಯಾತ್ರೆಯಲ್ಲಿ ಭಾಗಿಯಾದ ಸದಭಕ್ತರಿಗೆ ಪ್ರತಿದಿನ ನಡೆಯುವ ಬಸವ ಪುರಾಣದಲ್ಲಿ ಭಾಗಿಯಾಗಲು ಶ್ರೀಗಳು ಆಹ್ವಾನಿಸಿದರು.

ಬಳಿಕ ಬಸವ ಪುರಾಣದ ಪುರಾಣಿಕರಾದ ಶ್ರೀ ಅನ್ನದಾನ ಶಾಸ್ತ್ರಿಗಳು ಮಾತನಾಡಿ ಕೋಟೆನಾಡು ಗಜೇಂದ್ರಗಡದಲ್ಲಿ ನಡೆಯುವ ಬಸವ ಪುರಾಣಕ್ಕೆ ಗಜೇಂದ್ರಗಡದ ೮ ನೇ ವಾರ್ಡಿನಿಂದಲೇ ಬಸವ ಬುತ್ತಿ ಆರಂಭವಾಗಲಿ ಎನ್ನುವ ಮಹದಾಶೆಯನ್ನು ವ್ಯಕ್ತ ಪಡಿಸಿ, ಮೊಬೈಲ ಯುಗದ ಜನತೆಗೆ ೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ಜೀವನ ಚರಿತ್ರೆ ಹಾಗೂ ಆ ಕಾಲದಲ್ಲಿ ನಡೆದ ಘಟನೆಗಳನ್ನು ಆಲಿಸಲು ಮಕ್ಕಳು, ಮೊಮ್ಮಕ್ಕಳು ಕರೆತರಲು ಕರೆ ನೀಡಿದರು.

ಇನ್ನೂ ಇದೇ ಸಂದರ್ಭದಲ್ಲಿ ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಎ.ಪಿ.ಗಾಣಗೇರ, ವಸಂತರಾವ ಗಾರಗಿ,ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ, ಸಿದ್ದಪ್ಪ ಚೋಳಿನ, ನಾಗಯ್ಯ ಗೊಂಗಡಶೆಟ್ಟಿಮಠ, ಪ್ರಭು ಚವಡಿ, ಕಳಕಯ್ಯ ಸಾಲಿಮಠ, ನವೀನ ಹೊನವಾಡ, ಶರಣು ಹೊನವಾಡ, ಪರಪ್ಪ ಅಂಗಡಿ, ವೀರಣ್ಣ ಸಕ್ರಿ, ಬಸವರಾಜ ಅಂಗಡಿ, ವಿಜಯಕುಮಾರ ಹೊನವಾಡ, ಮಲ್ಲಯ್ಯ ಹಿರೇಮಠ, ಕುಮಾರ ಹೊನವಾಡ, ರುದ್ರಪ್ಪ ಮಡಿವಾಳರ, ಮಹಾಂತೇಶ ಅಂಗಡಿ, ಶ್ರೀನಿವಾಸ ಸವದಿ, ಸುರೇಶ ಗೋಗಿ, ನಾರಾಯಣ ಓಲೇಕಾರ, ಉಮೇಶ ನಾವಡೆ ಸೇರಿದಂತೆ ಅನೇಕರು ಇದ್ದರು.

ವರದಿ : ಸೀತಲ ಓಲೇಕಾರ


Share News

Related Articles

Leave a Reply

Your email address will not be published. Required fields are marked *

Back to top button