ಪುರಸಭೆ ಅಧ್ಯಕ್ಷರಾಗಿ ಸುಭಾಷ್ ಮ್ಯಾಗೇರಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಸವಿತಾ ಬಿದರಳ್ಳಿ ಆಯ್ಕೆ
ಪುರಸಭೆ ಅಧ್ಯಕ್ಷರಾಗಿ ಸುಭಾಷ್ ಮ್ಯಾಗೇರಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಸವಿತಾ ಬಿದರಳ್ಳಿ ಆಯ್ಕೆ.
ಬಹುತವಿದ್ದರೂ ಅಧಿಕಾರ ಹಿಡಿಯದ ಬಿಜೆಪಿ :: ಬಂಡಾಯಕ್ಕೆ ತೆರೆ ಎಳೆದ ಕಾಂಗ್ರೆಸ್.
ಗಜೇಂದ್ರಗಡ:
ಕಳೆದ ೨ ರಿಂದ ೩ ದಿನಗಳಿಂದ ಕೋಟೆನಾಡಿನಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಬಂಡಾಯದ ಲಾಭ ಪಡೆದು ಅಧಿಕಾರ ಪಡೆದುಕೊಂಡಿದೆ.
ಸ್ಥಳೀಯ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ. ೩ ರಂದು ನಿಗದಿಯಾದ ಹಿನ್ನೆಲೆ ಈಗಾಗಲೇ ಮೊದಲನೇ ಅವಧಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರ ನಡೆದಿದ್ದು, ೨ ನೇ ಅವಧಿಯಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತದೆಯೇ ಅಥವಾ ಬಿಜೆಪಿ ಬೆಂಬಲಿತ ಕಾಂಗ್ರೆಸ್ ಅಧಿಕಾರ ನಡೆಸುತ್ತದೆಯೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಮುಂಜಾನೆ ೧೦ ಗಂಟೆಯಿಂದ ೧೨ ಗಂಟೆಯ ವರಗೆ ನಾಮಪತ್ರವನ್ನು ಸಲ್ಲಿಕೆ ಪ್ರಾರಂಭವಾಯಿತು. ಅದರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಷ ಮ್ಯಾಗೇರಿ ಪರವಾಗಿ ಸೂಚಕರಾಗಿ ಮುರ್ತುಜಾ ಡಾಲಾಯತ, ಅನುಮೋಧಕರಾಗಿ ರಾಜೂ ಸಾಂಗ್ಲೀಕರ ಹಾಗೂ ಕಾಂಗ್ರೆಸ್ ನ ಸವಿತಾ ಬಿದರಳ್ಳಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಇತ್ತ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯಮನೂರ ತಿರಕೋಜಿ, ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತಾಬಾಯಿ ಶೀಂಗ್ರಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ೨.೧೫ ರವರಗೆ ಅವಕಾಶವಿದ್ದು, ಮಧ್ಯಾನ್ಹ ೨.೩೦ ನಿಮಿಷಕ್ಕೆ ಚುನಾವಣೆ ನಡೆಯಿತು.
ಚಿತ್ರ ಶೀರ್ಷಿಕೆ : ನೂತನ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರಿಗೆ ರೋಣ ಶಾಸಕ ಜಿ.ಎಸ್.ಪಾಟೀಲ ಶುಭಾಶಯ ಕೋರಿದರು.
ಚುನಾವಣೆ ಬಳಿಕ ಬಿಜೆಪಿ ಬಂಡಾಯ ಅಭ್ಯರ್ಥಿಯಾದ ಸುಭಾಷ ಮ್ಯಾಗೇರಿ ೧೩ ಮತಗಳು ಪಡೆದು ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಕಾಂಗ್ರೇಸ್ ನ ಸವಿತಾ ಶ್ರೀಧರ ಬಿದರಳ್ಳಿಯವರು ೧೩ ಮತಗಳನ್ನು ಪಡೆದು ಅಧಿಕಾರ ಪಡೆದುಕೊಂಡಿದ್ದಾರೆ. ಇನ್ನೂ ಯಮನೂರಪ್ಪ ತಿರಕೋಜಿ, ಸುಜಾತಾಬಾಯಿ ಶೀಂಗ್ರೀ ೧೧ ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಶಿಲ್ದಾರರ ಕಿರಣ ಕುಮಾರ ಕುಲಕರ್ಣಿ ಹೇಳಿದರು.
ಪೋಟೋ ಶಿರ್ಷಿಕೆ : ಚುನಾವಣಾ ಅಧಿಕಾರಿ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ
ಚಿತ್ರ ಶೀರ್ಷಕೆ: ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ
ಬಳಿಕ ರೋಣ ಕ್ಷೇತ್ರದ ಶಾಸಕ ಮಾಧ್ಯಮದ ಜೊತೆ ಮಾತನಾಡಿ ಗಜೇಂದ್ರಗಡ ಪುರಸಭೆಯಲ್ಲಿ ಬಿಜೆಪಿ ಪಕ್ಷದ ವರಿಷ್ಠರ ಸಮನ್ವಯತೆಯ ಕೊರತೆ, ತಾರತಮ್ಯ, ಕೆಲ ಸದಸ್ಯೆರಿಗೆ ಮಹತ್ವ ಕೊಟ್ಟು ಬೇರೆ ಸದಸ್ಯೆರಿಗೆ ಯಾವುದೇ ರೀತಿಯ ವಾರ್ಡುಗಳಿಗಾಗಿ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳನ್ನು ನೀಡಿಲ್ಲ ಎನ್ನುವ ಆಕ್ರೋಶವನ್ನು ಸ್ಥಳೀಯ ಮುಖಂಡರ ಜೊತೆ ಹಂಚಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದೆ. ಸ್ಥಳೀಯ ಆಡಳಿತ ಅವಧಿ ಕಡಿಮೆ ಇದೆ. ಮತ್ತೇ ಚುನಾವಣೆಗೆ ಹೋಗಬೇಕಾದರೆ ಏನಾದರೂ ವಾರ್ಡುಗಳಿಗೆ ತೆರಳಿಬೇಕಾದರೆ ಜನರಿಗೆ ಸೇವೆ ಮಾಡಬೇಕೆಂದು ಉದ್ದೇಶ ಇಟ್ಟುಕೊಂಡು ನಮ್ಮ ಸ್ಥಳೀಯ ಮುಖಂಡರ ಜೊತೆ ಅವರೆಲ್ಲ ಸಂಪರ್ಕ ಮಾಡಿ ನಮ್ಮ ಕಾಂಗ್ರೆಸ್ ಪಕ್ಷದ ೫ ಮಂದಿ ಸದಸ್ಯರ ಬೆಂಬಲ ಕೊಟ್ಟರೇ ಒಂದು ಗುಂಪಾಗಿ ಹೊರಬಂದು ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಮಾಡುವ ವಿಚಾರ ಇಟ್ಟುಕೊಂಡು ಗಜೇಂದ್ರಗಡ ಬೆಳೆಯುತ್ತಿರುವ ನಗರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಬೆಂಬಲ ಕೊಟ್ಟಿದ್ದೇವೆ ಎಂದರು.
ಚಿತ್ರ ಶೀರ್ಷಕೆ : ನೂತನ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ.
ಬಳಿಕ ನೂತನ ಅಧ್ಯಕ್ಷ ಸುಭಾಷ್ ಮ್ಯಾಗೇರಿ ಮಾಧ್ಯಮದ ಜೊತೆ ಮಾತನಾಡಿ ಗಜೇಂದ್ರಗಡದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ನಾವೂ ಬಂಡಾಯ ಎದ್ದು ಕಾಂಗ್ರೆಸ್ ಸಪೋರ್ಟ್ ಪಡೆದು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಸ್ಥಳದಲ್ಲಿನ ಬಿಗುವಿನ ವಾತಾವರಣ ನಿರ್ಮಾಣವಾದ ಪರಿಣಾಮ ನರಗುಂದ ವಲಯದ ಡಿ.ವಾಯ್.ಎಸ್.ಪಿ. ಪ್ರಭುಗೌಡ ಡಿ.ಕೆ ಮಾರ್ಗದರ್ಶನದಲ್ಲಿ
ರೋಣ ಸಿಪಿಐ ಎಸ್. ಎಸ್. ಬಿಳಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬಿಡುಬಿಟ್ಟು ಬಿಗಿಬಂದೊಬಸ್ತ ನೀಡಿದ್ದರು.
ಇನ್ನೂ ಇದೇ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ ಕಾರ್ಯ ನಿರ್ವಹಿಸಿದ್ದರು.
ರೋಣ ಶಾಸಕ ಜಿ.ಎಸ್.ಪಾಟೀಲ , ಮಿಥುನ ಜಿ ಪಾಟೀಲ,
ಸಿದ್ದಪ್ಪ ಬಂಡಿ, ಮುರ್ತುಜಾ ಡಾಲಾಯತ, ರಾಜೂ ಸಾಂಗ್ಲೀಕರ, ವೆಂಕಟೇಶ ಮುದಗಲ್, ಶ್ರೀಧರ ಬಿದರಳ್ಳಿ, ಅಜಿತ ಭಾಗಮಾರ, ಬಸವರಾಜ ಚನ್ನಿ, ಚಂಬಣ್ಣ ಚವಡಿ, ಅರಿಹಂತ ಭಾಗಮಾರ, ಶಶಿಧರ ವಕ್ಕಲರ, ಸಿದ್ದು ಗೊಂಗಡಶೆಟ್ಟಿಮಠ,
ಅಂದಪ್ಪ ರಾಠೋಡ, ಹನಮಂತಗೌಡ ಗೌಡರ, ಬಸವರಾಜ ಶೀಲವಂತರ, ಮಂಜುಳಾ ರೇವಡಿ, ಶಾರಾಧಾ ರಾಠೋಡ, ನೀಲಮ್ಮ ಬಳೂಟಗಿ, ದ್ರಾಕ್ಷಾಯಣಿ ಚೋಳಿನ, ವಿಜಯಾ ಮಳಗಿ, ಕೌಸರಬಾನು ಹುನಗುಂದ, ಗುಲಾಮನಬಿ ಹುನಗುಂದ, ಲಕ್ಷ್ಮಿ ಮುಧೋಳ, ಮುದಿಯಪ್ಪ ಮುಧೋಳ, ಸೇರಿದಂತೆ ಅನೇಕರು ಇದ್ದರು.