ಮೊಬೈಲ್ ಯುಗದ ಜನತೆಯು ಧಾರ್ಮಿಕದತ್ತ ಒಲವು ಮೂಡಲಿ : ದಿಂಗಾಲೇಶ್ವರ ಶ್ರೀಗಳು.!
ಮಾಸಾಂತ್ಯ ನಡೆಯುವ ಬಸವ ಪುರಾಣ ಉದ್ಘಾಟಿಸಿ ಆರ್ಶಿವಚನ!
JanadhwaniNewsGajendrgada: ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು. ಜನರಲ್ಲಿ ಮನೆಮಾಡಿದ್ದ ಅಂಧಶ್ರದ್ಧೆ, ಮೌಡ್ಯತೆ, ಕಂದಾಚಾರ, ಜಾತೀಯತೆಗಳನ್ನು ತೊಡೆದು ಹಾಕುವಲ್ಲಿ ತಮ್ಮ ವಚನದ ಮೂಲಕ ಜನ ಜಾಗೃತಿಯನ್ನು ಉಂಟು ಮಾಡಿದ ಮಹಾನ್ ದಾರ್ಶನಿಕ ಬಸವಣ್ಣ ಎಂದು ಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು
ನಗರದಲ್ಲಿ ನಡೆದ ಬಸವ ಪುರಾಣದ ಮೊದಲ ದಿನದ ದಿವ್ಯ ಸನ್ನಿಧಿ ಹಾಗೂ ಬಸವ ಪುರಾಣ ಉದ್ಘಾಟಿಸಿ ಮಾತನಾಡಿದ ಪೂಜ್ಯರು ಬಸವ ಪುರಾಣವನ್ನು ಈ ಹಿಂದೆ ನಾವೂ ಕೂಡಾ ಹೇಳಿಯೇ ಬಂದಿದ್ದೇವೆ. ಇದರಲ್ಲಿ ೮ ಕಾಂಡಗಳು, ೬೦ ಅಧ್ಯಾಯಗಳು, ೩೩೨೮ ಪದ್ಯಗಳನ್ನು ರಚಿಸಿದ ಕವಿ ಭೀಮಕವಿಯಾಗಿದ್ದರು. ಈ ಹಿಂದೆ ರೋಣ ತಾಲೂಕಿನಲ್ಲಿ ಸು. ೧೫೦ ವರ್ಷಗಳ ಕಾಲ ಹಿಂದೆಯೇ ಇಟಗಿ ಗ್ರಾಮದಲ್ಲಿ ಬಸವ ಪುರಾಣ ಸು. ೩ ತಿಂಗಳುಗಳ ಕಾಲ ನಡೆದಿತ್ತು. ಮೊಬೈಲ್ ಯುಗದಲ್ಲಿನ ಯುವಕರು ಧಾರ್ಮಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಬಳಿಕ ಹಾಲಕೇರಿ ಮಠದ ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಆರ್ಶಿವಚನ ನೀಡುತ್ತಾ ಮಾನವ ಜನಾಂಗದ ಪ್ರಗತಿಯಲ್ಲಿ ಅತ್ಯಂತ ಆಳವಾಗಿ ಪರಿಣಾಮಕಾರಿಯಾಗಿ ಪ್ರಭಾವ ಬೀರಬಲ್ಲ ಶಕ್ತಿ ಧರ್ಮ. ಯಾವುದೇ ಸಂಘ, ಸಂಸ್ಥೆಗಳಿಂತಲೂ ಧರ್ಮವೂ ಅತ್ಯಂತ ಪ್ರಭಾವ ಭಿರುತ್ತದೆ. ರಕ್ತ ಸಂಬಂಧಕ್ಕಿಂತಲೂ ಗಟ್ಟಿಯಾದ ಸಂಬಂಧ ಯಾವುದಾದರೂ ಇದ್ದರೆ ಅದು ಧರ್ಮ ಸಂಬಂಧ. ಈ ಧರ್ಮ ಸಂಬಂಧ ಉಳಿಸಿಕೊಳ್ಳಲು ಬಸವ ಪುರಾಣ ನಡೆಸುತ್ತಾ ಇದ್ದೇವೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂತಹ ಬಸವ ಪುರಾಣ ಯಶಸ್ಸು ಕಾಣಲು ಸಾಧ್ಯವೆನ್ನುವ ಪ್ರಶ್ನಗೆ ಉತ್ತರ ನಿಮ್ಮ ಮನದಲ್ಲಿಯೇ ಇರುತ್ತದೆ. ನಾವೂ ಅಂತರಂಗದಲ್ಲಿ ಏನನ್ನು ಕಾಣುತ್ತೇವಯೋ ಅದು ಕಾಣುತ್ತದೆ. ಅದಕ್ಕಾಗಿ ಬಸವ ಪುರಾಣವನ್ನು ನಾವೂ ಅಳವಡಿಸುಕೊಳ್ಳಬೇಕು ಅಂದಾಗ ಮಾತ್ರ ಇಂತಹ ಧಾರ್ಮಿಕ ಕಾರ್ಯಗಳು ಯಶಸ್ಸು ಕಾಣಲು ಸಾಧ್ಯ. ನಿತ್ಯ ಜೀವನದಲ್ಲಿ ಎಷ್ಟೇ ಜನ ಬಂದರೂ ಸಮಯಕ್ಕೆ ಆಧ್ಯತೆ ನೀಡಿ ಬಸವ ಪುರಾಣ ಪ್ರಾರಂಭಿಸುತ್ತೇವೆ. ನಮ್ಮಗೆ ಕೀರ್ತಿ, ವಾರ್ತೆಗೆಳು ಬೇಕಿಲ್ಲ, ಬದಲಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಜನರನ್ನು ಉದ್ದರಿಸುವ ವಿಚಾರ ನಮ್ಮದು. ಒಡೆದ ಮನಸ್ಸುಗಳನ್ನು ಕೂಡಿಸುವ ವಿಚಾರ, ಕಲುಷಿತ ಮನಸ್ಸನ್ನು ಹಸನಾಗಿಸುವುದು ಪುರಾಣದ ಉದ್ದೇಶವಾಗಿದೆ ಎಂದರು.
ಬಸವ ಪುರಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿ,ಬಸವ ಪುರಾಣವು ಎಲ್ಲಾ ಸಮಾಜದವರಿಗೆ ಉಪಯುಕ್ತವಾಗುವ ಪುರಾಣವಾಗಿದೆ. ಬಸವಣ್ಣನವರ ೧೨ ನೇ ಶತಮಾನದಲ್ಲಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಜೀವನ ಕಳೆದದನ್ನು ಬಸವ ಪುರಾಣದಲ್ಲಿ ಕಾಣಬಹುದು. ಪೂಜ್ಯರು ಈ ಹಿಂದೆ ಸಂಚಾರಿ ಬಸವಪುರಾಣವನ್ನು ಮಾಡಿದ್ದರು,ನಾವೂ ಕೂಡಾ ಉಳವಿ ಚನ್ನಬಸವೇಶ್ವರ ದೇವಾಲಯಕ್ಕೆ ಸು.೩೦೦ ಚಕಡಿಗಳನ್ನು ತೆಗೆದುಕೊಂಡು ಹೋಗಿದ್ದೇವು. ಭಕ್ತರ ಸಂಕಲ್ಪವನ್ನು ಈಡೇರಿಸಲು ಇಂತಹ ಪುರಾಣಗಳಲ್ಲಿ ಭಾಗಿಯಾಗಬೇಕು. ಇನ್ನೂ ಕೋಟೆನಾಡು ೧೮ ರ ಐತಿಹಾಸಿಕ ಹಿನ್ನಲೆಯುಳ್ಳ ನಗರವಾಗಿದೆ. ಇಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಜನತೆಯು ಜೀವನೋಪಾಯಕ್ಕೆ ವ್ಯಾಪಾರ ವಹಿವಾಟುಗಳಿಗೆ ಅವಲಂಬಿಸಿದವರು.ಬಿಡುವಿಲ್ಲದೆ ನಿತ್ಯ ಕಾಯಕದಲ್ಲಿ ತೊಡಗಿಕೊಂಡವರು. ಇಂತಹ ಬಿಡುವಿಲ್ಲದ ಜೀವನದಲ್ಲಿ ಕೆಲ ಸಮಯ ಸಾಯಂಕಾಲ ತೆಗೆದು ಬಸವ ಪುರಾಣದಂತ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗಿಯಾಗಬೇಕು.
ಇನ್ನೂ ಇದೇ ಸಂದರ್ಭದಲ್ಲಿ ಶ್ರೀ ಮ. ನಿ. ಪ್ರ ನಿರಂಜನ ಪ್ರಭು ಮಹಾಸ್ವಾಮಿಗಳು ಗರಗನಾಗಾಲಾಪುರ ಕುರುಗೋಡ, ಶ್ರೀ,ಮ ನಿ,ಪ್ರ ಕೊಟ್ಟರು ಮಹಾಸ್ವಾಮಿಗಳು ದರೂರು, ಶ್ರೀ ಸಿದ್ದಲಿಂಗ ದೇಶಿಕರು,ಸೋಮಸಮುದ್ರ, ಶ್ರೀ ಮರಿಕೊಟ್ಟುರು ದೇಶಿಕರು ಶ್ರೀಧರಗಡ್ಡೆ , ಶ್ರೀ ವಿಶ್ವೇಶ್ವರ ದೇವರು ಸಂಗನಹಾಲ, ಶ್ರೀ ಶಿವಲಿಂಗ ಸ್ವಾಮಿಗಳು ಬನವಾಸಿ, ಪೂಜ್ಯಶ್ರೀ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯರು ಹೊಸೂರು – ಜಿಗೇರಿ ಸೇರಿದಂತೆ ಬಸವ ಪುರಾಣ ಸಮಿತಿಯ ಸರ್ವ ಸದಸ್ಯರು ಇದ್ದರು.
ಈ ಕಾರ್ಯಕ್ರಮದಲ್ಲಿ ಸಿದ್ದಣ್ಣ ಬಂಡಿ, ಎ.ಪಿ.ಗಾಣಗೇರ, ಪುರಸಭೆ ಅಧ್ಯಕ್ಷ,ಸುಭಾಸ್ ಮ್ಯಾಗೇರಿ, ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ,ಮುರ್ತಾಜ ಡಾಲಾಯತ್,ಬಿ ಎಂ ಸಜ್ಜನ,ಚಂಬಣ್ಣ ಚವಡಿ,ಡಾ,ಬಿ ವ್ಹಿ ಕಂಬಳ್ಯಾಳ, ಶರಣಪ್ಪ ಕಂಬಳಿ,ಶರಣಪ್ಪ ರೇವಡಿ, ಅಪ್ಪು ಮತ್ತಿಕಟ್ಟಿ, ಶಿವು ಕೋರದಾನಮಠ,ಪ್ರಭು ಚವಡಿ,
ಬಸಯ್ಯ ಹಿರೇಮಠ,ರವಿ ಗಡೇದವರ, ವೀರಣ್ಣ ಶೆಟ್ಟರ್, ವಸಂತರಾವ್ ಗಾರಗಿ, ನಾಗಯ್ಯ ಗೊಂಗಡಶೆಟ್ಟಿಮಠ, ಪ್ರಭು ಹಿರೇಮಠ, ಎಚ್.ಎಸ್.ಸೊಂಪೂರ, ಶಿವಕುಮಾರ ಶಶಿಮಠ ಉಪಸ್ಥಿತರಿದ್ದರು.