ಕುಷ್ಟಗಿಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕೊಪ್ಪಳಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಿಸಿನೆಸ್ ಕನೆಕ್ಟ್ರಾಷ್ಟೀಯ ಸುದ್ದಿಶಿವಮೊಗ್ಗಸ್ಥಳೀಯ ಸುದ್ದಿಗಳು

ಹೂಗಾರರ ವೃತ್ತಿ ಅಳವಿನಂಚಿನಲ್ಲಿದೆ :ಶಶಿಧರ ಹೂಗಾರ

Share News

ಹೂಗಾರರ ವೃತ್ತಿ ಅಳವಿನಂಚಿನಲ್ಲಿದೆ :ಶಶಿಧರ ಹೂಗಾರ

ಗಜೇಂದ್ರಗಡ:

ಬಸವಣ್ಣನವರ ಸಮಕಾಲೀನದಲ್ಲಿ ಜನ್ಮತಾಳಿದ ಶರಣ ಹೂಗಾರ ಮಾದಯ್ಯನವರ ಬದುಕು, ಜೀವನ, ಕರ‍್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದು ಹೂಗಾರ ಸಮಾಜದ ಅಧ್ಯಕ್ಷ ಶಶಿಧರ ಹೂಗಾರ ಹೇಳಿದರು.

ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಹೂಗಾರ ಸಮಾಜದಿಂದ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದರು.

ಭಾರತ ಸತ್ಯ ಪರಂಪರೆ ಹೊಂದಿದ ನಾಡಾಗಿದೆ. ಇಲ್ಲಿ ಅನೇಕ ಮಹಾ ಶರಣರಲ್ಲಿ ಹೂಗಾರ ಮಾದಯ್ಯನವರು ಕೂಡಾ ಒಬ್ಬರು. ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ಹೇಗೆ ಜೀವನ ಸಾಗಿಸಬೇಕು, ನಮ್ಮ ಕಾಯಕದ ಬಗ್ಗೆ ಅಂದೇ ತಿಳಿಸಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಹೂ, ಪತ್ರಿಗಳು ಮಾರುವುದು ಅಲ್ಲದೆ ಬೇರೆ ಬೇರೆ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ ಹೂಗಾರ ಸಮಾಜದವರು.
ಆದರೆ ಹೂ ಮಾರುವ ವೃತ್ತಿಯು ಬದಲಾಗಿದೆ. ಪುರಸಭೆಯಿಂದ ಹೂ ಮಾರಲು ಅನೂಕೂಲ ಮಾಡಿಕೊಳ್ಳಬೇಕಿದೆ. ಬಾಸಿಂಗ್ ತಯಾರಿಸುವುದು ,ಹೂ ಮಾರುವುದು, ಪತ್ರಿಗಳು ನೀಡುವುದು ಹೂಗಾರ ಸಮಾಜ. ಆದರೆ ಇವುಗಳೆಲ್ಲವನ್ನು ಬೇರೆ ಬೇರೆ ಸಮಾಜದವರು ಕೂಡಾ ಕಾಯಕ ಮಾಡುತ್ತಿದ್ದಾರೆ. ಅದರಿಂದ ನೈಜ್ಯ ಹೂಗಾರ ವೃತ್ತಿಯು ಇಂದು ಅಳವಿನಂಚಿನಲ್ಲಿದೆ. ಅದನ್ನು ಉಳಿಸಲು ಸ್ಥಳೀಯ ಆಡಳಿತ, ಪುರಸಭೆ, ರ‍್ಕಾರವು ಸಹಕರಿಸಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದರೆ ಯಾವೂದಾದರೂ ಮೀಸಲಾತಿ ನೀಡಿದರೆ ಶೈಕ್ಷಣಿಕವಾಗಿ ನಾವೂ ಕೂಡಾ ಸಮಾಜದಲ್ಲಿ ಸಾಧನೆ ಮಾಡುತ್ತೇವೆ ಎಂದರು.

ಬಳಿಕ ರವಿ ಗಡೇದವರ ಮಾತನಾಡಿ ಹೂಗಾರ ಸಮಾಜ ದೇಶದಲ್ಲಿಯೇ ಅತ್ಯಂತ ಪಾವಿತ್ರ‍್ಯ ಪಡೆದುಕೊಂಡ ಸಮಾಜವಾಗಿದೆ. ಹೂಗಾರ ಸಮಾಜ ಅತ್ಯಂತ ಅಲ್ಪ ಸಮಾಜವಾದರೂ ಹೂವಿನಷ್ಟೇ ಮೃದುವಾದ ಸಮಾನವಾಗಿದೆ. ಬಸವಣ್ಣನವರ ಕಾಲದಲ್ಲಿ ಜನಸಿದಂತ ಮಹಾನ ಚೇತನ್ ರ ತತ್ವಾರ‍್ಶಗಳನ್ನು ನಾವಲ್ಲ ಪಾಲನೆ ಮಾಡೋಣ ಎಂದರು.

 

ಬಳಿಕ ಬಸವರಾಜ ಶೀಲವಂತರ, ಬಸವರಾಜ ಕೊಟಗಿ, ಶರಣು ಪೂಜಾರ, ಮಹಾದೇವಪ್ಪ ಮಡಿವಾಳರ ಮಾತನಾಡಿದರು.

ಕರ‍್ಯಕ್ರಮದಲ್ಲಿ ಪುರಸಭೆ ಸದಸ್ಯ
ಮರ‍್ತುಜಾ ಡಾಲಾಯತ,ಶ್ರೀಧರ ಬಿದರಳ್ಳಿ, ಲೋಕಪ್ಪ ರಾಠೋಡ, ಕಳಕಪ್ಪ ಹೂಗಾರ, ಬಸವರಾಜ ಹೂಗಾರ, ಕಳಕಯ್ಯ ಸಾಲಿಮಠ, ಮಲ್ಲಯ್ಯ ಪೂಜಾರ, ಚಿದಾನಂದ ಹಡಪದ, ವಿರೇಶ ರಾಠೋಡ, ಅಲ್ಲಾಭಕ್ಷಿ ಮುಚ್ಚಾಲಿ, ಮಂಜು ಹೂಗಾರ, ಬಾಲಾಜಿರಾವ ಬೊಸ್ಲೇ , ಅಂದಪ್ಪ ರೋಣದ, ತಿರಕಪ್ಪ ಹೂಗಾರ, ಚಂದ್ರು ಹೂಗಾರ, ಜಗದೀಶ ಕವಡಿಮಟ್ಟಿ, ಭೀಮವ್ವ ಹೂಗಾರ, ಗಿರಿಜವ್ವ ಹೂಗಾರ, ಸುಮಾ ಹೂಗಾರ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button