
ವಿಶ್ವ ಹಿಂದೂ ಪರಿಷದ ಭಜರಂಗದಳದಿಂದ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ
ವಿಶ್ವ ಹಿಂದೂ ಪರಿಷದ ಭಜರಂಗದಳದಿಂದ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ.
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ :
ವಿಶ್ವ ಹಿಂದೂ ಪರಿಷದ ಭಜರಂಗದಳದಿಂದ ಉಗ್ರರ ದಾಳಿ ಖಂಡಿಸಿ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ದೀಪ ಬೆಳಗಿಸಿ, ಮೌನಾಚರಣೆಯನ್ನು ಬುಧುವಾರ ಸಾಯಂಕಾಲ ಪ್ರತಿಭಟನೆ ನಡೆಸಿದರು.
ನಗರದ ಭಜರಂಗದಳದಿಂದ ಪ್ರಾರಂಭವಾದ ಮೆರವಣಿಗೆಯೂ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತ ತಲುಪಿ ಅಲ್ಲಿ ವೃತರ ಆತ್ಮಕ್ಕೆ ಶಾಂತಿಯನ್ನು ಕೋರಲು ಮೌನಾಚರಣೆ ಮಾಡಲಾಯಿತು.
ಬಳಿಕ ವಿ.ಎಚ್.ಪಿ. ಮುಖಂಡ ಸಂಜೀವ ಜೋಷಿ ಮಾತನಾಡುತ್ತಾ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯ ಮೇಲಿನ ಹುಲ್ಲುಗಾವಲುಗಳಲ್ಲಿ ಇಂದು ಗುಂಡಿನ ದಾಳಿ ನಡೆದಿದೆ. ಈ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಲು ಸಾಧ್ಯ. ಉಗ್ರರು ಬಚ್ಚಿಟ್ಟುಕೊಂಡು ಗುಂಡು ಹಾರಿಸಿದ್ದಾರೆ. ಕಾಡುಗಳು, ಸ್ಫಟಿಕದಂತಹ ಸ್ಪಷ್ಟ ಸರೋವರಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾದ ಪಹಲ್ಗಾಮ್ ಜನಪ್ರಿಯ ಪ್ರವಾಸಿ ತಾಣವಾಗಿದೆ. ಹೀಗಾಗಿ ಇದನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಇದನ್ನೇ ಅರಿತ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ವೃತರ ಧರ್ಮಪತ್ನಿ ಹೇಳಿಕೆಯಂತೆ ಹಿಂದೂ ಧರ್ಮದವರು ಎನ್ನುವದಕ್ಕೆ ಗುಂಡಿನ ದಾಳಿ ಮಾಡಿದ್ದಾರೆ ಇದನ್ನು ತೀವ್ರ ಖಂಡಿಸುತ್ತೇವೆ. ಇಂತಹ ಕ್ರೌರ್ಯ ಮೆರೆದವರಿಗೆ ನಡು ರಸ್ತೆಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಉಮೇಶ ಚನ್ನು ಪಾಟೀಲ, ಕಿರಣ ಕಮ್ಮಾರ, ಅನುರಾಗ ಚಿನಲವಾರ, ಪ್ರಸಾದ ಬಡಿಗೇರ, ಸಂಜು ಚಂಗಳಿ, ವಿಶ್ವನಾಥ ಕುಷ್ಟಗಿ, ಮಂಜು ಹೂಗಾರ, ಪ್ರಸಾದ ಬಡಿಗೇರ, ಮಹಾತೇಶ ಅರಕೇರಿ, ಸಂಗವೇಶ ಪಲ್ಲೇದ, ಪರಶುರಾಮ ದಿವಾಣದ, ಸೇರಿದಂತೆ ಅನೇಕರು ಇದ್ದರು.