ಉಪಯುಕ್ತ ಮಾಹಿತಿಗಳುಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಸಿಎಂ ಸಿದ್ದರಾಮಯ್ಯ ಜೊತೆ ನಾವಿದ್ದೇವೆ : ಅಹಿಂದ ಒಕ್ಕೂಟಗಳ ನಾಯಕರು.

Share News

ಸಿಎಂ ಸಿದ್ದರಾಮಯ್ಯ ಜೊತೆ ನಾವಿದ್ದೇವೆ : ಅಹಿಂದ ಒಕ್ಕೂಟಗಳ ನಾಯಕರು.

ಅ ೨೭  ರಂದು ಕೋಟೆನಾಡಿನಲ್ಲಿ ಬೃಹತ್ ಪ್ರತಿಭಟನೆ, ಬಹಿರಂಗ ಸಭೆ

ಗಜೇಂದ್ರಗಡ::
ಇತ್ತಿಚಿಗೆ
ರಾಜ್ಯದಲ್ಲಿ ಪ್ರಾಸಿಕ್ಯೂಷನ್ ಪಾಲಿಟಿಕ್ಸ್​ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಸಿಡಿದೆದ್ದಿರುವ ಅಹಿಂದ ವರ್ಗದ ನಾಯಕರು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಅಹಿಂದ ನಾಯಕ ವಿ.ಆರ್.ಗುಡಿಸಾಗರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆಗಸ್ಟ್ 27 ರಂದು ಕೋಟೆನಾಡು ಗಜೇಂದ್ರಗಡದಲ್ಲಿ ಪ್ರತಿಭಟನೆಯನ್ನು ಮಾಡಲು ಅಹಿಂದ ಸಂಘಟನೆಗಳು ಕರೆ ನೀಡಿದ್ದು, ಸಿಎಂ ಪರ ಶೋಷಿತ ಸಮುದಾಯಗಳ ಒಕ್ಕೂಟ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಬಳಿಕ ಅಹಿಂದ ನಾಯಕ ಎಚ್.ಎಸ್.ಸೊಂಪೂರ ಮಾತನಾಡಿ ರಾಜ್ಯದಲ್ಲಿ ಕುರುಬ ಸಮಾಜದ ಜನಪ್ರಿಯ ನಾಯಕ ಹಾಗೂ ಅಹಿಂದ ವರ್ಗಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಕುತಂತ್ರ ಇದಾಗಿದೆ. ನಿವೇಶನಗಳ ಹಂಚಿಕೆಯನ್ನು ರೂಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರವೇ ಆಗಿದೆ. ಸಿದ್ದರಾಮಯ್ಯ ಪತ್ನಿಯ, ಸಹೋದರ ತಮ್ಮ ಸಹೋದರಿಗೆ ಅರಿಷಿಣ ಕುಂಕುಮ ರೂಪದಲ್ಲಿ ಆಸ್ತಿ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದ ರಾಜ್ಯಪಾಲರು ಇದೀಗ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸಮಂಜಸವಲ್ಲ ಇದು ಅತ್ಯಂತ ಖಂಡನೀಯವಾಗಿದೆ. ಮುಡಾ ವಿಷಯದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಹಾಗೇ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಕಷ್ಟು ಹಗರಣಗಳಾಗಿವೆ. ಅದನ್ನು ಕೈಬಿಟ್ಟು ಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು

ಬಳಿಕ ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ ಮಾತನಾಡಿ ರಾಜ್ಯಪಾಲರು ಮುಡಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವತಿರ್ಸುತ್ತಿರುವುದು ಸರಿಯಲ್ಲ. ರಾಜ್ಯಪಾಲರು ಕೂಡಲೇ ಇದನ್ನು ಹಿಂಪಡೆಯಬೇಕು ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಅಶೋಕ ಬಾಗಮಾರ, ತಾರಸಿಂಗ್ ರಾಠೋಡ,
ಮಂಜುಳಾ ರೇವಡಿ, ನೀಲಮ್ಮ ಬಳೂಟಗಿ, ಸುಮಂಗಲಾ ಇಟಗಿ, ಶರಣು ಪೂಜಾರ,
ಉಮೇಶ ರಾಠೋಡ, ಅರ್ಜುನ ರಾಠೋಡ, ಸುಬ್ರಮಣ್ಯ ರೆಡ್ಡಿ, ವಿ.ಬಿ.ಹಪ್ಪಳದ, ಅಶೋಕ ವದೇಗೋಳ, ರವಿ ಗಡೇದವರ, ಅಂದಪ್ಪ ಬಿಚ್ಚೂರ, ಕೆ.ಎಸ್.ಕೊಡತಗೇರಿ, ವೆಂಕಟೇಶ ಮುದಗಲ್, ರಾಮಚಂದ್ರ ಹುದ್ದಾರ, ಸುಭಾನಸಾಬ ಆರಗಿದ್ದಿ, ಶರಣಪ್ಪ ಉಪ್ಪಿನಬೇಟಗೇರಿ, ಸಾಹಿತಿ ಎಫ್, ಎಸ್ ಕರಿದುರಗಣ್ಣನವರ, ಅಜ್ಜಪ್ಪ ವಂದಕುದರಿ,ಅಂದಪ್ಪ ರಾಠೋಡ ದಾದು ತಾಳಿಕೋಟಿ, ಖಲಂದರ ಹಿರೇಮನಿ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button