
ಗಜೇಂದ್ರಗಡ ಪಟ್ಟಣದಲ್ಲಿ ವೈಟ್ ಲೆಧರ್‌ಬಾಲ್ ಟ್ರೋಫಿ ಅನಾವರಣ
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪಿನಾಕಿನ್ ಅಕ್ಯೂವಾ ಅರ್ಪಿಸುವ ಗಜೇಂದ್ರಗಡ ಸ್ಪೋಟ್ಸ್ ಕ್ಲಬ್ ವತಿಯಿಂದ “ವೈಟ್ ಲೆಧರ್‌ಬಾಲ್ ಮುಕ್ತ ಪ್ರೀಮಿಯಂ ಲೀಗ್”ವೈಟ್ ಲೆಧರ್‌ಬಾಲ್ ಟ್ರೋಫಿ ಅನಾವರಣ ಮಾಡಲಾಯಿತು
Janadhwani News Gajendrgad ಗಜೇಂದ್ರಗಡ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಒತ್ತಡದ ಜೀವನದಿಂದ ಮುಕ್ತಿ ದೊರೆತು ಉತ್ತಮ ಆರೋಗ್ಯ ಸಿಗುತ್ತದೆ ಎಂದು ಮಿಥುನ ಪಾಟೀಲ್ ಹೇಳಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪಿನಾಕಿನ್ ಅಕ್ಯೂವಾ ಅರ್ಪಿಸುವ ಗಜೇಂದ್ರಗಡ ಸ್ಪೋಟ್ಸ್ ಕ್ಲಬ್ ವತಿಯಿಂದ “ವೈಟ್ ಲೆಧರ್‌ಬಾಲ್ ಮುಕ್ತ ಪ್ರೀಮಿಯಂ ಲೀಗ್”ವೈಟ್ ಲೆಧರ್‌ಬಾಲ್ ಟ್ರೋಫಿ ಅನಾವರಣಕಾ ರ್ಯಕ್ರಮದಲ್ಲಿ ಅವರು ಮಾತನಾಡಿದರು.ಆರೋಗ್ಯ, ನೆಮ್ಮದಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್‌ಗೆ ದಾಸರಾಗಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್‌ನಿಂದ ಆಗುವ ಅಪಾಯಗಳನ್ನು ಅರಿತು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಈ ಟೂರ್ನಿಯಿಂದ ಉದಯೋನ್ಮುಖ ಆಟಗಾರರಿಗೆ ಪ್ರತಿಭೆ ತೋರುವ ಅವಕಾಶ ಒದಗಿಸಿದೆ. ರಾಜ್ಯ ರಾಷ್ಟ್ರ ತಂಡಗಳಿಗೆ ಆಡಲು ಈ ಟೂರ್ನಿಯು ಸಹಕಾರಿಯಾಗಲಿದೆ ಎಂದು ಅಜಿತ ಬಾಗಮಾರ ಹೇಳಿದರು.
ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು
ಕ್ರೀಡಾಪಟುಗಳಿಗೆ ಸಮಾಜದಲ್ಲಿ ದೊಡ್ಡ ಗೌರವ, ಸ್ಥಾನಮಾನಗಳು ಸಿಗುತ್ತವೆ. ಇಡೀ ಪ್ರಪಂಚವೆ ತಿರುಗಿ ನೋಡುತ್ತದೆ. ಕ್ರೀಡೆಯಿಂದ ಏಕಾಗ್ರತೆ, ಶಿಸ್ತು, ಸಂಸ್ಕಾರ ಮೊದಲಾದ ಗುಣಗಳು ಕಲಿತುಕೊಳ್ಳಬಹುದು ಎಂದು ಎಚ್ ಎಸ್ ಸೋಂಪುರ ಹೇಳಿದರು
ಈ ಸಂದರ್ಭದಲ್ಲಿ ಶಿವರಾಜ್ ಘೋರ್ಪಡೆ,ಅಜಿತ ಬಾಗಮಾರ,ಎಚ್ ಎಸ್ ಸೋಂಪುರ,ರವಿ ಗಡೇದವರ, ವೀರೇಶ್ ರಾಜೂರ,ಜಗದೀಶ ಬಳಿಗೇರ, ಕೆ.ಹುಸೇನ ಸರ್ಕಾವಸ್,ರವಿ ಭಜಂತ್ರಿ, ರಮೇಶ ರಾಠೋಡ ಹಾಗೂ ಆಟಗಾರರು ಉಪಸ್ಥಿತರಿದ್ದರು