Notices issued to CM’s wife Parvati and Minister Bhairati Suresh :ಸಿಎಂ ಸಿದ್ದು ಫ್ಯಾಮಿಲಿಗೆ ED ಬಿಗ್ ಶಾಕ್ – ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ಗೆ ನೋಟಿಸ್ ಸಂಕಷ್ಟ!
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಭೈರತಿ ಸುರೇಶ್ಗೆ ED ನೋಟಿಸ್ ನೀಡಿದೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದೆ. ಈ ಮೂಲಕ 14 ಸೈಟ್ ಅಕ್ರಮದಲ್ಲಿ ಸಿಎಂ ಪತ್ನಿಗೆ ಭಾರೀ ಸಂಕಷ್ಟ ಎದುರಾಗಿದೆ.
ಜನಧ್ವನಿ ಸುದ್ದಿ ಬೆಂಗಳೂರು :ಮುಡಾ ಹಗರಣದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ನಿವೇಶನ ಹೆಸರಲ್ಲಿ ಕೋಟಿ ಕೋಟಿ ಹಣ ಅಕ್ರಮ ವಹಿವಾಟು ಕೇಸಲ್ಲಿ ತನಿಖೆ ನಡೆಸುತ್ತಿರುವ ED ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದು, CM ಕುಟುಂಬಕ್ಕೆ ED ಬಿಗ್ ಶಾಕ್ ಕೊಟ್ಟಿದೆ.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಭೈರತಿ ಸುರೇಶ್ಗೆ ED ನೋಟಿಸ್ ನೀಡಿದೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದೆ. ಈ ಮೂಲಕ 14 ಸೈಟ್ ಅಕ್ರಮದಲ್ಲಿ ಸಿಎಂ ಪತ್ನಿಗೆ ಭಾರೀ ಸಂಕಷ್ಟ ಎದುರಾಗಿದೆ.
ED ನೋಟಿಸ್ ಬರ್ತಿದ್ದಂತೆಯೇ ಹೈಕೋರ್ಟ್ಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಅರ್ಜಿ ಸಲ್ಲಿಸಿದ್ದಾರೆ. ED ಕೊಟ್ಟಿರುವ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ತುರ್ತು ವಿಚಾರಣೆಗೆ ಸ್ವೀಕರಿಸುವಂತೆ ವಕೀಲರು ಮನವಿ ಮಾಡಿದ್ದಾರೆ.
ನಾಗಪ್ರಸನ್ನ ಪೀಠದಲ್ಲಿ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಗೆ ಮನವಿ ಮಾಡಿದ್ದು, ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.