
ರಾಜೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಳಕವ್ವ ಜೊಳ್ಳಿಯವರಅವಿರೋಧ ಆಯ್ಕೆ.
ರಾಜೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಳಕವ್ವ ಜೊಳ್ಳಿಯವರಅವಿರೋಧ ಆಯ್ಕೆ.
ಗಜೇಂದ್ರಗಡ :
ನಗರ ಸಮೀಪದ ರಾಜೂರು ಗ್ರಾಮ ಪಂಚಾಯತಿಯಲ್ಲಿನ ಅಂತಿಮ ಹಂತದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಮಂಗಳವಾರ ನಡೆಯಿತು..
ಬಳಿಕ ಅಧ್ಯಕ್ಷ ಸ್ಥಾನಕ್ಕೆ ಕಳಕವ್ವ ಜೊಳ್ಳಿಯವರ ಮಾತ್ರವೇ ನಾಮಪತ್ರ ಸಲ್ಲಿಸಿದರಿಂದ ಕಳಕವ್ವ ಜೊಳ್ಳಿಯವರ ಅವರನ್ನು ಅವಿರೋಧವಾಗಿ ರಾಜೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಯಾಗಿ ಮಂಜುಳಾ ಹಕಾರಿ ತಿಳಿಸಿದರು.
ಕೊನೆಯ ಹಂತದ ಅಧಿಕಾರ ಪಡೆದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ ಸಿಹಿ ತಿನಿಸಿ ಸಂಭ್ರಮಿಸಲಾಯಿತು.
ಇನ್ನೂ ಇದೇ ಸಂದರ್ಭದಲ್ಲಿ ರಾಜೂರು ಪಿ.ಡಿ.ಓ. ಶಿವಾನಂದ ತೊಂಡಿಹಾಳ, ನಿಂಗವ್ವ ಶಂಕ್ರಿ, ಶರಣಪ್ಪ ಸಜ್ಜನರ, ದಾನವ್ವ ರಾಠೋಡ, ಲಕ್ಷ್ಮವ್ವ ಹೊಸಳ್ಳಿ, ಲಲಿತವ್ವ ತಳವಾರ, ಶೇಖರಪ್ಪ ಮಳಗಿ, ಲಲಿತವ್ವ ರಾಠೋಡ, ಚಂದ್ರುಗೌಡ ಪಾಟೀಲ, ಬಸಪ್ಪ ಕಟ್ಟಿಮನಿ, ಶಾರದಾ ಜಾಧವ, ಬಿಬಿಜಾನ ಗಡಾದ, ಜನತಬಿ ನಧಾಫ, ಪರಸಪ್ಪ ರಾಠೋಡ, ಸಿದ್ದವ್ವ ಕುರಮನಾಳ,ಸುರೇಶ ಪಮ್ಮಾರ, ಚನ್ನಬಸಪ್ಪ ಅಬ್ಬೊಗೇರಿ, ಬಸಪ್ಪ ಆಡಿನ, ಕಾವೇರಿ ಚಿಲಝೇರಿ, ಮುತ್ತಣ್ಣ ತಳವಾರ, ಶಿವಕುಮಾರ ಜಾಟೋತ್ತರ, ರಾಜೂ ಗಾರಗಿ, ಮುಖಪ್ಪ ಹಾದಿಮನಿ, ನಾಗಪ್ಪ ತಳವಾರ ಶಿವನಗೌಡ ಪಾಟೀಲ, ಹುಸೇನಸಾಬ ಹಿರೇಮನಿ ಸೇರಿದಂತೆ ಅನೇಕರು ಇದ್ದರು.