ಕನಕಗಿರಿಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಕಾಂಗ್ರೇಸ್ ಸರ್ಕಾರಕ್ಕೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಚಟ ಬಿದ್ದಿದೆ : ಬಸವರಾಜ ಬೊಮ್ಮಾಯಿ.

Share News

ಕಾಂಗ್ರೇಸ್ ಸರ್ಕಾರಕ್ಕೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಚಟ ಬಿದ್ದಿದೆ : ಬಸವರಾಜ ಬೊಮ್ಮಾಯಿ.

ಗಜೇಂದ್ರಗಡ::

ಕಾಂಗ್ರೆಸ್ ಸರ್ಕಾರವೂ ತಮ್ಮ ವೈಫಲ್ಯಗಳನ್ನು ಮುಚ್ಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರನ್ನು ನಂಬಿಸಲು ಮುಂದಾಗುವ ಚಟ ಬಿದ್ದಿದೆ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

 

ನಗರದಲ್ಲಿನ ಮಾಜಿ ಶಾಸಕ ಕಳಕಪ್ಪ ಬಂಡಿ ಗೃಹ ಕಛೇರಿ ಸಭಾ ಭವನದಲ್ಲಿ ನಡೆದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

 

ಕಾಂಗ್ರೆಸ್ ಸರ್ಕಾರಕ್ಕೆ ಮಳೆಯಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಕೊಡಲು ದುಡ್ಡು ಇಲ್ಲ, ಗ್ಯಾರಂಟಿಗಳಿಗಾಗಿಯೇ ಎಲ್ಲಾ ಹಣ ಬಳಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಪಂಗಡಗಳ ಹಣಗಳನ್ನು ಕೂಡಾ ಬಳಕೆ ಮಾಡಿದ್ದು ವಿಪರ್ಯಾಸ. ಇನ್ನೂ ಮುಂದುವರೆದು ಹೇಳಬೇಕೆಂದರೆ ಕಾಂಗ್ರೆಸ್ ಸರ್ಕಾರ ಸಂವಿದಾನಕ್ಕೆ ಅಪಚಾರವನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೇಂದ್ರ ಸರ್ಕಾರವೂ ರೈಲು ಯೋಜನೆಗೆ ೭೩೨೯ ಸಾವಿರ ಕೋಟಿ, ಸಾಗರವಾಲಾ ಯೋಜನೆಗೆ ೭೦೦ ಕೋಟಿ, ತೆರಿಗೆಯ ಪಾಲು ೪೪೪೮೫ ಕೋಟಿ, ವಿಶೇಷ ಬಂಡವಾಳ ಹೂಡಿಕೆಗೆ ೬೨೮೦ ಕೋಟಿ ಹೀಗೆ ಅನೇಕ ಯೋಜನೆಗಳನ್ನು ನೀಡಿದೆ. ಇದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಹಿಸಲು, ಅವರ ವೈಫಲ್ಯ ಮುಚ್ಚಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ರೋಣ ಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ ಕೇಂದ್ರದ ಯೋಜನೆಗಳನ್ನು ನಮ್ಮ ಕ್ಷೇತ್ರದ ಜನತೆಯ ಅನುದಾನದಲ್ಲಿ ಶೇ೫೦% ಹಣವನ್ನು ಸರ್ಕಾರಿ ಶಾಲೆ, ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ನೀಡಬೇಕು. ನಮ್ಮ ಸಂಸದರಾದ ಬಸವರಾಜ ಬೊಮ್ಮಾಯಿಯವರು ಮಾದರಿ ಸಂಸದರಾಗಬೇಕು ಎನ್ನುವ ಹಂಬಲವಿದೆ. ರೋಣ ಕ್ಷೇತ್ರ ಅತ್ಯಂತ ದೊಡ್ಡದಾದ ವಿಧಾನಸಭಾ ಕ್ಷೇತ್ರವಾಗಿದೆ ಇದರ ಅಭಿವೃದ್ಧಿಗೆ ಒತ್ತನ್ನು ನೀಡಬೇಕಾಗುತ್ತದೆ. ಈ ಬಾರಿ ಕ್ಷೇತ್ರದಿಂದ ಬಹುಮತ ನೀಡಿಲ್ಲ, ಬದಲಾಗಿ ಕಡಿಮೆ ಅಂತರ ನೀಡಿದ್ದು ಕಳವಳ ಇದೆ. ಬಹುತೇಕ ನಾವೂ ಬಹುಮತಗಳ ಅಂತರದಿಂದ ಆರಿಸಿ ತಂದಿದ್ದರೇ ಏನಾದರೂ ಮಾಡಿ ಅಭಿವೃದ್ಧಿ ಮಾಡಿ ಎಂದು ಕೇಲುವ ನೈತಿಕತೆ ಹಾಗೂ ಹಕ್ಕು ಇರುತ್ತಿತ್ತು. ಆದರೆ ದುದೈವ. ಆದರೂ ಬೊಮ್ಮಾಯಿಯವರು ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲವೂ ಸಿದ್ದರಿದ್ದಾರೆ ಎಂದರು‌.

 

ಇದೇ ಸಂದರ್ಭದಲ್ಲಿ ರಾಜೂ ಕುರಡಗಿ, ನಿಂಗಪ್ಪ ಕೇಂಗಾರ, ಬಿ.ಎಮ್.ಸಜ್ಜನರ, ಶಿವಾನಂದ ಮಠದ, ಇಂದಿರಾ ತೇಲಿ, ಡಾ.ಬಿ.ವ್ಹಿ.ಕಂಬಳ್ಯಾಳ, ಎಸ್.ಎಸ್.ವಾಲಿ, ಮುದಿಯಪ್ಪ ಕರಡಿ, ಅಮರೇಶ ಅರಳಿ, ಭಾಸ್ಕರ ರಾಯಬಾಗಿ, ಅಶೋಕ ವನ್ನಾಲ, ಮುತ್ತಣ್ಣ ಕರಿಗೌಡರ, ಬಸವಂತಪ್ಪ ತಳವಾರ, ಉಮೇಶ ಮಲ್ಲಾಪೂರ, ಉಮೇಶ ಚನ್ನು ಪಾಟೀಲ, ವಿಶ್ವನಾಥ ಕುಷ್ಟಗಿ, ಬಾಳನಗೌಡ ಗೌಡರ  ಹಾಗೂ ಗಜೇಂದ್ರಗಡ ಪುರಸಭೆಯ ಸದಸ್ಯರು ಬಿಜೆಪಿ ಕಾರ್ಯಕರ್ತರು ಇದ್ದರು.

ಪೋಟೋ ಶಿರ್ಷಿಕೆ : ರೋಣ ಮತಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ ಗೃಹ ಕಛೇರಿಯ ಸಭಾ ಭವನದಲ್ಲಿ ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕರ್ತರಿಗೆ ಹಾಗೂ ಮತದಾರರರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.


Share News

Related Articles

Leave a Reply

Your email address will not be published. Required fields are marked *

Back to top button