
ಪೌರ ಕರ‍್ಮಿಕರು ನಿಜವಾದ ಕಾಯಕ ಯೋಗಿಗಳು-ಮಹೇಶ ನಿಡಶೇಸಿ
ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್
ನರೇಗಲ್ಲ ::
ಮಳೆ, ಗಾಳಿ, ಚಳಿ, ಬಿಸಿಲು ಎನ್ನದೆ ಸದಾಕಾಲ ಸರ‍್ವಜನಿಕರ ಸೇವೆಯಲ್ಲಿ ತೊಡಗಿರುವ ಪೌರ ಕರ‍್ಮಿಕರು ನಿಜವಾದ ಕಾಯಕಯೋಗಿಗಳು. ಅವರನ್ನು, ಅವರ ಕರ‍್ಯವನ್ನು ಗೌರವಿಸುವ ಕರ‍್ಯವನ್ನು ಸರ‍್ವಜನಿಕರು ಮಾಡಬೇಕು ಎಂದು ನರೇಗಲ್ಲ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಹೇಳಿದರು.
ಅವರು ರ‍್ನಾಟಕ ರಾಜ್ಯ ಪೌರ ನೌಕರರ ಸಂಘ ಕಚೇರಿ ಚಿತ್ರದರ‍್ಗ ಮತ್ತು ನರೇಗಲ್ಲ ಘಟಕ ಹಾಗೂ ನರೇಗಲ್ಲ ಪಟ್ಟಣ ಪಂಚಾಯತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ೧೩ನೇ ರ‍್ಷದ ಪೌರ ಕರ‍್ಮಿಕ ದಿನಾಚರಣೆ ಕರ‍್ಯಕ್ರಮದಲ್ಲಿ ಮಾತನಾಡಿದರು.
ನಿತ್ಯವೂ ಬೆಳಗಿನ ಜಾವ ಎದ್ದು ಪಟ್ಟಣದ ಪ್ರಮುಖ ಬೀದಿಗಳ ಕಸಗೂಡಿಸಿ, ಓಣಿಗಳಲ್ಲಿನ ಕಸ ತಗೆದು ಸರ‍್ವಜನಿಕರ ಆರೋಗ್ಯದ ಕಡೆಗೆ ಗಮನ ನೀಡುವ ಅವರ ಕರ‍್ಯ ಶ್ಲಾಘನೀಯವಾದುದು. ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಅವರು ಎದೆಗುಂದದೆ ತಮ್ಮ ಕರ‍್ಯವನ್ನು ನರ‍್ವಹಿಸಿ, ನಮ್ಮೆಲ್ಲರ ಜೀವ ಮತ್ತು ಜೀವನವನ್ನು ಕಾಪಾಡಿದ್ದಾರೆ. ಆದ್ದರಿಂದ ಈ ವೇದಿಕೆಯ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಿಡಶೇಸಿ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಶಿವಾನಂದ ಗೋಗೇರಿ ಸರ‍್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕರ‍್ಮಿಕರ ಕಾಯಕ ದೊಡ್ಡದು. ಅವರು ಎಂದಿಗೂ ತಮ್ಮ ಕಾಯಕದ ಬಗ್ಗೆ ನಿರಾಸಕ್ತಿಯನ್ನು ತೋರಿಸಬಾರದು. ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವ ಮೂಲಕ ಸರ‍್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಸರ‍್ವಜನಿಕರೂ ಸಹ ಪೌರ ಕರ‍್ಮಿಕರನ್ನು ರ‍್ಷಕ್ಕೊಮ್ಮೆಯಾದರೂ ಗೌರವಿಸಿ ಸನ್ಮಾನಿಸುವಂತಹ ಕರ‍್ಯವನ್ನು ಮಾಡಬೇಕೆಂದರು.
ವೇದಿಕೆಯ ಮೇಲೆ ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ,ಪೌರ ಕರ‍್ಮಿಕ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ, ಪೌರ ಕರ‍್ಮಿಕ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪಟ್ಟಣ ಪಂಚಾಯತಿ ಸದಸ್ಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕರ‍್ಯರ‍್ಶಿ ಆರೀಫ್‌ಬೇಗ್ ಮರ‍್ಜಾ ನಿರೂಪಿಸಿ, ಸ್ವಾಗತಿಸಿದರು. ಎ.ಎಸ್. ಮೆಣಸಿಗಿ ವಂದಿಸಿದರು. ಸಮಾರಂಭದಲ್ಲಿ ಅನೇಕ ಪೌರ ಕರ‍್ಮಿಕರನ್ನು ಸನ್ಮಾನಿಸಲಾಯಿತು.