
ವಿಧ್ಯಾರ್ಥಿಗೆ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ… !
ಕಾಲಕಾಲೇಶ್ವರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಎದುರು ಪ್ರತಿಭಟನೆ ನಡೆಸುತ್ತಿರುವ ಪಾಲಕರು.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಗಜೇಂದ್ರಗಡ :
ಶಿಕ್ಷಕಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾರೆಂದು ಆರೋಪಿಸಿ ಪಾಲಕರು ಶಾಲೆಗೆ ಬೀಗ ಜಡಿದ ಘಟನೆ ಬುಧವಾರ ಕಾಲಕಾಲೇಶ್ವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವಿಜಯ ಪರಸಪ್ಪ ಕನ್ಯಾಳ (7) 2ನೇ ತರಗತಿ ಓದುವ ವಿದ್ಯಾರ್ಥಿಗೆ ಶಿಕ್ಷಕಿ ಆರ್.ವಿ.ಬಾದಾಮಿ ಮನ ಬಂದಂತೆ ಥಳಿಸಿದ್ದರಿಂದ ಮಗುವಿನ ಬೆನ್ನಿಗೆ ಬಾಸುಂಡೆ ಬಂದಿದೆ ಎಂದು ಶಾಲೆಯಿಂದ ಮನೆಗೆ ಹೋದ ಬಾಲಕ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪಾಲಕರು, ಗ್ರಾಮಸ್ಥರು ಮಗುವಿನ ಸಮೇತ ಶಾಲೆಗೆ ಗಾಯಗೊಂಡಿರುವ ಬಾಲಕ ಪಾಲಕರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಆರ್‌ಪಿ ಶ್ರೀಧರ ಯಂಕಚಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ಮನವೊಲಿಸಿದರು. ಜತೆಗೆ ಶಿಕ್ಷಕಿಯನ್ನು ಬೇರೆ ಕಡೆ ನಿಯೋಜಿಸುವ ಭರವಸೆ ನೀಡಿದರು.
ಬಾಕ್ಸ..
ಕಾಲಕಾಲೇಶ್ವರ ಗ್ರಾಮದಲ್ಲಿನ ಘಟನೆ ಕುರಿತು ಮಾಹಿತಿಯನ್ನು ಪೋನಿನ ಮೂಲಕ ಪಡೆದಿದ್ದೇನೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಆರ್.ವಿ. ಬದಾಮಿ ಅವರು ವಿದ್ಯಾರ್ಥಿಗೆ ಹೊಡೆದಿರುವುದು ಗಮನಕ್ಕೆ ಬಂದ ತಕ್ಷಣ ಸಿಆರ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಿ, ವರದಿಗೆ ಸೂಚಿಸಿದ್ದೇನೆ. ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ. ಶಿಕ್ಷಕಿಯಿಂದ ಬರುವ ಉತ್ತರ ಹಾಗೂ ಸಿಆರ್‌ಪಿ ಅವರ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
——–
ಆರ್.ಎನ್. ಹುರುಳಿ
ಬಿಇಒ ರೋಣ.