ಗದಗಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಧಾರವಾಡರಾಜಕೀಯರಾಜ್ಯ ಸುದ್ದಿವಿಡಿಯೋಗಳುಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ವಿರೋಧ ಪಕ್ಷದ ಕೊಠಡಿ ಕೇಳುತ್ತಿರುವುದು ಹಾಸ್ಯಾಸ್ಪದ: ಮುರ್ತುಜಾ ಡಾಲಾಯತ
ವಿರೋಧ ಪಕ್ಷದ ಕೊಠಡಿ ಕೇಳುತ್ತಿರುವುದು ಹಾಸ್ಯಾಸ್ಪದ: ಮುರ್ತುಜಾ ಡಾಲಾಯತ.
ನಾಯಕನಿಲ್ಲದೆ ನಾಯಕನ ಕೊಠಡಿ ಕೇಳುತ್ತಿರುವ ಬಿಜೆಪಿ ನಾಯಕರು: ಮುರ್ತುಜಾ ಡಾಲಾಯತ.
ಜನಧ್ವನಿ ಸುದ್ದಿಮೂಲ ಗಜೇಂದ್ರಗಡ:
“ಪುರಸಭೆಯ ಬಿಜೆಪಿ ಸದಸ್ಯರಲ್ಲಿ ಅಧಿಕೃತವಾಗಿ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದೇ ಪುರಸಭೆಯಲ್ಲಿ ವಿರೋಧ ಪಕ್ಷದ ಕೊಠಡಿ ಕೇಳುತ್ತಿರುವುದು ಹಾಸ್ಯಾಸ್ಪದ. ಪುರಸಭೆ ವಿಪಕ್ಷ ನಾಯಕನಿಗೆ ಕೊಠಡಿ ಕೊಡಬೇಕು ಎನ್ನುವುದು ಪುರಸಭೆ ಕಾಯ್ದೆಯಲ್ಲಿಲ್ಲ. ಅಲ್ಲದೇ ವಿಪಕ್ಷ ನಾಯಕನ ಕೊಠಡಿ ಕೊಡಿ ಎಂದು ಪುರಸಭೆ ಸದಸ್ಯರು ಕೇಳಬೇಕು,ಆದರೆ ಬಿಜೆಪಿ ಪಕ್ಷದ ನಾಯಕರು ಧರಣಿಯಲ್ಲಿ ಪಾಲ್ಗೊಂಡು ಕೇಳುತ್ತಿರುವುದು ಅಸಮಂಜಸ. ಗಜೇಂದ್ರಗಡ ದಲ್ಲಿ ಬಿಜೆಪಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.” ಎಂದು ಪುರಸಭೆ ಸದಸ್ಯಮುರ್ತುಜಾ ಡಾಲಾಯತ ಪತ್ರಿಕಾ ಪ್ರಕಟಣೆ ನೀಡಿದರು.