ಅಂತಾರಾಷ್ಟ್ರೀಯಆರೋಗ್ಯ ಇಲಾಖೆಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಚಿರತೆ ದಾಳಿಚುನಾವಣಾ ಬಾಂಡ್‌ ಅಕ್ರಮಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳು

ಮಾನವೀಯತೆಯ ಮೆರೆದ ಲೋಕಪ್ಪ‌ ರಾಠೋಡ : ಪೋಲಿಸ್ ಇಲಾಖೆಯಿಂದ ಶ್ಲಾಘನೆ

Share News

ಮಾನವೀಯತೆಯ ಮೆರೆದ ಲೋಕಪ್ಪ‌ ರಾಠೋಡ : ಪೋಲಿಸ್ ಇಲಾಖೆಯಿಂದ ಶ್ಲಾಘನೆ.

ಗಜೇಂದ್ರಗಡ:

ಹಾದಿ ಬೀದಿಯಲ್ಲಿ ಒಂದು ರೂಪಾಯಿ ಕಂಡರು ಅದನ್ನು ಜೇಬಿಗೆ ಹಾಕಿಕೊಳ್ಳುವ ಸಮಾಜದಲ್ಲಿ ನಾವಿದ್ದಾಗ ಅಂತಹ ಸಮಾಜದಲ್ಲಿಯೂ ಪರರ‌‌ ಸ್ವತು ಪಾಶಾಣಕ್ಕೆ ಸಮಾನ ಎನ್ನುವ ಮಾತಿನಂತೆ ವಾಣಿಜ್ಯ ನಗರದ ಗಣ್ಯ ವ್ಯಾಪಾರಿಗಳ ಲೋಕಪ್ಪ ಲಾಲಪ್ಪ ರಾಠೋಡ ಅವರು ದಾರಿಯಲ್ಲಿ ಬಿದ್ದಿದ ಸು.1 ಲಕ್ಷ 40 ಸಾವಿರ ಮೌಲ್ಯದ ವಸ್ತುಗಳನ್ನು ವಾರಸುದಾರಿಗೆ ತಲುಪಿಸಿರುವ ಮಾನವೀಯ ಮೌಲ್ಯದ ಘಟನೆ ಮಾದರಿಯ ಸ್ಟೋರಿ ಇದಾಗಿದೆ.

ಏನಿದು ಘಟನೆ:

ನಗರದಲ್ಲಿನ ರೋಣ ರಸ್ತೆಯಲ್ಲಿನ ಸೇವಾಲಾಲ ಕಲ್ಯಾಣ ಮಂಟಪದ ಹತ್ತಿರ ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರ ಮಾಡಿಕೊಂಡು ಇರುತ್ತಿದ್ದ ಲೋಕಪ್ಫ ರಾಠೋಡ ಅವರಿಗೆ ದಿನಾಂಕ: 05.03.2025 ರಂದು ಸಾಯಂಕಾಲ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸೂಡಿ ಗ್ರಾಮದ ಪರಶುರಾಮ ಧಾರವಾಡ ರವರು ತಮ್ಮ ಮಗಳನ್ನು ಬೈಕ್ ಮೇಲೆ ಕರೆದುಕೊಂಡು ಗಜೇಂದ್ರಗಡ ದಿಂದ ಸೂಡಿ ಗ್ರಾಮಕ್ಕೆ ಹೋಗುವಾಗ ಒಂದು ಬ್ಯಾಗ್ ಕಳೆದುಕೊಂದಿದ್ದರು, ನಂತರ ಗಜೇಂದ್ರಗಡ ಪೊಲೀಸ್ ನವರು ನಿನ್ನೆಯಿಂದ ಹುಡುಕುತ್ತಿದ್ದಾಗ ಸಾರ್ವಜನಿಕ ಸಹಕಾರದಿಂದ ವರ್ಣೆಕರ ರೆಸಿಡೆನ್ಸ್ ಎದುರುಗಡೆ ಇರುವ ಲೋಕಪ್ಪ ತಂದೆ ಲಾಲಪ್ಪ ರಾಥೋಡ್ ಇವರಿಗೆ ಸಿಕ್ಕಿದ್ದು ಇವರು ಇದನ್ನು ಗಜೇಂದ್ರಗಡ ಪೊಲೀಸ್ ಠಾಣೆಗೆ ಒಪ್ಪಿಸಿದರು, ಆ ಬ್ಯಾಗಿನಲ್ಲಿ ಅಂದಾಜು 15 ಗ್ರಾಂ ಚಿನ್ನದ ಆಭರಣಗಳು, 200 ಗ್ರಾಂ ಬೆಳ್ಳಿ ಆಭರಣಗಳಿದ್ದವು. ಅವುಗಳನ್ನು ಸು. 145000 ರೂಪಾಯಿಯಂದು ಅಂದಾಜಿಸಲಾಗಿದ್ದು, ಆ ಬ್ಯಾಂಗನ್ನು ಲೋಕಪ್ಪ ರಾಠೋಡರವರು ಮರಳಿ ಒಪ್ಪಿಸಿದ್ದಕ್ಕೆ ಗದಗ ಜಿಲ್ಲಾ ಪೊಲೀಸ್, ಗಜೇಂದ್ರಗಡ ಪೋಲಿಸ್ ಠಾಣೆಯ ಪಿ.ಎಸ್.ಐ ಮತ್ತು ಅಧಿಕಾರಿ ಸಿಬ್ಬಂದಿ ವರ್ಗದವರು ಮತ್ತು ಕಳೆದುಕೊಂಡವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಒಟ್ಟಿನಲ್ಲಿ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಗಳು ಸಿಗುವುದು ತುಂಬಾ ವಿರಳ ಇಂತಹ ವ್ಯಕ್ತಿಗಳ ತರಹ ಸಮಾಜವು ಕೂಡಾ ಸುಧಾರಣೆಯಾದರೆ ಮನುಕುಲ ಸುಧಾರಣೆ ಆಗುತ್ತದೆ ಎನ್ನುವುದು ಬುದ್ದಿಜೀವಿಗಳ ಮಾತಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button