
ಕಲುಷಿತವಾಗುತ್ತಿರುವ ವಾತಾವರಣ ತಡೆಗಟ್ಟಲು ಸಸಿ ನೆಟ್ಟು ಬೆಳೆಸಬೇಕು: ಸವಿತಾ ಶ್ರೀಧರ ಬಿದರಳ್ಳಿ.
ರೋಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಜಿ.ಎಸ್.ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ಯ ಕಾರ್ಯಕ್ರಮ.
ಕಲುಷಿತವಾಗುತ್ತಿರುವ ವಾತಾವರಣ ತಡೆಗಟ್ಟಲು ಸಸಿ ನೆಟ್ಟು ಬೆಳೆಸಬೇಕು: ಸವಿತಾ ಶ್ರೀಧರ ಬಿದರಳ್ಳಿ.
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎನ್ನುವುದು ಯಾರು ಮರೆಯಬಾರದು ಎಂದು ಪುರಸಭೆ ಉಪಾಧ್ಯಕ್ಷೆ ಸವಿತಾ ಶ್ರೀಧರ ಬಿದರಳ್ಳಿ ಹೇಳಿದರು.
ನಗರದ ಜೆ.ಟಿ.ಪಿ.ಎಸ್.ಶಾಲೆಯಲ್ಲಿ
ರೋಣ ಮತಕ್ಷೇತ್ರದ ಜನಪ್ರೀಯ ಶಾಸಕರು, ದಾಖಲೆ ಮಟ್ಟದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮಾಡಿ, ರೈತರ ಏಳಿಗೆಗಾಗಿ ಟೊಂಕಕಟ್ಟಿ ನಿಂತ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಪಾಟೀಲ ಅವರ ೭೮ ನೇ ಜನ್ಮ ದಿನದ ಅಂಗವಾಗಿ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಕಲುಷಿತವಾಗುತ್ತಿರುವ ವಾತಾವರಣ ತಡೆಗಟ್ಟಲು ಎಲ್ಲರೂ ಸಸಿ ನೆಟ್ಟು ಬೆಳೆಸಬೇಕು. ಗಿಡ ಮರಗಳ ನಾಶದಿಂದ ಪರಿಸರದ ಸಮತೋಲನದಲ್ಲಿ ಎರುಪೆರಾಗುತ್ತದೆ ಎಂದರು
ಬಳಿಕ ಕಾಂಗ್ರೆಸ್ ಯುವ ಮುಖಂಡ ಅಪ್ಪು ಮತ್ತಿಕಟ್ಟಿ , ಶಿವರಾಜ ಘೋರ್ಪಡೆ ಮಾತನಾಡಿ ಪರಿಸರವನ್ನು ಬೆಳೆಸಿ ಪೋಷಣೆ ಮಾಡಿ ಉಳಿಸಿಕೊಳ್ಳುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು. ಅಂತಹ ಹೃದಯವಂತಿಕೆ ಇರುವ ನಮ್ಮ ಶಾಸಕರ ಜನ್ಮ ದಿನದಂದು ನಾವೆಲ್ಲಾ ಸಸಿ ನೆಡುವ ಕಾರ್ಯಕ್ರಮವು ಮಾಡಿದ್ದು ನಿಜಕ್ಕೂ ಮುಂದಿನ ಯುವ ಪೀಳಿಗೆಗೆ ಮಾದರಿ ಎಂದರು.
ನಗರದಲ್ಲಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಇನ್ನೂ ಇದೇ ಸಂದರ್ಭದಲ್ಲಿ ಸುಭಾಷ್ ಮ್ಯಾಗೇರಿ,ಮುದಿಯಪ್ಪ ಮುಧೋಳ,ಎಚ್.ಎಸ್.ಸೊಂಪೂರ, ಮುರ್ತುಜಾ ಡಾಲಾಯತ, ಸಿದ್ದಪ್ಪ ಬಂಡಿ, ಶ್ರೀಧರ ಬಿದರಳ್ಳಿ,ರಫೀಕ ತೋರಗಲ್ಲ, ರಾಜೂ ಸಾಂಗ್ಲೀಕರ್, ಯಲ್ಲಪ್ಪ ಬಂಕದ, ಶರಣಪ್ಪ ಚಳಗೇರಿ, ಸಿದ್ದು ಗೊಂಗಡಶೆಟ್ಟಿಮಠ,ಕನಕಪ್ಪ ಕಲ್ಲೊಡ್ಡರ, ಬಸಯ್ಯ ಕಲ್ಮಂಗಿಮಠ,ಶಿವು ಚವ್ಹಾಣ, ಪ್ರಕಾಶ ಕಲ್ಗುಡಿ, ಕಲ್ಲಪ್ಪ ರಾಮಜಿ, ಹನಮಂತ ಕುರಿ, ಪ್ರಕಾಶ ದಿವಾಣದ ಸೇರಿದಂತೆ ಅನೇಕರು ಇದ್ದರು.