
ಶಾಲೆ ಪಾದಾಚಾರಿ ರಸ್ತೆ, ಮೈದಾನದಲ್ಲಿ ನೀರು : ಶಿಥಿಲಾವಸ್ತೆಗೊಂಡ ಕಟ್ಟಡ.
- ಶಾಲೆ ಪಾದಾಚಾರಿ ರಸ್ತೆ, ಮೈದಾನದಲ್ಲಿ ನೀರು : ಶಿಥಿಲಾವಸ್ತೆಗೊಂಡ ಕಟ್ಟಡ.
ಗಜೇಂದ್ರಗಡ:
ಸತತವಾಗಿ ಸುರಿಯುತ್ತಿರುವ ಮಳೆಯೆ ಎಲ್ಲೆಂದರಲ್ಲಿ ಮನೆಗಳು ಬಿದ್ದಿರುವುದು ಕೇಳಿದ್ದೇವೆ. ಆದರೆ ಈ ಸರ್ಕಾರಿ ಶಾಲೆಯಲ್ಲಿ ಮಳೆಯಾದರೆ ಸಾಕು ಶಾಲೆಯಲ್ಲಿನ ಮೈದಾನದಲ್ಲಿ, ಕಟ್ಟಡದಲ್ಲಿ, ಪಾದಚಾರಿಗಳ ರಸ್ತೆಯ ತುಂಬೆಲ್ಲಾ ನೀರೋ ನೀರೋ.
ಶತಮಾನದ ಶಾಲೆಯಂದೆ ಖ್ಯಾತಿ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಮ್.ಸಿ.ಎಸ್.ನಂ೧ ರಲ್ಲಿನ ನೀರಿನ ಕಥೆ ಇದಾಗಿದೆ.
ಈ ಶಾಲೆಯಲ್ಲಿ ನೂರಾರು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಳೆ ಬಂದಾಗ ವಿಧ್ಯಾರ್ಥಿಗಳು ತರಗತಿಯ ತೊರೆದು ತರಗತಿಯ ಮುಂಭಾಗದಲ್ಲಿ ನಿಲ್ಲುವುದು ಸಹಜ. ಅಂತಹ ತರಗತಿಯ ಮುಂಭಾಗದಲ್ಲಿ ಹಾಕಿರುವ ಸ್ಲಾಬ್( ಕಾಂಕ್ರೀಟ್) ಮಳೆಗೆ ಬಿದ್ದಿದ್ದು ಮುಂದೆ ಅಪಘಾತಕ್ಕೆ ಕಾರಣವಾಗಬಹುದು ಎನ್ನುವ ಆಂತಕ ಪಾಲಕರಲ್ಲಿ ಮೂಡಿದೆ.
ನಗರದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆ ಇದಾಗಿದ್ದು. ಇದರ ಸ್ಥಿತಿ ಹೀಗೆ ಆದರೆ ಮಕ್ಕಳ ಸುರಕ್ಷಿತೆಗೆ ಹೇಗೆ ಏನು? ಮಕ್ಕಳನ್ನು ಶಾಲೆಗೆ ಕಳುಹಿಸುವುದು ಆದರೂ ಹೇಗೆ? ಎನ್ನುವ ಪ್ರಶ್ನೆಗಳು ಪಾಲಕರಲ್ಲಿ ಮೂಡಿವೆ.
ಒಟ್ಟಿನಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸಿ ಶತಮಾನದ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಾಗಿದೆ ಎನ್ನುವುದು ಪ್ರಜ್ಞಾವಂತ ಪ್ರಜೆಗಳ ಅಭಿಪ್ರಾಯವಾಗಿದೆ.