
ಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಮೊಹರಂ ಹಬ್ಬದ ಹಿನ್ನಲೆ ಅಲಿಮೌಲಾಲಿ ದೇವರ ಕುರಿತು ಭಕ್ತಿ ಗೀತೆ ಬಿಡುಗಡೆ.
ಮೊಹರಂ ಹಬ್ಬದ ಹಿನ್ನಲೆ ಅಲಿಮೌಲಾಲಿ ದೇವರ ಕುರಿತು ಭಕ್ತಿ ಗೀತೆ ಬಿಡುಗಡೆ.
ಗಜೇಂದ್ರಗಡ:
ಕೋಟೆನಾಡು ಗಜೇಂದ್ರಗಡ ಪಟ್ಟಣವೂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಮೊಹರಂ ಹಬ್ಬವಂತೂ ಭಾವೈಕ್ಯತೆಯ ಹಬ್ಬವೆಂದೇ ಬಿಂಬಿತವಾಗಿದೆ. ಈ ಹಿನ್ನಲೆಯಲ್ಲಿ ನಗರದ ಅಲಿ ಮೌಲಾಲಿ ಅಲೈದೇವರ ಕುರಿತು ಕಲಾಲ ಓಣಿಯ ಯುವಕರು ಸತ್ಯ ಘಟನೆಗಳಕುರಿತು ಹಾಡನ್ನು ರಚನೆ ಮಾಡಿ ಬಿಡುಗಡೆಗೊಳಿಸಿದ್ದಾರ.
ನಗರದ ಕಿರಣ ಕಲಾಲ ಈ ಗೀತೆಗೆ ಸಾಹಿತ್ಯ ಬರೆದಿದ್ದು, ಗದಗ ಯುವಕ ಚನ್ನಪ್ಪ ಎಲಿ ಶ್ರುಶಾವ್ಯವಾಗಿ ಗೀತ ಗಾಯನವನ್ನು ಮಾಡಿದ್ದು, ಈ ಗೀತೆಗೆ ಉದಯ ಕಲಾಲ ವಿಡಿಯೋ ಎಡಿಟಿಂಗ್ ಮಾಡಿದ್ದು, ಧ್ವನಿ ಮುದ್ರಣವನ್ನು ಬಾಗಲಕೋಟೆಯ ಆರ್.ಕೆ.ರೆಂಕಾಡಿAಗ್ ಸ್ಟೂಡಿಯೋದಲ್ಲಿ ಮಾಡಲಾಗಿದ್ದು ಇದಕ್ಕೆ ವಿಶ್ವನಾಥ ಚಂದುಕರ ಪ್ರೋತ್ಸಾಹ ನೀಡಿದ್ದಾರೆ.
ಇಂತಹ ಭಕ್ತಿ ಗೀತೆ ರಚನೆ ಮಾಡಿದ್ದ ಯುವಕರಿಗೆ ಕಲಾಲ ಖಾಟಿಕ ಸಮಾಜದ ಹಿರಿಯರು, ಯುವಕ ಮಂಡಳದವರು ಸಂಪೂರ್ಣ ಪ್ರೋತ್ಸಾಹ ನೀಡಿ ಶ್ಲಾಘನೆಯನ್ನು ವ್ಯಕ್ತ ಪಡಿಸಿದರು.