ರಾಜ್ಯ ಸುದ್ದಿ

ಸಂಗೀತ ಕಲೆ ಸಾಹಿತ್ಯ, ಲಲಿತಕಲೆಗಳಿಂದ ಮಾನಸೀಕ ನೆಮ್ಮದಿ ಸಾಧ್ಯವಾಗುತ್ತದೆ:ಹೆಬ್ಬಾಳಶ್ರೀಗಳು

Share News

ಸಂಗೀತ ಕಲೆ ಸಾಹಿತ್ಯ, ಲಲಿತಕಲೆಗಳಿಂದ ಮಾನಸೀಕ ನೆಮ್ಮದಿ ಸಾಧ್ಯವಾಗುತ್ತದೆ:ಹೆಬ್ಬಾಳಶ್ರೀಗಳು

*ಗದಗವಾಣಿ ಗಾನ ಕೋಗಿಲೆ ಕರೋಕೆ ಸೆಮಿಫೈಲ್ ಸ್ಪರ್ಧೆಗೆ ಗಂಗಾವತಿಯಲ್ಲಿ ಚಾಲನೆ

ಜನಧ್ವನಿ ಕನ್ನಡ  ಸುದ್ದಿಮೂಲ
ಗಂಗಾವತಿ:

ಕಲೆ, ಸಂಗೀತ, ಸಾಹಿತ್ಯ ಸೇರಿ ಲಲಿತ ಕಲೆಗಳು ಮನುಷ್ಯನಿಗೆ ಮಾನಸೀಕ ಒತ್ತಡ ಕಡಿಮೆ ಮಾಡಿ ನೆಮ್ಮದಿ ನೀಡುವ ಸಾಧನಗಳಾಗಿದ್ದು ಮಕ್ಕಳಲ್ಲಿ ಈ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಅಗತ್ಯವಾಗಿದೆ. ಭಾರತೀಯ ಸಿನೆಮಾ ಕ್ಷೇತ್ರಕ್ಕೆ ಕನ್ನಡ ಸಿನೆಮಾ ಕ್ಷೇತ್ರದ ಕೊಡುಗೆ ಅಪಾರ ಎಂದು ಹೆಬ್ಬಾಳ ಬ್ರಹ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

 

ಅವರು ನಗರ ಕನ್ನಡ ಸಾಹಿತ್ಯ ಭವನದಲ್ಲಿ ಗದಗವಾಣಿ ಕರೋಕೆ ಸೆಮಿಫೈಲ್ ಸ್ಪರ್ಧೆಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಏಕಾಗ್ರತೆ ಬರಲು ಸಂಗೀತ, ಸಾಹಿತ್ಯದ ಕಡೆಗೆ ಒಲವು ಬರುವಂತೆ ಪಾಲಕರು, ಶಿಕ್ಷಕರು ಗಮನ ಹರಿಸಬೇಕು. ಗದಗವಾಣಿಯ ಮೂಲಕ ಸಿನೆಮಾ ಹಾಡುಗಳನ್ನು ಕರೋಕೆ ಪದ್ದತಿಯಂತೆ ಉತ್ತರ ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಡಿಸೆನ್ ಮಾಡುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಗಂಗಾವತಿಯಲ್ಲಿ ಸೆಮಿಫೈನಲ್ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧೆಗೆ ಆಯ್ಕೆ ಕಾರ್ಯ ನಡೆದಿದ್ದು ಯಶಸ್ವಿಯಾಗಲಿ ಎಂದರು.

ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ತಾತಾ, ಪತ್ರಕರ್ತ ವೈ.ಬಿ.ಜೂಡಿ,ಪ್ರಧಾನ ಸಂಪಾದಕ ಮಂಜುನಾಥ ರಾಠೋಡ್, ಪತ್ರಕರ್ತರ ಸಂಘದ ಅಧ್ಯಕ್ಷ ಇಂಗಳಗಿ ನಾಗರಾಜ, ಮುಖ್ಯಶಿಕ್ಷಕ ಶ್ರೀನಿವಾಸ ನಾಯ್ಡು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಕಲ್ಮಠ, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕರೋಕೆ ಕಲಾವಿದರಾದ ಜಗನ್ನಾಥ, ಶಂಭಣ್ಣ ದೊಡ್ಮನಿ, ಪಂಪಾಪತಿ ಇಂಗಳಗಿ, ವಿಜಯಲಕ್ಷಿö್ಮ ಹಿರೇಮಠ, ಇಂದ್ರೇಶ ಕೊಳ್ಳಿ, ಡಾ.ನಾಗರಾಜ ಕಂಬ್ಳಿ, ಪತ್ರಕರ್ತ ಶರಣಯ್ಯ ಕರಡಿಮಠ, ಡಾ.ಶರಣಪ್ಪ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕರೋಕೆ ಸ್ಪರ್ಧಾರ್ತಿಗಳಿದ್ದರು.

ನಿರ್ಣಯಕರಾಗಿ ಹಿರಿಯ ಸಂಗೀತ ಕಲಾವಿದರಾದ ಜಾಕೀರ ಹುಸೇನ, ಶರಣಪ್ಪ, ಪಲ್ಲವಿ, ಕಿರಣ್ ನಿಡಗುಂದಿ, ಕಿರಣ್ ಮಿಸ್ಕಿನ್ ಕಾರ್ಯನಿರ್ವಹಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button