ರಾಜ್ಯ ಸುದ್ದಿಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಟ್ರೆಂಡಿಂಗ್ ಸುದ್ದಿಗಳುರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು
ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ; ಕ್ರಾಂತಿಸೂರ್ಯ ಜೈಭೀಮ್ ಸೇನೆಯಿಂದ ಅಂಬೇಡ್ಕರ ಸ್ಮರಣೆ
Dr. Baba Saheb Ambedkar : ಅಂಬೇಡ್ಕರರ ಹಾದಿಯಲ್ಲಿ ಮುನ್ನಡೆಯಿರಿ: ಆಮಿರ್ ಅಶಅರೀ ಬನ್ನೂರು
ಗಜೇಂದ್ರಗಡ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಸಮಾನತೆ, ಅಸಹಿಷ್ಣುತೆ ಮತ್ತು ಅಸ್ಪ್ರಶ್ಯತೆ ಸೇರಿದ ಅನೇಕ ಸಾಮಾಜಿಕ ತಲ್ಲನಗಳ ವಿರುದ್ಧ ಸದಾ ಹೋರಾಡುತ್ತಲ್ಲಿದ್ದ ಮತ್ತೊಂದು ದನಿಯಾಗಿದ್ದಾರೆ ಎಂದು ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ, ಕವಿ ಆಮಿರ್ ಅಶಅರೀ ಬನ್ನೂರು ಅಭಿಪ್ರಾಯಪಟ್ಟರು.
ಪಟ್ಟಣದ ಬಿಎಸ್‌ಎಸ್ ಪ್ರಥಮ ದರ್ಜೇ ಕಾಲೇಜಿನಲ್ಲಿ ಶುಕ್ರವಾರ ಕ್ರಾಂತಿಸೂರ್ಯ ಜೈಭೀಮ್ ಸೇನೆ ಹಾಗೂ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಹೋರಾಟ ಮತ್ತು ಸಾಮಾಜಿಕ ನಿಲುವುಗಳು ಸಾರ್ವಕಾಲಿಕವಾಗಿದೆ. ಅವರಲ್ಲಿದ್ದ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ ಮತ್ತು ದೇಶದ ಪ್ರಗತಿಗೆ ಅವರಲ್ಲಿದ್ದ ಚಿಂತನೆಗಳನ್ನು ನಾವುಗಳು ವಿಮರ್ಶೆಗೆ ಗುರಿಪಡಿಸಿರುವುದೇ ವಿರಳ. ಬಾಹ್ಯವಾಗಿ ಅಂಬೇಡ್ಕರ್ ವಾದಿಯಾಗಿ ಆಂತರಿಕವಾಗಿ ಶುನ್ಯವಾದಿಗಳೇ ಹೆಚ್ಚಿದ್ದು, ಅವರ ತತ್ವಾದರ್ಶ ಮೈಗೂಡಿಸಿಕೊಂಡು ಅಂಬೇಡ್ಕರರ ಹಾದಿಯಲ್ಲಿ ಮುನ್ನಡೆಯಬೇಕು. ಅವರು ತಂದು ಕೊಟ್ಟ ಸಂವಿಧಾನದ ರಕ್ಷಕರಾಗಬೇಕು ಎಂದು ಹೇಳಿದರು.
ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ ಎಸ್. ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇಂದು ೬೮ನೇ ಪುಣ್ಯತಿಥಿ. ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ ಎಂದರು.
ಪ್ರಾಚಾರ್ಯ ಶ್ರೀ ಮಹೇಂದ್ರ, ಜಿ., ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಅಂಬೇಡ್ಕರ್ ಅವರು ಇಲ್ಲದೇ ಇರುತ್ತಿದ್ದರೆ ದೇಶದಲ್ಲಿ ಇಂದಿಗೂ ಸಹಸ್ರಾರು ಮಂದಿ ನಿತ್ಯ ನರಕವನ್ನು ಅನುಭವಿಸುತ್ತಿದ್ದರು ಅನ್ನೋದು ವಾಸ್ತವ ಸತ್ಯ. ಅಸ್ಪೃಶ್ಯತೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಸಭೆಯಲ್ಲಿ ಮೆಲಕು ಹಾಕಿದರು.
ಇದೇ ಸಂದರ್ಭದಲ್ಲಿ ಸುಭಾನಸಾಬ ಆರಗಿದ್ದಿ, ಪ್ರಕಾಶ ರಾಠೋಡ, ಗಿರೀಶ್ ರಾಠೋಡ, ಫಕೀರಪ್ಪ ನಿಡಗುಂದಿ, ಪ್ರಭು ನಿಡಗುಂದಿ, ಕನಕಪ್ಪ ಕಲ್ಲೋಡ್ಡರ, ಮಂಜುನಾಥ ಕುದರಿಕೋಟಿ, ಮಾರುತಿ ಗೋಂಧಳೆ, ಮುತ್ತು ರಾಠೋಡ, ರವಿ ಗುಗ್ಗಲೋತ್ತರ, ರವಿ ನಿಡಗುಂದಿ, ಶೀತಲ ಓಲೇಕಾರ, ರಮೇಶ ತಳವಾರ, ಡಾ. ಎಂ.ವೈ. ಜೆಟ್ಟೆನ್ನವರ್, ಸಿದ್ದೇಶ್ ಕೆ., ಹನುಮೇಶ ನಾಯಕ, ಹಿತೇಶ್ ಬಿ., ಸೇರಿದಂತೆ ಇತರರು ಇದ್ದರು.